೬೦ ವಿದ್ಯಾನಂದ. '..... AA+ h/224 ಸದ್ದು ಣಲಕ್ಷಣಗಳಿಗೆಲ್ಲ ತವರನೆಯಾಗಿದ್ದುದರಿಂದ ಆ ಅವಳಿ ಮಕ್ಕಳಲ್ಲಿ ಹಿರಿಯವನನ್ನು ಸುಲಕ್ಷಣ ಎಂದು ಕರೆದರು. ಹುಟ್ಟುವಳಿಯಲ್ಲಿ ಕಿರಿಯ ಹೆಂಡತಿಯ ಮಗನು ಮೂರನೆಯವನಾದುದರಿಂದ ಈ ಎಳೆಯಪೈರು ಮೊಳೆ ಯಲ್ಲಿಯೇ ಕಾಣಿಸಿತು ಎಂಬಂತೆ ಕ್ಷಮಾಗುಣವು ಮೂರಿ ವತ್ತಾಗಿ ಕಾಣು ತಿದೆ ಎಂದು ಶಾಂತಿಸಾರ, ಎಂಬದಾಗಿ ನಾಮಧೇಯವನ್ನು ಮಾಡಿದರು. ಜನಿಸುವಾಗ ಕಿರಿಯವನಾದ ಕುವರನನ್ನು, ನೋಡಿಕೇಳುವ ಅರಿಗಳಎದೆ ಯದುರಿತು, ದೇವತೆಗಳ ಜಯಧ್ವನಿಯು ಕೆಳಬರುತಲಿದ್ದಿ ತು, ಆದಕಾರಣ ಆ ಅರ್ಭಕನಿಗೆ ವಿಜಯ, ಎಂಬದಾಗಿ ಅಭಿಧಾನವನ್ನು ಇಟ್ಟರು. ಈ ಬಾಲಕರ ಗುಣಾತಿಶಯಗಳನ್ನು ಕೊಂಡಾಡುವುದಕ್ಕೆ ನಮ್ಮಂತೆ ಅಲ್ಪ ಬುದ್ಧಿಯುಳ್ಳವರಿಗೆಶಕ್ತಿ ಸಾಲದು, ಈಶಿಶುಗಳು ಹೀಗಿದ್ದರೆಂದು ಪ್ರಪಂಚ ದಲ್ಲಿ ಯಾವವಸ್ತುಗಳನ್ನು ಹೋಲಿಸಿ ಹೇಳಿದರೂ ಹೀನೋಪಮೆಯಾಗು ವುದೇ ಹೊರತು ಪೂರ್ಣೋಪಮೆಯಾಗುವುದಿಲ್ಲ. ಏಕೆಂದರೆ ಉಪವಾ ಎಂಬುದೇ ಉಪಸರ್ಗವನ್ನು ತೆಗೆದರೆ ಮಹಾವಿಷ್ಣುವಿನ ಪ್ರೀತಿಪಾತ್ರ ವಾಗುತದೆ. ಮಧ್ಯವಲುಪ್ತವಾದರೆ ಪರಮೇಶ್ವರನ ವಿಶ್ವಾಸಕ್ಕೆ ಆಕರವಾಗುತ್ತದೆ. ವರ್ಣ ತ್ರಯವೂ ಸೇರಿದರೆ ವಿದ್ಯಾವಂತರಾದ ಕೆಲವರಿಗೆ ಅಲ್ಲಲ್ಲಿ ರುಚಿಸುತದೆ, ತತ್ರಾಪಿ ಈ ಚಮತ್ಕಾರ ಕುಮಾರ ನಿಗೆ ಪೂರ್ಣೋಪನೆ ಎಂಬುದು ಇಲ್ಲವೇ ಇಲ್ಲ. ಆದರೆ ಎಷ್ಟು ಮ ಟ್ಟಿಗೆ ಈ ಚಮತ್ಕಾರನನ್ನು ಬಣ್ಣಿಸ ಬಹುದೆಂದರೆ ಚಮತ್ಕಾರನಂ ತೆಯೇ ಚಮತ್ಕಾರನು ಇದ್ದನೆಂದು ಹೇಳುವಾಗ ಅನನ್ಯವಾದರೂ ಚಿಂತೆಯಿಲ್ಲವೆಂದೇ ಹೇಳಬೇಕು, ತೇಜಸ್ವಿಗಳಾದವರಿಗೆ ವಯಸ್ಸಪ್ರ ಧಾನವಲ್ಲವಷ್ಟೆ? ಚಮತ್ಕಾರನು ಕುಮಾರನಾಗಿದ್ದರೆ ತಾನೇ ಏನು ? ಸಿಂ ಹದ ಶಿಶುವ ಚಿಕ್ಕದಾದರೂ ಮದದಿಂದ ಕೊಬ್ಬಿದ ಆನೆಯ ತಲೆಯನ್ನೂ ಡೆಯಲು ತಕ್ಕುದಾದ ಶಕ್ತಿಯನ್ನು ಅಳವಟ್ಟಿರುವುದಿಲ್ಲವೆ ? ಹಾಗೆ ಯೇ ಈ ಕುಮಾರನುತೇಜಸ್ಸಿನ ಸಾರದ ಮುದ್ದೆಯಾಗಿದ್ದನು. ದೇ ಶದ ಪ್ರಜೆಗಳೆಲ್ಲರೂ ಚಮತ್ಕಾರನನ್ನು ರಾಜಕುಮಾರನೆಂದು ತಿಳಿದು ಕೊಂಡಿದ್ದರು, ಪುರಜನರು ಕುಮಾರ ರಾಜ ಅಥವಾ ಯುವರಾಜ ಎಂ ಬದಾಗಿ ಭಾವಿಸಿದ್ದರು. ತಾಯಿಯು ಮುದ್ದು ಮೋಹದ ಕುಮಾರನೆಂದು
ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೬೭
ಗೋಚರ