ಚಮತ್ಕಾರ ಚಿಂತಾಮಣಿಃ. ೫ mM MAN: • •w ಶಾಪಗ್ರಸ್ತನಾಗಿ ಕಾಡಾನೆಯ ಜನ್ಮವನ್ನು ಪಡೆದು ಅರಣ್ಯ ದಲ್ಲಿ ಅಲೆಯುತ್ತಿದ್ದು ಬಂದಾನೊಂದು ದಿವಸ ದಾಹಗೊಂಡು ಬಂದು ಸರೋವರದ ಬಳಿಗೆ ಬಂದು ಜಲಸಾನಾರ್ಥವಾಗಿ ಇಳಿಯಲು, ಅದರೊಳ ಗಿದ್ದ ಕ್ರೂರವಾದ ಮೊಸಳೆಯೊಂದು ಕಾಲನ್ನು ಹಿಡಿದುಕೊಂಡಿತು, ಆ ಗಲಾಬಾಧೆಯನ್ನು ತಾಳಲಾರದೆ ಗಜೇಂದ್ರನು ಬಹಳವಾಗಿ ನೊಂದು ದೈವಯೋಗದಿಂದ ಜಾತಿಸ್ಕೃತಿಯಿದ್ದ ಕಾರಣ ಭಗವಂತನನ್ನು ಕುರಿತು ಮೊರೆಯಿಟ್ಟುದರಿಂದ ವೈಕುಂಠಲೋಕದಲ್ಲಿ ರಮಾದೇವಿಯ ಲೀಲೆಯಲ್ಲಿ ಲೋಲನಾಗಿದ್ದ ಶ್ರೀಮನ್ನಾರಾಯಣನ ಕಿವಿಗೆ ಆ ಗಜೆಂದ್ರನ ಆರಸ ರವು ಕೇಳಿ ಬಂದಕೂಡಲೇ ಬೆಕ್ಕ ಪರಾಧೀನನಾದ ಭಗವಂತನು ಲಕ್ಷ್ಮೀ ದೇವಿಯನ್ನು ಲಕ್ಷ್ಯಮಾಡದೆ ಎಲ್ಲ ವೈಭವವನ್ನೂ ತೊರೆದು ಶರಣುಹೊಂ ದಿದವನನ್ನು ಉದ್ಧರಿಸುವುದಕ್ಕೋಸ್ಕರ ಹೊರಟು ಹೋದನು. ಆಗ ಬಹು ಸಂತೋಷ ಸಮಯದೊಳಗಿದ್ದು ಒಂದು ಮಾತನ್ನೂ ಆಡದೆ ಅಸಡ್ಡೆಯಿಂದ ತಿರಸ್ಕರಿಸಿ ಹೊರಟುಹೋದ ಪತಿಯಮೇಲೆ ಬಲವಾ ಗಿ ಸಿಟ್ಟು ಹತ್ಯೆ ಪುನಃ ಭಕ್ತನನ್ನು ಉದ್ಧರಿಸಿ ಭಗವಂತನು ಒಗಲು ಆತ ನೊಡನೆ ಇಂದಿರೆಯು ಮಾತನಾಡದೆ, ನಾನು ಕೆಲಕಾಲ ಭೂಲೋಕದಲ್ಲಿ ವಾಸಮಾಡುವೆನೆಂದು ಹೊರಟು ಬಂದಳು, ಆಮೇಲೆ ಈ ಅರಣ್ಯದ ಪೂರ್ವಭಾಗದಲ್ಲಿ ವಾಸಮಾಡುತ್ತಿರುವ ಪಶ್ಚಕನೆಂಬ ಮುನಿಗೆ ಪತ್ನಿ ಯಾ ದ ದೇವಜಾತೆಯೆಂಬ ಸತಿಯಲ್ಲಿ ಜನಿಸಿದಳು. ಅತ್ತ ಮಾಧವನು ಪ್ರಾ ಣಪ್ರಿಯಳನ್ನು ಅಗಲಿರಲಾರದೆ ಕಳವಳಿಸುತಿರುವಾಗ ವಿಪನ್ನರಾದ ದೇ ವತೆಗಳು ಬಂದು ಪ್ರಾರ್ಥಿ ಸಲು ಶರಣತ್ರಾಣಾರ್ಥವಾಗಿ ಹೊರಟು ಹೋ। ದನು, ಆದರೆ ಕಮಲನಾಭನನ್ನು ಅಗಲಿ ಇರಲಾರದ ಕಳವಳವ್ರ ಆಕೃ ಸದರಿಯ ಹೃದಯದಲ್ಲಿ ಹಗಲಿರುಳೂ ಮರಳುತಲಿತ್ತು, ಹೀಗಿರಲು ವಿವಾಹ ಯೋಗ್ಯಳಾದ ಮಗಳನ್ನು ನೋಡಿ ತಾಯಿ ತಂದೆಗಳೊಂದುದಿನ ಪ್ರಿಯ ಪುತ್ರಿಯೇ ! ನೀನು ಅಲ್ಲಲ್ಲಿ ಆಶ್ರಮಗಳೊಳಗೆ ಸಂಚರಿಸಿ, ಅನು ಕಲನಾದ ಪತಿಯನ್ನು ವರಿಸಿದರೆ ಆತನಿಗೆ ಕೊಟ್ಟು ವಿವಾಹವನ್ನು ಮಾಡುವೆವೆಂದು ಹೇಳಿದರು, ಅದಕ್ಕಾ ಬಾಲೆಯು ತನಗೆ ಈಗ ಹರಿಣ
ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೮೨
ಗೋಚರ