ಪುಟ:ಚೆನ್ನ ಬಸವೇಶವಿಜಯಂ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܫܐ - ಚನ್ನ ಬಸವೇಶವಿಜಯಂ (ಕಾಂಡ ೨) (ಅಧ್ಯಾಯ ಹೆದ್ದ ನಿಯೂ ಒಟ್ಟುಗೂಡಿ ಬ್ರಹ್ಮಾಂಡವನ್ನೇ ಅಲ್ಲಾಡಿಸಿಬಿಟ್ಟುವು, ಎಲೆ ಸಿದ್ದರಾಮನೇ ಕೇಳು-- ರಥಗಳು ೫ ಪದಗಳದ್ದುವು. ಮದವೇರಿದಾ ನೆಗಳು ೧೦೦ ಪತ್ನಗಳಿದ್ದುವು, ವೇಗಶಾಲಿಗಳಾದ ಕುದುರೆಗಳು ೧೦೦೦ ಪದ್ಮವಿದ್ದುವು. ಕಾಲಾಳುಗಳು ೧೦,೦೦೦ ಪದ್ಯ ವಿದ್ದರು. ಇಷ್ಟು ಸೇನೆ ಯೂ ಒಬ್ಬೊಬ್ಬ ದೈತ್ಯನಾಯಕನ ಬಳಿಯಲ್ಲಿದ್ದಿತು. ಅಂತಹ ದೈತ್ಯ ನಾಯಕರು ಶತಕೋಟಿ ಪದ್ಮ ಸಂಖ್ಯಾಕರಾಗಿದ್ದರು. ಇಂತಹ ಅಮಿತ ಬಲದೊಡನೆ ಕೂಡಿ ರಾಕ್ಷಸರಾಜನ ಹೊರಟನು. ಅವನ ಸುತ್ತಲೂ ಅವನಿಗೆ ಸರಿತೂಕದ ಬಲವುಳ ಮುಖ್ಯದೈತ್ಯರು ಹೋಗುತ್ತಿದ್ದರು. ಮುಂಗಡೆಯಲ್ಲಿ ಸ್ತುತಿಪಾಠಕರು ಉಗ್ಗಡಿಸುತ್ತಿದ್ದರು ಸೇನೆಯ ತೂ ಕಕ್ಕೆ ಭೂಮಿಯು ಕುಸಿಯದೆ ಉಳಿಯುವುದಿಲ್ಲವೆಂಬಂತೆ ತೋರುತ್ತಿ ದ್ವಿತು, ಸೈನ್ಯದಲ್ಲಿ ಎತ್ತನೋಡಿದರೂ ಕೆಂದೂಳಿ, ಎಲ್ಲಿ ನೋಡಿದರೂ ಆನೆ ಕುದುರೆ ರಥಗಳು, ಆವಕಡೆ ನಿರೀಕ್ಷಿಸಿದರೂ ರಾಕ್ಷಸರ ಆರ್ಭಟ, ಯಾವಲ್ಲಿ ಗಮನಿಸಿದರೂ ಛತ್ರ ಚಾಮರಗಳು, ಎತ್ತ ತಿರುಗಿದರೂ ಕತ್ತಿ ಬಾಣ ಮೊದಲಾದ ಆಯುಧಗಳ ಹೊಳಪು ತುಂಬಿ ತುಳುಕುತ್ತಿದ್ದಿತು. ಈ ಸೇನಾಪ್ರಯಾಣದಿಂದ ಧೂಳಿಯೆದ್ದು ಸಮುದ್ರವನ್ನೆಲ್ಲ ಹೀರಿ ಬತ್ತಿ ನಿತು, ತೂಕಕ್ಕೆ ಆದಿಶೇಷನ ಕುತ್ತಿಗೆಯು ಕುಗ್ಗಿತು. ಆದಿಕೂನ ಬೆನ್ನೂಟೆಯು ತಗ್ಗಿ ಹೋಯಿತು, ವಾದ್ಯಕ್ಷನಿಯು ಬ್ರಹ್ಮಾಂಡವನ್ನೆಲ್ಲ ವ್ಯಾಪಿಸಿ ಶತ್ರುರಾಜರ ಎದೆಯನ್ನು ಬಿರಿಸಿತು. ದೇವಲೋಕದ ಗಡಿಗ ಳಲ್ಲಿದ್ದ ಸೇನೆಯು ಈ ಮಹಾಸೈನ್ಯವನ್ನು ನೋಡಿದಕೂಡಲೇ ದಿಗಿಲು ಬಿದ್ದು ಎದ್ದು ಓಡಿತು. ಈ ಜಲಂಧರನ ಸೈನ್ಯವು ದಾರಿಯಲ್ಲಿ ವಿನಯ ದಿಂದ ಕಂಡವರನ್ನು ಉಚಿತವಾಗಿ ನನ್ನಿ ಸುತ್ತಲೂ, ಭೀತರಾದವರಿಗೆ ಅಭಯದಾನವನ್ನು ಮಾಡುತ್ತಲೂ, ಮದಿಸಿದ್ದವರನ್ನು ಶಿಕ್ಷಿಸುತ್ತಲೂ, ಪ್ರತಿಭಟಿಸಿದವರ ಕೋಟೆಗಳನ್ನು ಧೂಳಿಪಟಲವಾಡಿ, ಅವರ ಹೆಂಡಿರ ನ್ಯೂ ವಸ್ತು ವಾಹನಗಳನ್ನೂ ಸೂರೆಮಾಡಿ ದಂಡಿಸುತ್ತಲೂ, ಬೇಗಬೇ ಗನೆ ಅಮರಾವತಿಯ ದಾರಿಯನ್ನು ಹಿಡಿದು, ಗಿರಿ ವನ ಜಲ ದುರ್ಗಗಳನ್ನೆಲ್ಲ ದಾಟ, ದೇವನಗರಿಯ ಸಮಿಾಪವನ್ನು ಸಾರಿತು. ಈ ಸುದ್ದಿಯನ್ನು ದೇ ವೇಂದ್ರನು ಕೇಳಿದ ಕೂಡಲೇ ರೋಪದಿಂದ ಕಣ್ಣುಗಳಲ್ಲಿ ಕಿಡಿಯನ್ನು