ಪುಟ:ಚೆನ್ನ ಬಸವೇಶವಿಜಯಂ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಕ್ಷಿಣಾಪತಿ ತತ್ತೂವದೇಶಂ ಕೊಪಾಕ್ರಾಂತರಾಗಿ, ತಾವೆ ಎದ್ದು ಬಂದು, ಈ ಭಿಕ್ಷುಕನನ್ನು ನೋ ಡಿ, ಒಟ್ಟಿಗೆ ಶಾಪವನ್ನು ಕೊಟ್ಟರು, ಅದಕ್ಕೆ ಶಿವನು ಲೇಶಮಾತ್ರವೂ ಲಕ್ಷಿಸಲಿಲ್ಲ. ಪುನಃ ಮಂತ್ರಿಸಿ ದರ್ಭಾಗ್ಯವನ್ನು ಬಿಟ್ಟರು. ಅದು ಕಾಲಾಗ್ನಿಯಂತೆ ಉರಿಯುತ್ತ ಬಂದು, ಶಿವನ ಬಳಿಗೆ ಹೋಗಿ, ಹಾಗೆ ಯ ನಂದಿಹೋಯಿತು. ಮಮ್ಮಿಗಳು ಇದನ್ನು ಕಂಡು, ಅತ್ಯಂತ ಕೋ ಪವೇರಿ, ಮಾರಣಹೋಮವನ್ನು ಮಾಡುವುದಕ್ಕುಜ್ಜುಗಿಸಿದರು, ಒಂದು ಯೋಜನದಗಲಕ್ಕೆ ಕುಂಡವನ್ನು ಮಾಡಿಸಿದರು. ನಾನಾಗಿದ್ದಿ ಗಳುಳ್ಳ ಸಮಿ ತ್ತುಗಳನ್ನೆಲ್ಲ ಕೂಡಿಸಿದರು. ೪೮ ಸಾವಿರ ಮುನಿಗಳು ಒಂದುಗೂಡಿ ಘೋರಮಂತ್ರಗಳಿಂದ ಕೋಟಿ ಕೋಟಿ ಆಜ್ಞಾಹುತಿಯನ್ನು ಕೊಡುತ್ತ, ಆ ಭಿಕ್ಷುಕನನ್ನು ದಹಿಸೆಂದು ಪ್ರಾರ್ಥಿಸುತ್ತಿದ್ದರು. ಆಗ ಮಹಾಗ್ನಿಜ್ರಾ ಲೆಯಲ್ಲಿ ಭಯಂಕರವಾದ ಹುಲಿಗಳು ಸರ್ಪಗಳು ಆಯುಧಗಳು ಭೂತಗ ಣಗಳು ಶಕ್ತಿಗಳು ಸಹ ಹುಟ್ಟಿ, “ ನಮಗಪ್ಪಣೆಯೇನು ? ಆಹುತಿಯ ನ್ನು ಕೊಡಿ ” ಎಂದು ಕೇಳುತ್ತಿದ್ದುವು. ಮಹರ್ಷಿಗಳು ಭಿಕ್ಷುಕನ ಕಡೆಗೆ ಸನ್ನೆ ಮಾಡಿ ತೋರಿಸಿ, ಅವನನ್ನು ನುಂಗುವಂತೆ ಆಜ್ಞಾಪಿಸಿದರು. ಅವು ಶಿವನಮೇಲೆ ಬೀಳಲು, ಶಂಕರನು ನಸುನಗುತ್ತ, ಜಿಂಕೆಯನ್ನು ಕೈಯಲ್ಲಿ ಹಿಡಿದು, ಹುಲಿಯನ್ನು ನೀ೪ ತರವನ್ನು ಸುಲಿದುಟ್ಟು, ಸರ್ಪ ಗಳನ್ನು ಹಿಡಿದು ಆಭರಣ ಮಾಡಿಕೊಂಡು ಧರಿಸಿ, ಆಯುಧಗಳನ್ನು ಕೈ ಯಲ್ಲಿ ಹಿಡಿದು, ಶಕ್ತಿಗಳನ್ನು ಕಾಲಲ್ಲಿ ಮೆಟ್ಟ, ಉರಿಯನ್ನು ಕೈಯಲ್ಲಿ ಹಿಡಿದು, ಅಪಸ್ಕಾರವನ್ನು ಮುಂದಲೆ ಹಿಡಿದು ಕೆಡಹಿ, ಪದದಿಂ ತುಳಿ ದು, ಕುಣಿದಾಡುತ್ತಿದ್ದನು ಭೂತಗಳು ತಾಳಮದ್ದಳೆಗಳನ್ನು ಬಾಜಿಸಿ ಹಾಡುತ್ತಿದ್ದುವು. ಇದನ್ನೇ ಮಮ್ಮಿಗಳು ಕಂಡು ಬೆರಗಾಗಿ, ಇವನೇ ಸಾಕ್ಷಿ-ಶಿವನೆಂದು ತಿಳಿದುಕೊಂಡು ಹೊಗಳಲಾರಂಭಿಸಿದರು. ಶಿವ ನೇ ! ಹಲವು ಕಾಲ ಕಣ್ಣನ್ನು ಮುಚ್ಚಿ ತಪಸ್ಸನ್ನು ಮಾಡಿದರೆ ಬಂದ ಭಾಗ್ಯವೆನು ? ನೀನಾಗಿ ನಮ್ಮ ಆಶ್ರಮಕ್ಕೆ ದಯಮಾಡಿಸಿದ್ದರೂ ನಾವು ತಿಳಿಯಲಾರದೆ ಹೋದೆವು. ನಮ್ಮಂತಹ ಮರುಳರಾರೂ ಇಲ್ಲ, ನಾವು ಮಾಡಬಾಗದ ಅಪರಾಧಗಳನ್ನು ಮಾಡಿದೆವು. ಇದನ್ನೆಲ್ಲ ನೀನು ಕ್ಷಮಿಸಿ ರಕ್ಷಿಸಬೇಕು, ಎಂದು ನಾನಾವಿಧವಾಗಿ ದೈನ್ನೋಕ್ಕಿಯಿಂದ ಬೇಡಿ