೫೪ ವಿದ್ಯಾನಂದ. vvvvs yvy-v-X vvy , z/VM ಯಾಗಿರುವ ಈ ಒಡಲನ್ನು ಆತ್ಮನಿಗಿಂತಲೂ ಉತ್ತಮವಾದದ್ದೆಂದು ಹೊ ಗಳುವ ನರವಿಶಾಚಗಳನ್ನು ಎಷ್ಟು ಕೊಂಡಾಡಿದರೂ ಸಾಲದಾಗಿದೆ. ಎಲೈ ರಾಜರ್ಷಿ ಲಲಾಮನೇ ! ಒಳಗೂ ಹೊರಗೂ ಹಿಂದೆಯೂ ಮುಂದೆಯೂ ಕೆಳಗೂ ಮೇಲೆಯೂ ಪರಮಾತ್ಮ ಚೈತನ್ಯವು ಬೆಳಗುತಲಿ ರುವುದು. ಆ ಸತ್ಯಜ್ಞಾನನಾನಂದ ಸ್ವರೂಪವಾದ ಪರಮಾತ್ಮ ಪಧಾರ್ಥವ ನ್ನು ಬಿಟ್ಟು, ಮತ್ತಾವುದಾರ್ಥವೂ ಯಾವನಿಗಾದರೆ ಗೋಚರಿಸುವುದಿ ಲ್ಲವೋ ಅವನೇ ಕೃತಾರ್ಥನು. ಸಂಸಾರಕೂಪದಲ್ಲಿ ಮುಳುಗಿದ್ದರೂ ಯಾವನ ಮನಸ್ಸಾದರೆ ಕೆಸರಿನಲ್ಲಿರುವ ಹುಳದಂತೆ ನಿಮ್ಮಲವಾಗಿರುತ್ತದೆ ಯೋ ಅವನೇ ಧನ್ಯನು. ಈ ಲೋಕದಲ್ಲಿ ಸುರನರೋರಗೇಂದ್ರ ಪದವಿ ಗಳು ಕುಲ ಬಲ ಪುತ್ರ ಮಿತ್ರ ಕಳತ್ರ ಸಂಪತ್ತುಗಳು, ವಿವಿಧವಾದ ವಿತ್ತ ವಿಭವಗಳು, ಇವೆಲ್ಲವೂ ಸುಲಭಗಳು, ಜ್ಞಾನಸಂಪದವುಮಾತ್ರ ಬಹುದು ರ್ಲಭವಾದದ್ದು, ಕೈಯಲ್ಲಿರುವ ಬೆಲೆಯಾದರತುನವು ಮಹಾಸಮುದ್ರ ಮ ಧ್ಯದಲ್ಲಿ ಮುಳುಗಿದರೆ ದೊರೆಯುವುದು ಹೇಗೆ ದುರ್ಲಭವೋ ಹಾಗೆಯೇ ಈ ಸಂಸಾರ ಸಮುದ್ರದಲ್ಲಿ ಜ್ಞಾನರತ್ನವು ಸಿಕ್ಕುವುದು ಬಲುಕಷ್ಯವೆಂ ದುತಿಳಿಯಯ್ಯಾ! ಕುಂಟನಿಗೆ ಜ್ಞಾನಶಕ್ತಿಯಿದ್ದರೂ ಫಲಕಾರಿಯಲ್ಲ. ಕು ರುಡನ ಕ್ರಿಯಾ ಶಕ್ತಿಯು ಉಪಯೋಗವಾದದ್ದಲ್ಲ. ಬೆಳಕಿಲ್ಲದಿದ್ದರೆ ಇವ ರಿಬ್ಬರ ಪ್ರಯಾಸವೂ ವ್ಯರ್ಥವಲ್ಲವೆ ? ಹಾಗೆಯೇ ಶ್ರದ್ದೆ ಸತ್ಕರ ಇವುಗ ೪ಂದೊಡಗೂಡಿದ ಜ್ಞಾನವೇ ಫಲಕಾರಿಯೆಂದು ತಿಳಿ. ಸಕಲಹಿತಗಳನ್ನು ಸಾಧಿಸಲು ಶಕ್ತವಾದ ವಿವೇಕವೆಂಬ ರಮಣೀಯವಾದ ಮಾಣಿಕವನ್ನು ಬಿಸುಟು ಕೆಲಮಂದಿ ನರಾಧಿಪಾಧವರುಅವಿಚಾರದಿಂದ ಕ್ಷಣಕಾಲಮಾತ್ರ ಇಂದ್ರಿಯ ತೃಪ್ತಿಯನ್ನುಂಟುಮಾಡುತ್ತಾ ಮಿಂಚಿನಂತಹೋಳೆದು ಹೋ ಗುವ ವಿಷಯ ಸುಖನರ-ಕದಲ್ಲಿ ಮುಳುಗುತಲಿದಾರೆ, ನಿನ್ನಲ್ಲಿ ಅಂತಹ ದುರ್ಗುಣವವು ಯಾವುದೊಂದೂ ಇಲ್ಲ. ಹಗಲಿರಳೂ ಪರರಿಗೋಸ್ಕರವೇ ಪ್ರಯಾಸಪಡುತಲಿದೀಯೆ. ಮೊದಲಲ್ಲಿಯೂ ಕಡೆಯಲ್ಲಿಯೂ ಇಲ್ಲದೆ ನ ಡುಗಾಲದಲ್ಲಿ ಮಾತ್ರ ಬಂದು ಹೋಗುತ್ತಿರುವ ಸಂಸದ್ವಿಪತ್ತುಗಳನ್ನು ಗ ಣನೆಗೆ ತಾರದೆ ನಿರ್ಲಿಪ್ತನಾಗಿದ್ದೀಯೆ, ನಿನ್ನ ಜ್ಞಾನವು ಜೀವರತ್ನದಂತೆ ಕೊಭಿಸುತಲಿದೆ ನಿನ್ನನ್ನು ನೋಡಿ ನಾನು ಬಹಳ ಸಂತಸವನ್ನು ಆಂ
ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೬೧
ಗೋಚರ