ಚಮತ್ಕಾರಚಿಂತಾಮಣಿಃ. ೬೫ wwwMMwwwmorwww.v• ••••••••• www ಸುವಾಸನಾಗುಣವು ಹರಡದೆ ಹೋಗುವುದೆ ಆ ಕುಮಾರನ ಸ್ವಭಾ ವಿಕವಾದ ಸುಗುಣಾವಳಿಯು ದೇಶದಲ್ಲೆಲ್ಲಾ ಹರಡಿಕೊಂಡಿತು, ಯೋಗ್ಯ ನಾದ ತಂದೆಯು ಮಗನು, ಎಂದಮಾತ್ರಕ್ಕೇ ಅವನನ್ನು ವಿದ್ಯಾವಂತನನ್ನಾ ಗಿ ಮಾಡಬೇಕೆಂದು ಭಾವಿಸುವುದು ದಿಟವಶ್ನೆ ? ಅವತಾರವಾಹನನ ಕುಲಪುರೋಹಿತನಾಗಿ ಗುರುವೂ ಆಗಿರುವ ಜಿತಾಕ್ಷನಸಾಹಾಯ್ಯದಿಂದ ತನ್ನ ಪೂರ್ವಪುಣ್ಯವು ಬೆಳದಂತೆ ಬೆಳದ ತನಯರಿಗೆ ಉಚಿತಕಾಲದಲ್ಲಿ ಈ ಪನಯನ ಸಂಸ್ಕಾರವನ್ನು ನೆರವೇರಿಸಿ ವಿದ್ಯಾರ್ಜನೆಗಾಗಿ ಆತ್ಮಜರನ್ನು ಆಚಾರನ ವಶಕ್ಕೆ ಒಪ್ಪಿಸಿದನು. ಆಹಾ ! ಆಗುರುಶಿಷ್ಯಭಾವವನ್ನು ಏನಹೇಳೋಣ ! ಇಂತಹವು ಹನೀಯರು ಸಂಪ್ರದಾಯ ಶುದ್ಧವೆಂದು ತೋರಿರುವದಾರಿಯೇ ಇಂದಿಗೂ ನಾಳೆಗೂ ಸುಜನರಲ್ಲಿ ನೆಲಗೊಂಡಿದೆ. ಗುರುವೆಂದರೆ ಅದುರುವುದು ಗುರು ಭಕ್ತಿಯಲ್ಲ, ಹೆರರುತನ್ನನ್ನು ಗುರುಭಕ್ತಿಯುಳ್ಳವನೆಂದು ತಿಳಿದು ಕೊಳ್ಳಲೆಂಬದಾಗಿ ತೋರುವ ವಿಚಿತ್ರ ವೇಷಗಳೂ ಅತಿವಿನಯ ಭಯಭ ಕಿಗಳ ನಟನೆಯ ಗುರುಭಕ್ತಿಯಲ್ಲ, ಮನಸ್ಸಿನಲ್ಲಿ ಕಳಂಕವನ್ನಾ ಗವಿ ಕಲ್ಕ ಪವನ್ನಾಗಲಿ ನಾಸ್ತಿಕ್ಯವನ್ನಾಗಲಿ ಇಟ್ಟು ಕೊಂಡು ಗುರುವಿಗೆ ಬಗೆಬಗೆಯ ಊಟಉಪಚಾರಗಳನ್ನು ಮಾಡಿಸುವುದು ಗುರುಭಕ್ತಿಯಲ್ಲ ಬೇರೊಂದು ಪ್ರಯೋಜನವನ್ನು ಗುರಿಮಾಡಿಕೊಂಡು ಆತನನ್ನು ಸೇವಿಸು ವುದು ಗುರುಭಕ್ತಿಯಲ್ಲ. ಅಯ್ಕೆಗುರುವು ಬಂದನಲ್ಲಾ ಎಂದು ಮನದಲ್ಲಿ ಬೇಜಾರುಹಟ್ಟಿಕೊಂಡು ಹೊರಗೆ ಮಾದೆಯನ್ನು ತೋರುವುದು ಗು ರುಭಕ್ತಿಯಲ್ಲ. ಇತರರ, ಗುರುವಿಗೆ ವಿಧೇಯತೆಯನ್ನು ತೋರುತ್ತಾರೆ ನಾನೂ ಹಾಗೆಯೆ. ಇರಬೆಕೆಂದು ವಿಧೇಯತೆಯಿಂದಿರುವುದು ಗುರುಭಕ್ತಿ ಯಲ್ಲ, ಬೂಟಾಟಿಕೆಯನ್ನು ತೋರಿ ಕಸಟದಿಂದ ಆತನಿಗೆ ತನ್ನಲ್ಲಿ ಶ್ರೀ ತಿ ಯುಂಟಾಗುವಂತೆ ಮಾಡಿಕೊಳ್ಳಣವು ಗುರುಭಕ್ತಿಯಲ್ಲ. ಓ ಹೋ ! ಗುರು, ಗುರು, ಎಂದು ಬೊಬ್ಬೆಯೆನ್ನ ಬಿಸಿ ಮಂದಿಯನ್ನು ಕ ಟೈಮೆರೆಯುವುದು ಗುರುಭಕ್ತಿಯಲ್ಲ. ಗುರುವು ಸಿಕ್ಕಿಸುವನು ಇಲ್ಲವೇಡಂ ಡಿಸುವನು ಅಥವಾ ಗದರಿಸುವನು ಎಂಬ ಶಂಕೆಯಿಂದ ಆತನ ಚಿತ್ತವೃತ್ತಿ
ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೭೨
ಗೋಚರ