ಪುಟ:ಚೆನ್ನ ಬಸವೇಶವಿಜಯಂ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

nov ಚನ್ನಬಸವೇಕವಿಜಯಂ (೪೦ದ ೨) [ಅಧ್ಯಾಯ ದಿಕ್ಷಾಲಕರೂ ತಮ್ಮ ತಮ್ಮ ಸೇನೆಯೊಡನೆ ಅತಿ ರಭಸದಿಂದ ರಾಕ್ಷಸರ ಮೇಲೆ ಬಿದ್ದರು. ಆಗ ಎರಡು ದಳಗಳಲ್ಲೂ ಶುಂಭಾಸುರನು ದೇವೇಂ ದ್ರನನ್ನೂ, ನಿಶುಂಭನು ಅಗ್ನಿಯನ್ನೂ, ವಾಮನನು ಯಮನನ್ನೂ, ಮದಿ ರನು ನಿಬ್ಬತಿಯನ್ನೂ, ದೀರ್ಘಬಾಹುವು ವರುಣನನ್ನೂ, ಖಡ್ಡ ರೋ ಮನು ವಾಯುವನ್ನೂ, ಪ್ರಚಂಡನು ಕುಬೇರನನ್ನೂ, ಚಂಡನು ಈಶಾ ನನನ್ನೂ ಇದಿರಾಗಿ ಮೂದಲಿಸಿ ಪರಸ್ಪರವಾಗಿ ಬಾಣದ ಮಳೆಯನ್ನು ಕರೆ ಯಹತ್ತಿದರು. ರಣಾಂಗಣವನ್ನೆಲ್ಲ ಈ ಬಾಣಗಳು ಕವಿಯಲು, ಭೂ ಮೈಂತರಿಕ್ಷಗಳೊಂದೂ ಕಾಣದಂತಾದುವು. ರಿಪುಗಳು ಮಾಡುವ ಬಾಣ ಪ್ರಯೋಗಕೌಶಲ್ಯಕ್ಕೆ ಮನಸ್ಸಿನಲ್ಲಿ ಮೆಚ್ಚು , ಅದಕ್ಕಿನಡಿಯಾದ ಕರ ಚಮತ್ಕಾರದಿಂದ ತೀಕವಾದ ಬಾಣಗಳನ್ನು ಹೂಡಿ ಪ್ರತಿರ್ಬಾಣವನ್ನು ಮಧ್ಯದಲ್ಲೇ ಖಂಡಿಸಿ ರಿಪುವಿನ ಎದೆಯನ್ನು ಭೇದಿಸುತ್ತ, ಕಣ್ಣುಗ ಇನ್ನು ಕೆಂಪಗೆ ಮಾಡಿ ಹುಬ್ಬು ಗಂಟಿಕ್ಕಿ ಮೂದಲಿಸಿ, ಪ್ರತಿಬಲವನ್ನು ಬಾಣಾಹತಿಯಿಂದ ಭೂಮಿಗುರುಳಿಸಿ, ಭತಬೇತಾಳಗಳಿಗೆ ಅವರ ರಕ ಮಾಂಸಗಳನ್ನು ಔತಣ ಮಾಡಿಸುತ್ತಲೂ, ರಥವು ಮುರಿದುಹೋದರೆ ಭೂಮಿಗಿಳಿದು ಕತ್ತಿಯಿಂದಲೂ ಗದೆಯಿಂದಲೂ ಕುಂತಾಯುಧದಿಂದಲೂ ಹೋರಾಡುತ್ತಲೂ, ಓರ್ವರನ್ನೋರ್ವರು ಜರೆದು, ಮಸೆದು, ಮೇಲೆ ಬಿದ್ದು , ಹೊಡೆದು, ಕೆಡಹಿ, ಮೆಟ್ಟಿ, ಕೊಲ್ಲುತ್ತಲೂ, ಉಭಯಪಕ್ಷದವರೂ ಭಯಂಕರವಾಗಿ ಯುದ್ಧ ಮಾಡಿದರು. ಈ ರೀತಿಯಲ್ಲಿ ಘನಸಂಗ್ರಾಮ ವೆಸಗಿರಲು ಕಡೆಕಡೆಗೆ ರಾಕ್ಷಸಭಟರುಗಳ ಪ್ರಹಾರಗಳು ಮಿತಿಮೀರು, ಬಂದುವು. ರಣಾಂಗಣದ ಭೀಕರ ರೂಸನ್ನು ನೋಡುತ್ತ, ರಾಕ್ಷಸರು ವಿರಾನೆ ಶಸರವಶರಾದರು, ಅವರ ಏಟುಗಳ ಮುಂದೆ ದಿಕ್ಕಾಲಕರ ಸೈನ್ಯವು ಎದೆಗೊಟ್ಟು ನಿಲ್ಲಲಾರದೆ ಹೋಯಿತು. ದೇವೇಂದ್ರನು ಪಲಾ ಯನಸೂಕ್ತವನ್ನೋದಿದನು. ಅಗ್ನಿಯು ಕಾಲಿಗೆ ಬುದ್ದಿ ಹೇಳಿದನು, ಯ ಮನು ಶತ್ರುಗಳಿಗೆ ಬೆನ್ನು ತೋರಿಸಿದನು, ನಿನ್ನ ತಿಯು ನಗರಾಭಿಮು ಖನಾದನು. ವರುಣನು ವಿಶ್ರಾಂತಿಯನ್ನಪೇಕ್ಷಿಸಿದನು, ವಾಯುವಿಗೆ ಕೈ ತೋಪಚಾರ ಬೇಕಾಯಿತು. ಕುಬೇರನು ಚಿಕಿತ್ಸೆ ಮಾಡಿಸಿಕೊಳ್ಳುವು ದಕ್ಕೆ ಹೋದನು, ಈಶಾನನು ಶಕ್ತಿಗುಂದಿ ರಥದಲ್ಲಿ ಮಲಗಿದನು. ಹೀಗೆ