ಪುಟ:ಚೆನ್ನ ಬಸವೇಶವಿಜಯಂ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಾರುಕಾವನವಿಹಾರ

0 ಸಕಲ ಗಿರಿ ನದೀ ವನಭೂಮಿಗಳನ್ನೆಲ್ಲ ತನ್ನ ಸಾದನ್ಯಾಸದಿಂದ ಪವಿತ್ರ ಮಾಡಿ ಹಿಮವತ್ಪರತದ ಬಳಿಗೆ ನಡೆತಂದನು. ಆ ಪರತದ ತಪ್ಪಲಿನಲ್ಲಿ ದಾರುಕಾವನವಿದ್ದಿತು, ಅಲ್ಲಿ ಗೌತಮ, ದೃಗು, ಭಾರದ್ವಾಜ, ಅತ್ರಿ, ಗಾಲವ, ವಸಿಷ್ಠ, ಕೌಶಿಕ, ಕಾಶ್ಯಪ, ವ್ಯಾಸ, ಆಂಗೀರಸ, ಬಾಗುರಿ, ಪರಾಶರ, ಗಾರ್ಗ, ಕಣ್ಣ ಮೊದಲಾದ ಮಹರ್ಷಿಗಳೆಲ್ಲ ತಮ್ಮ ತಮ್ಮ ಯೋಗದಲ್ಲಿ ನಿರತರಾಗಿದ್ದು ಅವರ ಬಳಿಯಲ್ಲಿ ದೇಹವನ್ನನುಸರಿಸಿ ರುವ ನೆಳಲಿನಂತೆಯೂ, ಕರಕ್ಕನುಸಾರವಾದ ಬುದ್ಧಿಯಂತೆಯೂ, ನುಂ ಗಿದ ಪಾದರಸವು ದೇಹದಲ್ಲಿ ಚುಚ್ಚಿದ ಬಳಿಗೆ ಬರುವಂತೆಯೂ, ಪತಿಗಳ ಆಜ್ಞಾನುವರಿಗಳಾಗಿದ್ದು ಕೊಂಡು ಸೇವೆ ಮಾಡುತ್ತಿರುವ ಕೋಮಲಾಂ ಗಿಯರಾದ ಪತಿವ್ರತಾ ಯರು ರಂಜಿಸುತ್ತಿದ್ದರು. ಶಿವನು ಅವರಾ ಶ್ರಮವನ್ನು ಹೊಕ್ಕು , ತನ್ನ ರೂಪತಿಶಯದಿಂದ ಮುನಿಸ್ತೋಮವನ್ನೆಲ್ಲ ಬೆರಗುಗೊಳಿಸಿದನು. ಸ್ತ್ರೀಯರು ತಮ್ಮ ಮನೆಗೆಲಸದಲ್ಲಿದ್ದು ಕೊಂಡಿ ರುವಲ್ಲಿ ಶಿವನು “ ಭಿಕ್ಷಾಂದೇಹಿ ೨” ಎಂಬದಾಗಿ ಮಾಡಿದ ಗಂಭೀರಧ್ವನಿ ಯನ್ನು ಕೇಳಿ, ಪಾತ್ರೆಯಲ್ಲಿ ಪಾಯಸಾನ್ನವನ್ನು ತಂದು ಭಿಕ್ಷಾಪಾತ್ರೆಗೆ ನೀಡಿ, ಕಣ್ಣನ್ನು ಮೇಲಕ್ಕೆತ್ತಿ ನೋಡಿ ತಲೆಬಗ್ಗಿಸಿಕೊಂಡು ಹೋಗುತ್ತಿರು ನಲ್ಲಿ, ತಮ್ಮ ಕಾಲಬೆರಲಿನುಗುರಿನಲ್ಲಿ ಪ್ರತಿಬಿಂಬಿಸಿರುವ ಶಿವನ ರೂಪನ್ನು ನೋಡಿ ಥಟ್ಟನೆ ಮೋಹಪರವಶೆಯರಾದರು. ಆ ಕೂಡಲೇ ಮುನಿಸ್ತಿ ಯರು ಪಾತ್ರೆಗಳನ್ನು ಬೆಳಗುವ_ಗಂಧಾಕ್ಷತೆಗಳನ್ನಣಿಮಾಡುವ-ಸಮಿ ದರ್ಭೆಗಳನ್ನು ಕೂಡಿಸಿಡುವ ಕೆಲಸಗಳನ್ನೆಲ್ಲ ಬಿಟ್ಟು, ಅತ್ತೆ ಮಾವ ಮಕ್ಕಳುಗಳನ್ನು ಸಹ ಲಕ್ಷಿಸದೆ ಮನೆಯನ್ನು ಬಿಟ್ಟು ಈ ಸುಂದರನಾರು? ಈ ಗಾಡಿಕಾರನಾರಾಗಿರಬಹುದು ? ಶಿವಶಿವಾ ! ಕಾಣೆವಲ್ಲ ! ಎಂದು ಹಂಬಲಿಸುತ್ಯ, ಈಶ್ವರನನ್ನೇ ಅನಿಮೇದೃಷ್ಟಿಯಿಂದ ನೋಡುತ್ತಿದ್ದ ರು, ಶಿವನ ಆ ಜಗನ್ನೊಹಕರೂಮಿನಿಂದ ಮೋಹಿತೆಯರಾದ ಮುನಿ ಸ್ತ್ರೀಯರುಗಳು ಕಾಮಾತುರಂಗೊಂಡು, ಬೆವರೇರಿ, ಬಾಯ್ದಿಟ್ಟು, ನಡೆಗೆಟ್ಟು, ಮರುಳಾಗಿ, ಬೆಣ್ಣೆಯಂತೆ ಕರಗಿ, ಸೊರಗಿ, ಸೂಜಿಗಲ್ಲು ತಿರು ಗಿದ ಕಡೆಗೆ ತಿರುಗುವ ಸೂಜಿಯಂತೆ ಅವನನ್ನೆ ಹಿಂಬಾಲಿಸಿ ಬರುತ್ತಿದ್ದ ರು. ಆಗ ಶಿವನು ಮುನಿಜನಕ್ಕೆ ಕೋಪವನ್ನುಂಟುಮಾಡಿ ನೋಡಬೇಕೆಂ