ವಿಷಯಕ್ಕೆ ಹೋಗು

ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇy ವಿದ್ಯಾನಂದ.

  • * * * * * * v > « u" - ***ryu

ನಾವು ಕಾಡಿನಲ್ಲಿಯೇ ವಾಸಮಾಡತಕ್ಕವರಾದರೂ ತಕ್ಕಮಟ್ಟಿಗೆ ಲೋ ಕವ್ಯವಹಾರವನ್ನು ಬಲ್ಲವರಾಗಿದ್ದೇವೆ, ಪ್ರಜೆಯಿಂದಲೇ ಪುರುಷನು ಪೂರ್ಣನಾಗುವನೆಂದು ವೇದವು ಹೇಳುತಲಿದೆ, ಪುಂ, ಎಂಬ ನರಕದಿಂದ ಪಿತೃಗಳನ್ನು ಸಾಗಾಣಿಸುವುದರಿಂದ ಪುತ್ರನೆಂದು ಪುತ್ರ ಕಟ್ಟದ ಅವಯ ವಾರ್ಥವನ್ನು ಧರಶಾಸ್ತ್ರವು ತಿಳಿಸುತ್ತದೆ. ಪುತ್ರರಿಲ್ಲದವನಿಗೆ ಪರಗತಿ ಯಿಲ್ಲವೆಂದು ಸ್ಮತಿಯು ಮೊರೆಯಿಡುತಲಿದೆ, ಬ್ರಹ್ಮಚರೈಯಿಂದ ಋಸಿ ರುಣವನ್ನೂ ಯಜ್ಞಾದಿಗಳಿಂದ ದೇವರುಣವನ್ನೂ ಪುತ್ರೋತ್ಪಾದನದಿಂದ ವಿತೃರುಣವನ್ನೂ ಕಡೆಹಾಯಬೇಕೆಂದು ಕೃತಿಯು ಉದಹರಿಸುತ್ತಿದೆ. ಅನಾಯಕವಾದ ರಾಜ್ಯವು ನಾಶವಾಗುತ್ತದೆ ಎಂಬದಾಗಿ ಕಾಮಂದಕಾದಿ ನೀತಿಶಾಸ್ತ್ರಗಳು ಉದಹರಿಸುತ್ತಿವೆ. ಆದಕಾರಣ ನಿನ್ನ ಅನಂತರದಲ್ಲಿ ಈ ರಾಜ್ಯಕ್ಕೆ ನಿನ್ನಂತೆ ಗುಣ ಪರಿಪೂರ್ಣನಾದ ರಾಜನಿಲ್ಲದೆ ಹೋದರೆ ಚಂದ್ರನಿಲ್ಲದ ರಾತ್ರಿ ಯಂತೆಯೂ ಸರಸಿಜವಿಲ್ಲದ ಸರೋವರ ದಂತೆಯ ಕುಂದಣದ ಗೂಡಿಲ್ಲದ ರತ್ನ ದಂತೆಯೂ, ತಾಯಿಲ್ಲದ ಮಕ್ಕಳಂತೆಯೂ ಪುರುಷನಿಲ್ಲದ ಯುವತಿ ಯಂತೆಯೂ ಈರಾಜ್ಯವು ಶೋಭಿಸದೆ ಹೋಗ್ ವುದು, ನಾನು ನಿನ್ನ ವಂಶಕ್ಕೆ ಕುಲ ಕ್ರಮಾಗತನಾದ ಗುರುವಾಗಿದ್ದಾಗ್ಯೂ ನೀನು ಹೀಗೆ ಸಂತತಿ ಹೀನನಾಗಿರುವುದು ಉಚಿತವಲ್ಲ. ಆದಕಾರಣ ನಿನ್ನ ಪ್ರಿಯ ಮಿತ್ರನಾದ ಪ್ರತೀಕಚರಣನ ಅಳಿಯನಾಗಿರುವಮೃಗಕೂಟ ನೆಂಬ ಮುನಿಯ ಸಹಾಯವನ್ನು ಪಡೆದು ನಿನ್ನಿಂದ ಒಂದೆರಡು ದೇವತಾ ರಾಧನಗಳನ್ನು ಮಾಡಿಸಬೇಕೆಂದು ಸಂಕಲ್ಪಿಸಿ ಬಂದಿರುವೆನು. ಶ್ರದ್ದಾ ಭಕ್ತಿಗಳಿಂದ ಆಚರಿಸಿದ ಸತ್ಕಾರವನ್ನು ಪಡೆದ ದೇವತೆಗಳು ಪ್ರಸನ್ನ ರಾಗದೆ ವಿಮುಖ ರಾಗುವುದಿಲ್ಲ, ಆದಕಾರಣ ಈವಿಷಯದಲ್ಲಿ ನೀನು ಸಂಭಾರದಿಂದ ಸಿದ್ಧವಾಗಬೇಕು ಎನಲು ಅಪಾರವಾದ ಆನಂದ ಭರದಿಂದ ಹಿಗ್ಗಿದ ಅವನಿಪಾಲನು ಅಂತರಂಗದಲ್ಲಿ ಆವಿರ್ಭವಿಸಿದ ಆನಂದಾತಿಶಯವನ್ನು ಅಲ್ಲಿಯೇ ಅಣಗಿಸಿ ಕೊಳ್ಳಲು ಅವಕಾಶವಿಲ್ಲದೆ ಅಕ್ಷಿಗಳಲ್ಲಿ ಅಖಂಡ ಧಾರಾ ರೂಪವಾಗಿ ಹೊರಗೆ ಹೊರಟು ಬರುತ್ತಿರುವ ಆನಂದಬಾಷ್ಪ ಪೂರದಿಂದ ಮುನಿ ಪುಂಗವನ ಚರಣಕಮಲಗಳನ್ನು ಅಭಿಷೇಕಿಸಿ ಬದ್ಧಾಂಜಲಿ ಪುಟ ನಾಗಿ ಪ್ರಮೋದ ಭರದಿಂದ ಮೈ ಬೆವರಿ ರೋಮಾಂಚವುಂಟಾಗಿ ಕೊ