ವಿಷಯಕ್ಕೆ ಹೋಗು

ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಮತ್ಕಾರ ಚಿಂತಾಮಣಿ ہردم ಶೇಷಯ್ಯಾ ಶಯನಮುದಧಿಃವಾಹನಂಪನ್ನ ಗಾರಿಃಸ್ಮಾರ೦ ಸಾರಂ ಸ್ವಗೃಹಚರಿತಂ ದಾರುಭೂತೋ ಮುರಾರಿ: || ಈ ಶ್ಲೋಕವನ್ನು ಉದಹರಿಸುತ್ತಿದ್ದನು. ಇದನ್ನೆಲ್ಲ ಕ್ರಮ ವಾಗಿ ಆಲಿಸಿದ ಕುಟುಂಬಿಯು, ತನ್ನ ಕುಟುಂಬಿನಿಯಂ ಕುರಿತು ಪ್ರ ಯಳೇ ! ಸಂಸಾರಸುಖದ ಸಂದರ್ಭವನ್ನೆಲ್ಲಾ ಲಾಲಿಸಿದೆಯಾ ? ಮರ್ತ್ಯ ನಿಗೆ (ಮನುಷ್ಯನಿಗೆ) ಮುಪ್ಪು ಬಂದಮೇಲೂ, ಮಹಾ ದುಃಖವು ಒದಗಿದಾಗಲೂ, ಪಾಪಭೀತಿಯೂ, ಪರಲೋಕ ದೃಷ್ಟಿಯ ಶಾಸ್ತ್ರ ಗಳಲ್ಲಿ ನಂಬಿಕೆಯ ಧಾರ್ಜನಾಸಕ್ತಿಯೂ, ತೀರ್ಥಕ್ಷೇತ್ರ ಯಾತ್ರೆ ಯಲ್ಲಿ ಅಭಿಲಾಷೆಯ, ಸಂಸಾರದಲ್ಲಿ ವಿರಕ್ತಿಯ ಗುರು ಹಿರಿಯ ರಲ್ಲಿಯೂ ದೇವರಲ್ಲಿ ಭಕ್ತಿಯೂ, ತಾನಾಚರಿಸಿದ ದುರಿತಗಳ ವಿಷಯದಲ್ಲಿ ಪಶ್ಚಾತ್ತಾಪ ರೂ, ತಲೆದೋರುತ್ತವೆ. ಪ್ರಾಯವೂ ಪ್ರಭು ತವೂ, ಐಶ್ವರವೂ, ಆನುಕೂಲ್ಯವೂ, ಇರುವಾಗ ಹೃದಯದೊ ಳಗೆ ಅವಿವೇಕವು ರಾಜ್ಯಭಾರವನ್ನು ನಡೆಸುತ್ತಿರುವುದರಿಂದ ಆಗ ಎಂ ತಹ ಉದಾಹರಣೆಯೆಂಬ ಅಂಜನವನ್ನು ಹಾಕಿದರೂ ಅವನ ಕಣ್ಣಿಗೆ ಮರೆ ಯಾಗಿರುವ ಪರೆಯು ಓರೆಯಾಗುವುದಿಲ್ಲ, ಎಂತಹ ಶಾಸ್ಕೂಪನ್ಯಾ ಸವೆಂಬ ಬೆಳಕನ್ನು ತೋರಿದರೂ ಹೃದಯದ ಅಂಧಕಾರವು ತೊಲಗು ವುದಿಲ್ಲ, ಎಂತಹ ಹಿತೋಪದೇಶವೆಂಬ ಸೂಕವಾದ ಸಲಾಕೆಯನ್ನು ಹಾಕಿದರೂ ಕಿವಿಗಳೊಳಗಣ ಕೊಳೆಯನ್ನು ಕಳೆಯಲಾಗುವುದಿಲ್ಲ, ಆದ ಕಿ ಸರ್ವರೂ ಹೀಗೆಯೇ ಇರುವರೆಂದು ಹೇಳಲಾಗದು, ಮರುಭೂಮಿ ಯಲ್ಲಿ ಜಲಾಶಯವಿದ್ದಂತೆ ಕೆಲವರು ಮೊದಲೇ ದೂರದೃಷ್ಟಿಯುಳ್ಳವ ರಾಗಿ ವಿವೇಕಶಾಲಿಗಳಾಗಿರುವುದೂ ಉಂಟು, ಇಂಥವರು ಮೇಲೆ ಹೇಳಿದ ದೋಪಗಳಿಗೆ ತಮ್ಮ ಹೃದಯದಲ್ಲಿ ಅವಕಾಶವನ್ನು ಕೊಡುವುಲ್ಲ ನಮ ಗೆ ಸಂಸಗದ ಸುಖವು ಇಷ್ಟೇ ಸಾಕಲ್ಲವೆ ? ಎನಲು, ಆ ಆರೈಯಾದ ಭಾ ರೈಯು ಪೂಜ್ಞನಾದ ವಲ್ಲಭನೇ, ನನಗೆ ಪುತ್ರಲಾಭವು ಬೇಡ, ಪರ ಲೋಕ ಲಾಭವಾದರೆ ಸಾಕು, ನಾವಿನ್ನು ಗಂಗೆಯಲ್ಲಿ ಮಿಂದು ಪರಮೇ ಈರನನ್ನು ಪ್ರಾರ್ಥಿಸಿ ತಪಸ್ಸಿಗಾಗಿ ಹೋಗೊಣ ಎನಲು ಶಾಂತವಾದ