೪೪ ವಿದ್ಯಾನಂದ. • - ೪ತು ರಾಜಕಾರವನ್ನು ವಿಚಾರಿಸುತ್ತಿರಲು ದ್ವಾರಪಾಲಕನು ಬಂದು ಇಳೆಯೊಡೆಯನಿಗೆ ಪೊಡಮಟ್ಟು ಎನ್ನೂ ಡೆಯಾ ಯಾರೋ ! ಈರ್ವ ರು ಮುನಿಕುಮಾರರು ಪ್ರಭುಸಂದರ್ಶನಕ್ಕಾಗಿ ಬಂದಿರುವರು, ಎಂದು ಬಿನ್ನ ವಿಸಿ ಆತನ ಅಪ್ಪಣೆ ಯ ಪ್ರಕಾರ ರುಪಿ ಕುಮಾರರನ್ನು ಪ್ರವೇಶ ಮಾಡಿಸ.ನಲ್ಲಿ ಅದು ವರೆಗೆ ಧರಿತ್ರೀಪತಿಯು ಪ್ರೋತ್ರಿಯರನ್ನು ಸೇವಿಸುವ ಅಗ್ನಿ ಹೋತ್ರ ಗೃಹದೊಳಗೆ ಚಿತಾ ಸನದಲ್ಲಿ ವಿನೀತ ವೇಷ ದಿಂದ ಕುಳಿತಿದ್ದು ತಾಪಸಕುಮಾರರನ್ನು ಕಂಡೊಡನೆ ಥಟ್ಟನೆ ಎದ್ದು ತನ್ನ ಗೋತ್ರಿ, ನಾವುಗಳನ್ನುಚ್ಛರಿಸಿ ಅಹ೦ಭೋ ಅಭಿವಾದಯೆ, ಎರಿ ದು ಅಭಿನಂದಿಸಿ ಪ್ರಶಾಂತಗಂಭೀರಸ್ಸರದಿಂದ ಅವರು ಹರಸಿದ ಆಸೀ ರ್ವಚನಗಳನ್ನು ಬಾಗಿದ ಶಿರದಿಂದ ಪರಿಗಹಿಸಿ ಉಚಿತವಾದ ದರ್ಭಾ ಸನದಲ್ಲಿ ಕುಳ್ಳಿರಿಸಿ ಶ್ರೀಯುತರಾದ ಎಲೈ ತಪೋಧನರೇ, ತಮ್ಮ ಚರಣ ನಳಿನರೇಣುವನ್ನು ಮಳೆಯಿಂದ ಲಾಲಿಸಿ ಕೃತಾರ್ಥನಾದೆನು ಮೇಲ್ಮಗಳಿಗೆ ತವರನೆಗಿರುವ ತಮ್ಮಂಥ ತಪೋಜ್ಞಾನವೃದ್ದರು ವಾತ್ಸಲ್ಯವನ್ನಿಟ್ಟು ನನ್ನಂಥವರ ಸದನವನ್ನು ಅಲಂಕರಿಸಿದುದರಿಂದ ನನ್ನ ಪೂರ್ವ ಪುಣ್ಯಲತೆಯು ಮೊದಲಿಂದ ತುದಿಯವರೆಗೂ ಈಗ ಫಲಿಸಿತು, ಸಾಧುಗಳು ಸದನವನ್ನು ಅಲಂಕರಿಸಿದಕೂಡಲೆ ಗೃಹಸ್ಸನ ಪ್ರಾಣಗಳು ಇದಿರೊಳ್ಳುವಂತೆ ಹೊರಗೆ ಹೊರಡುತ್ತವೆ ಹತ್ಯುತ್ಸಾ ನಾಭಿವಾದನಗಳಿ೦ದ ಪುನಃ ಸುಸ್ತಾನವನ್ನು ಪಡೆಯುವುವು, ಎಂಬ ಧರ ಶಾಸ್ತ್ರವಚನವು ಸಟೆಯಲ್ಲ. ನನ್ನ ಮಂದಿರವು ಇಂದು ಸುಂದರವಾ ಯಿತು, ನನ್ನ ಪೂರ ಪುರುಷರು ಧನ್ಯರಾದರು ಮೂರ್ತಿಭವಿಸಿರುವ ಧರ ಜ್ಞಾನಗಳಂತಿರುವ ತಮ್ಮ ಸಂದರ್ಶನದಿಂದ ಆನಂದ ಪರವಶನಾಗಿರುವೆನು. ತಮಗೂ ನನಗೂ ಗುರುವೆನಿಸಿರುವ ಕುಲಪತಿಯಾಗಿ ಲೋಕಮಾನ್ಯನಾದ ಲೋಕಹಿತ ಮುನಿಯು ಲೋಕ ಹಿತಾರ್ಥವಾಗಿ ಆಚರಿಸುತಲಿರುವ ತಪವು ಲೋಪವಿಲ್ಲದೆ ಏಳಿಗೆಯಿಂದ ಬೆಳಗುತಲಿದೆಯೆ ? ಯಾವಕರ ವನ್ನು ನಾನು ಶಿರಸ್ಸಿನಿಂದ ಧರಿಸಿ ನೇರವೇರಿಸಬೇಕೆಂದು ತಮ್ಮನ್ನು ಇಲ್ಲಿಯವರೆಗೆ ಕಳುಹಿಸಿದನು ? ಮಹಾನುಭಾವನಾದ ಆ ಮಹಾಮು
ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೫೧
ಗೋಚರ