ಚಮತ್ಕಾರಚಿಂತಾಮಣಿ, ಕೆ. •••••••••••••••••••••••••• ತಲೆ ದೋರಿತು, ನಿನ್ನ ಬಾಯಲ್ಲಿ ಮೃತ್ತಿಕೆಯು ಬಿದ್ದಿತು, ದುಪ್ಪರ ತಲೆಯಮೇಲೆ ಬಂಡೆಯುರುಳಿತು, ಎಂದು ಸುಮ್ಮನಾಗಲು ಸಮಿಾಪದ ಲ್ಲಿದ್ದ ಚತುರಮಂತ್ರನು ಪ್ರಭುವೇ ! ಕಂಚುಕಿಯ ನುಡಿಗೆಲ್ಲಾ ನಿನಗೆ ಪುತ್ತೂತ್ಸವ ವಾಯಿತೆಂದೇ ಅರ್ಥವು, ಎನಲು ಮಹಾರಾಜನು ತಲೆದೂ ಗುತಾ ಕಂಚುಕಿಗೆ ಬಹುಮಾನವನ್ನಿತ್ತು ರಾಣಿವಾಸವನ್ನು ಹೊಕ್ಕು ಪುತ್ರ ಮುಖಾವಲೋಕನಂಗೈದು ನದಿಯಲ್ಲಿ ಮಿಂದು ರಾಜಲಕ್ಷಣವಾದ ಛತ್ರಚಾಮರಗಳುಹೊರತು ಉಳಿದುದನೆಲ್ಲ ಭೂದೇವಾದಿಗಳಿಗೆದಾನಮಾಡಿ ಮೂವರು ಹೆಂಡಿರುಗಳಲ್ಲಿಯೂ ಅಂದು ಕಾಲ ಭೇದದಿಂದ ಜನಿಸಿದ ನಾ ಲರು ಮಕ್ಕಳಿಗೆ ಕ್ರಮವಾಗಿ ಜಿತಾ(ಮುನಿಯು ಮೂಲಕ ಜಾತಕರ ನಾಮಕರಣಾದಿ ಸಂಸ್ಕಾರಗಳನ್ನೂ, ಬಗೆಬಗೆಯಾದ ಉತ್ಪನ್ನಗಳನ್ನೂ, ತನ್ನ ತೋಳು ಬಲದಿಂದ ಗಳಿಸಿರುವ ಐಸಿರಿಗೂ, ಮುಂದಿನಮೇಲೈಗೂ, ಮನಸ್ಸಿನ ಉತ್ಸಾಹಕ್ಕೂ, ಬಡಜನರತೃಪ್ತಿಗೂ, ಪುರಜನರಆನಂದಕ್ಕ ಅನುಗುಣವಾಗಿರುವಂತೆ ಆಚರಿಸಿದನು, ಆದರೆ ಹಿರಿಯ ಹೆಂಡತಿಗೆ ಒಬ್ಬ ನೇವಗನಡುಕಲಹೆಂಡತಿಗೆ ಮಾತ್ರ ಇಬ್ಬರು ಅವಳಮಕ್ಕಳು, ಕಿರಿಯಹಂ ಡರೂ ಒಬ್ಬನನ್ನೇ ಹಡದಿದ್ದಳು, ಹಿರಿಯಮಗನಿಗೆ ಏನೆಂದು ಹೆಸರಿಟ್ಟಿದ್ದ ನು ಬಲ್ಲಿರಾ ? ಆ ವರ ಕುಮಾರನು ಶರಣಾಗತಮಂದಾರ, ಬಹುಸುಂದರ ನು ಧೀರನು ಉದಾರನು ಗಂಭೀರನು ಚತುರನು ಕಲ್ಯಾಣಗುಣಸಾ ಗರನು ಧುರಧೀರನೂ ಆಗುವನೆಂದು ತಿಲ್ಲದೇ ಭಾವಿಭಾವನಾದ ಮುನಿ ಯ ಅನುಮತಿಯಂತೆ 'ಚಮತ್ಕಾರ, ಎಂಬದಾಗಿ ನಾಮಕರಣಮಾಡಿ ದ್ದನು. ಪೂರ್ವಿಕರಾದ ಮಹರ್ಮಿಗಳು, ಮಹಾಮಂತ್ರಗಳನ್ನೂ ದೇವ ಮೂಲವನ್ನೂ ರುಷ್ಟಿಮೂಲವನ್ನೂ ನದೀಮೂಲವನ್ನೂ ಮರೆಮಾಡಿಟ್ಟ ರುವುದೇ ವಾಡಿಕೆ. ಜನರು ದುಷ್ಟರಾಗದೆ ಇರುವುದಕ್ಕಾಗಿ ದೋಷವು ಇವುಗಳನ್ನು ದೂರವಾಗಿಯೂ ಮರೆಯಾಗಿಯೂ ಇಡುವುದು, ಭಕ್ತಿ ಯುಹಚ್ಚಿ ಶ್ರೇಯಸ್ಸನ್ನು ಪಡೆಯಲಿಕ್ಕಾಗಿ ಗುಣವುಳ್ಳವುಗಳನ್ನು ಗುಟ್ಟು ಮಾಡುವುದೂ ಸಂಪ್ರದಾಯಸಿದ್ದ ವಾದದ್ದು, ಆದುದರಿಂದಲೇ ಈ ಚಮ ತ್ಯಾರನಾಮವು ಸಾಧಾರಣವಾದದ್ದುವು. ಚತುರ್ವಗ್ರಫಲಪ್ರದವೂ ಇದೆ, ಬುದ್ದಿವಂತರ ಸಮೂಹೆಗಳಿಗೆಲ್ಲಾ ಆಕರವಾಗಿರುವುದೂ ಇದೆ, ಸಕಲ
ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೬೬
ಗೋಚರ