೨೬ ವಿದ್ಯಾನಂದ ++++++++++++++••••••••••••vvvv wxx •°** 1 ಆಕುಟುಂಬಿಯು ಸತಿಯಮಾತಿಗೆ ಸಂತೋಷಿಸಿ, ತನ್ನ ಮನಸ್ಸಿನಲ್ಲಿ ಉಂ ಟದ ಚಿಂತಯನ್ನ ಕುರಿತು ಎಲ್ಲ ಮಾತೆಯೆ ! ನೀನೇ ರತ್ನ, ನಿನ್ನ ಸಾನ್ನಿಧ್ಯದಲ್ಲಿಯೇ ಪ್ರಕಾಶ ವಿರುವುದು, ಅಥವಾ ಸೀನೇ ವಿದ್ಯೆ, ನಿನ್ನ ಸಹಾಯದಿಂದಲೇ ಆನಂದವುಂಟಾಗುವುದು ಎಂದು ಜಾಹ್ನವಿಯಲ್ಲಿ ಸನಮಾಡಿ ಜಗದೀಶರನಿಗೆ ವಂದಿಸಿ ವಿಷಯಾಸಕ್ತಿಯನ್ನು ತೊರೆದು ತಪೋವನವನ್ನು ಕುರಿತು ತೆರಳಿದರು, ಇದರಮೇಲೆ ಮತ.೧ಂದು ವಿಷಯವನ್ನು ಹೇಳುತ್ತೇನೆ ಮನಮುಟ್ಟಿ ಕೇಳು ; ಅದೃಸ್ಮಶಕ್ತಿಯೆಂ ಬುದು ಬಲುದೊಡ್ಡದು, ಅದರ ಆಳವನ್ನು ಕಂಡವರಿಲ್ಲ, ಅದೃಷ್ಟವೆಂದರೆ ನಾವು ಪೂರ್ವಜನ್ಮಗಳಲ್ಲಿ ಆರ್ಜನೆಮಾಡಿದ ಧರಾಧರಗಳು. ಈಗಲೂ ಮುಂದೆಯೂ ನವಗೆ ಏನೇನು ಆಗಬೇಕಾಗಿರುವುದೋ ಅದಕ್ಕೆ ಸರಿ ಯಾಗಿ ನಮಗೆ ಬುದ್ದಿಯನ್ನು ಪೇರಿಸಿ ಉಚಿತವಾದ ಸಹಾಯವನ್ನೂ ಒದಗಿಸಿಕೊಟ್ಟು, ಆಯಾಫಲಗಳು ಉಚಿತಕಾಲದಲ್ಲಿ ನಮಗೆ ಒದಗುವಂತ ಮಾಡುತ್ತವೆ, ಒಬ್ಬ ತಂದೆಗೆ ನಾಲ್ವರು ಮಕ್ಕಳಿದ್ದರೆ ಬುದ್ದಿಯಲ್ಲಿಯೂ ಸ್ವಭಾವದಲ್ಲಿಯೂ, ನಡತೆಯಲ್ಲಿ ಯೂ, ಐಶ್ವರದಲ್ಲಿಯ, ಸಂಸಾರ ಸುಖದಲ್ಲಿಯೂ, ಒಂದೇಸಿಮವಾಗಿರುವುದನ್ನು ಎಲ್ಲಿಯಾದರೂ ಕಂಡು ಅಥವಾ ಕೇಳಿಬಲ್ಲೆಯ? ಒಬ್ಬನು ಎಲ್ಲಕಾಸ್ತ್ರಗಳನ್ನೂ ಓದಿಕೊಂಡಿದ್ದು ಗುರುಹಿರಿಯರು ಸದುಪದೇಶಗಳನ್ನು ಮಾಡುತ್ತಲಿರ್ದರೂ ದುರ್ಮಾರ್ಗ ದಲ್ಲಿ ಪ್ರವರಿಸುತ್ತಾನೆ, ಮತ್ತೊಬ್ಬನು ಶಾಸ್ತ್ರಜ್ಞಾನವಿಲ್ಲದಿದ್ದ ರೂ ಯಾರ ಉಪದೇಶವನ್ನು ಪಡೆಯದಿದ್ದರೂ ಸನ್ಮಾರ್ಗದಲ್ಲಿಯೇ ಇ ರುತ್ತಾನೆ, ಅನೇಕ ತೊಂದರೆಗಳಲ್ಲಿ ಸಿಕ್ಕಿದ ಒಬ್ಬನು ಇನ್ನು ಉಳ ಯುವುದೇ ಇಲ್ಲವೆಂಬ ಸ್ಥಿತಿಯಲ್ಲಿದ್ದು ಯಾರ ಸಹಾಯವೂ ಇಲ್ಲದಿದ್ದರೂ ಹೇಗೆ ಪಾರಾಗುತ್ತಾನ, ಬುದ್ಧಿ ಧನ ಜನ ಮುಂತಾದ ಅನೇಕ ಸಹಾ ಯ ಸಂಪತ್ತಿ ಇದ್ದರೂ ವಿಪತ್ತು ಒಗುವಾಗ ಎಲ್ಲಸಹಾಯವೂ ದೂರವಾ ಗಿ ಕೆಲಸಕ್ಕೆ ಬಾರದೆ ಹೋಗುತ್ತದೆ. ಪ್ರಪಂಚದಲ್ಲಿ ಯಾವ ಕು ಟುಂಬದಲ್ಲಿ ದೋಷವಿಲ್ಲ ? ಹುಟ್ಟದಮೇಲೆ ರೋಗವನ್ನು ಅನುಭವಿಸದಿ ರವವನು ಯಾರು ? ವ್ಯಸನವನ್ನರಿಯದೆ ಸತ್ತವನಾರು ? ಜನನ ಕಾಮೊದಲು ಮರಣದವರೆಗೂ ಸುಖದಲ್ಲಿಯೇ ಇದ್ದವರು ಯಾರು ?
ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೩೩
ಗೋಚರ