೭೩ ವಿದ್ಯಾನಂದ ಒwwwmM ಯವು ಅವಶ್ಯಕವಿಲ್ಲವೆಂತಲೂ, ತಪಸ್ಸನ್ನು ಮಾಡಿ ಯಜ್ಞಪುರುಷನಾದ ಪರವಾಸುದೇವನನ್ನು ಸಂತೋಷ ಪಡಿಸುವುದೇ ಕಲ್ಯಾಣವೆಂತಲೂ ಹೇಳಿದಳು, ಆ ತರಳೆಯ ಆ ವಯಸ್ಸಿನ ಆಶ್ಚರಕರವಾದ ಮಾತಿನಿಂದ ಹತ್ತವರಿಗೆ ಹೆಚ್ಚಳವೂ ಕಳವಳವೂ ಉಂಟಾಯಿತು, ಬಳಿಕ ಮದುವೆ ಯನ್ನು ಮಾಡಿಕೊಳ್ಳೆಂದು ಮಾತಾಪಿತೃಗಳು ಆಡುವ ಮಾತುಗಳೂ ಮಾ ಡುವ ಪ್ರಯತ್ನಗಳೂ ಬಾಲೆಯ ವಿಷಯದಲ್ಲಿ ಕಾರಕಾರಿಗಳಾಗಲಿಲ್ಲ. ತರುವಾಯ ದೃಢಸಂಕಲ್ಪಲಾಗಿ ಆ ಕುಮಾರಿಯು ಜನನೀ ಜನಕರಿಗೆ ಅಭಿವಂದಿಸಿ ಹೊರಟು ಹರಮಪುರುಷನಾದ ಶ್ರೀಹರಿಯು ಸರ್ವವ್ಯಾಪಕ ನಾದರೂ ಅಗ್ನಿ ಪುರುಷನಲ್ಲಿಯೂ, ಭಾಗವತರ ಹೃದಯದಲ್ಲಿಯ, ಸೂ ಕೃಮಂಡಲದಲ್ಲಿಯ ವಿಶೇಷವಾಗಿ ಸಾನ್ನಿಧ್ಯವನ್ನು ತೋರಿರುವನು ಆದುದರಿಂದ ಪ್ರಕೃತದಲ್ಲಿ ಭಾನುಮಂಡಲದೊಳಗೆ ಭಗವಂತನನ್ನು ಧ್ಯಾನಿಸುತ್ನಾ ತಪಸ್ಸನ್ನಾಚರಿಸುವುದೇ ಲೇಸು, ಎಂದು ಈ ಸ್ಥಳದಲ್ಲಿ ಈ ರೀತಿಯಾಗಿ ಕಠಿನತರ ತಪವನ್ನು ಆಚರಿಸುತ್ತಿರುವಳು ಇಗೋ ದುರ್ಗಪಂಕದ ದೊರೆಯಾದ ದಿಗ್ಗಳನು ಬಾಹುಬಲದಿಂದ ಕೊಬ್ಬಿ ಬಿಗಿ ಜಯಕ್ಕಾಗಿ ಬಂದವನು ಈಗ ಇಲ್ಲಿಗೆ ಬಂದಿರುವನು. ಅಲ್ಲದೆ ಕಾಮ ಪರ ತಂತ್ರನಾಗಿ ಅಗ್ನಿ ಜ್ವಾಲೆಯನ್ನು ಬಟ್ಟೆಯಿಂದ ಮೂಟೆಯನ್ನು ಕ ಟ್ಟಲು ಯತ್ನಿ ಸುವಹಾಗೂ ಗೂಢಪಾದನು ಗಾಳಿಯನ್ನು ಕುಡಿಯತ ಕ್ಯವನೆಂದು ಗರುಡನ ಬಾಯ ಗಾಳಿಯನ್ನು ಕುಡಿಯಲೆತ್ನಿಸುವ ಹಾಗೂ, ಸಾಧಾರಣವಾದ ಹೆಣ್ಣು ಎಂಬ ಭಾವನೆಯಿಂದ ಬಲಾತ್ಕಾರವಾಗಿ ಆಕ ಯನ್ನು ಹರಿಗುಹಿಸಲು ಯತ್ನಿಸಿ ದಿವ್ಯ ಮಂಗಳದೇವತೆಯಾದ ಆ ತೇ ಜೋಮಯ ವಿಗ್ರಹದಿಂದ ತಪ್ತನಾಗಿ ಇಗೋ ಹೊರಟುಹೋಗುತ್ತಿ ರುವನು, ಆಗಲೇ ಮಾನವಲೀಲೆಯಿಂದ ಮನುಜಕನೈಯಾಗಿರುವ ಲೋ ಕಜನನಿಯು ತಪಸ್ಸಿಗಾಗಿ ಸಿದ್ಧ ಪಡಿಸಿಕೊಂಡಿರುವ ಆಗ್ನಿಗುಂಡದಲ್ಲಿ ಪ್ರವೇಶಿಸಿದಳು. ಇನ್ನು ನಾವು ಇಲ್ಲಿ ಇರಕೂಡದು, ಈ ಭಾಗದ ಸಮು ದ್ರವು ಉಕ್ಕಿ ಹರಿದು ಈ ಭಾಗವನ್ನೆಲ್ಲ ಮುಳುಗಿಸುವುದು ನಾವು ಇಲ್ಲಿಂದ ದೂರವಾಗಿರುವ ದಕ್ಷಿಣಾರಣ್ಯದಲ್ಲಿ ಹೋಗಿ ವಾಸಮಾಡೋಣ
ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೮೩
ಗೋಚರ