ಪುಟ:ಚೆನ್ನ ಬಸವೇಶವಿಜಯಂ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಿಕಿಳಿ ಚನ್ನ ಬಸವೇಶವಿನಯಂ, (ಕಾಂಡ ೨) (ಅಧ್ಯಾಯ ಒಳೆಯುತ್ತ ಹೋಗುತ್ತಿದ್ದುವು ಕಡಿವಾಣವನ್ನೂ ಮೊಗವಾಡವನ್ನೂ ಹಾಕಿ ಸಬರವನ್ನಿಟ್ಟು ವಾಘಗಳಿಂದ ಸೆಳೆಯಲ್ಪಡುತ್ತಿರುವ ಕುದುರೆಳು 'ಚಪಲತರಗಳಾಗಿ ತಲೆಯನ್ನು ಕುಲುಕುತ್ತ ನಿಂತಲ್ಲಿ ನಿಲ್ಲದೆ ಗೊಗಸಿನಿಂದ ಭೂಮಿಯನ್ನು ಕೆರೆಯುತ್ತ ಬಾಯಿಂದ ನೊರೆಯನ್ನು ಸುರಿಸಿ ಕೆನೆಯು ತ್ಯ ನಡೆಯುತ್ತಿದ್ದುವು. ಒಳಗೆ ಬಾಣಗಳನ್ನು ತುಂಬಿ ಮೇಲೆ ಕಲಶವ ನ್ನು ಇಟ್ಟು ಭಂಗಾರದ ಮುಲಾವಮಾಡಿ ದಿವ್ಯಾಶಗಳನ್ನು ಹೂಡಿರುವ ರಥಗಳು ಚೀತ್ಕಾರವನ್ನು ಮಾಡುತ್ತ ಸಾರಥಿಯು ನಡಸಿದ ಕಡೆಗೆ ಹರಿ ಯುತ್ತಿದ್ದು ವು. ಭುಜಕಿರೀಟವನ್ನೂ ಲೋಹಕವಚವನ್ನೂ ತೊಟ್ಟು, ತಲೆಗೆ ಟೊಪ್ಪಿಗೆಯನ್ನಿಟ್ಟು ಕೈಯಲ್ಲಿ ಬಿಲ್ಲು ಬಾಣ ಕತ್ತಿ ಗಗೆ ಮೊದ ಲಾದ ಆಯುಧಗಳನ್ನು ಹಿಡಿದು ವೀರನಾದವನ್ನು ಮಾಡುತ್ತಲಿರುವ ಕಾ ಲಾಳುಗಳ ಸಾಲುಗಳು ಹೋಗುತ್ತಿದ್ದುವು. ಹೀಗೆ ಅಮರಾವತಿಯಿಂದ ಹೊರಟ ಸಕಲ ಸನೆಯೊಡನೆಯ ದೇವೇಂದ್ರನು ಸಾಗಿ, ಪಟ್ಟಣದ ಹೊರಬಾಗಿಲಿನ ಮುಂದಣ ಬೈಲಿನಲ್ಲಿ ಸೇನೆಯನ್ನೆಲ್ಲ ನಿಲ್ಲಿಸಿ, ವಿಸ್ತಾರವಾ ಗಿ ಸುತ್ತಲೂ ಸನ್ನದ್ಧವಾಗಿ ನಿಂತಿರುವ ಆ ದೊಡ್ಡ ಸೇನೆಯನ್ನು ನೋಡಿ ಅಚ್ಚರಿಗೊಂಡು. ಇಂಥ ಮಹಾಸೇನೆಯು ಇದಿರಿಗೆ ನಿಂತು ಕಾಯುವ ಶೂರನು ಯಾರಿರುವನು ? ಎಂದು ಉಬ್ಬಗೋಳ ತ್ಯ, ಸೇನೆಯನ್ನು ಮುಂ ದಕ್ಕೆ ಸಾಗಿಸಿದನು, ಎಂದು ಚೆನ್ನಬಸವೇಶನು ನುಡಿದನೆಂಬಿಲ್ಲಿಗೆ ಹನ್ನೆ ರಡನೆ ಅಧ್ಯಾಯವು ಸಂಪೂವು. ೧೭ನೇ ಅಧ್ಯಾಯವು. ಜಲಂಧರನಿಂದ ದೇವೇಂದ್ರನಸಜಯ. –****- ಬಳಿಕ ಚೆನ್ನಬಸವೇಶನು ಸಿದ್ದರಾಮೇಶನನ್ನು ಕುರಿತು ಮುಂದಣ ಸಂಗತಿಯನ್ನು ಹೇಳತೊಡಗಿದನೆಂತಂದರೆ- ದೇವೇಂದ್ರನು ಮುಂದು ಮುಂದೆ ತನ್ನ ಸೇನೆಯನ್ನು ನಡೆಸಿಕೊಂಡುಹೋಗುತ್ತಿರುವಲ್ಲಿ ಇದಿರಿಗೆ