ಪುಟ:ಚೆನ್ನ ಬಸವೇಶವಿಜಯಂ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

** ಓಂ. ಶ್ರೀಗುರು ದಕ್ಷಿಣಾಮೂರ್ತಯೇನಮಃ. ಶಿ ಚನ್ಬಸ್ತ' ವಿಜಯಂ. ಮ೦ ಗ ಾ ಚ ರ ಣ ವು. ಶ್ರೀಮತ್ಸ್ಥಿದಾನಂದಸರೂಪನೂ ಶಾಂತನೂ ನಿತ್ಯನೂ ಆದ್ಯಂತ ರಹಿತನೂ ಜಗವಾದಿಗುರುವೂ ದೇವದೇವೋತ್ತಮನೂ ಭಕ್ತವತ್ಸಲನೂ ಸಗುಣನಿರುಣನೂ ಭಕ್ತಿಮಪ್ರದನೂ ಸಕಲವಿದ್ಯಾಮಲನೂ ಆದ ಶ್ರೀಮತ್ಸಾರತೀ ಪತಿಯನ್ನು ಸಿರಲಮನಸ್ಸಿನಿಂದ ಧ್ಯಾನಿಸಿ, ವೇದಾಂತ ವೇದೃನಾದ ಆ ಮಹಾದೇವನ ಪಾದಾರವಿಂದವಂ ಸೇವಿಸಿ, ಸರಮಂಗಳ ಮಯನಾದ ಆ ಪರಬ್ರಹ್ಮನನ್ನು ಅಡಿಗಡಿಗೆ ವಂದಿಸಿ, ಕರುಣಾಸಮುದ್ರ ನಾದ ಆ ದೇವನ ಚರಿತ್ರವನ್ನು ಹಾಡಿ ಹಾಡಿ ಧನ್ಯನಾಗುವೆನು. ವಿಷ್ಣು ಬ್ರಹೈಂದಾಬಸಕಲದೇವತೆಗಳೂ ಯಾವ ಮಹಾದೇವನ ಪಾದಾರವಿಂದವನ್ನ ರ್ಬೆಸಿ ಇಮ್ಮವರಗಳು ಪಡೆದರೆ ಆ ಜಗದೇಕಾರಾ ಧ್ಯನಾದ ಪರಶಿವನನ್ನು ನಿಸ್ಯಾನದಿಂದಲೂ ಅನನ್ಯಭಾವದಿಂದಲೂ ಆರಾ ಧಿಸಿ ಕೃತಕೃತ್ಯನಾಗುವೆನು. ಹೂವಿನಲ್ಲಿ ಪರಿಮಳ ವೂ, ಚಂದ್ರನಲ್ಲಿ ತಂಪೂ, ಕ್ಷೀರಸಮುದ್ರದ ಲ್ಲಿ ಮಾಧುರವೂ ಆಗದೆ ಇರುವಂತೆ ಪರಶಿವನಲ್ಲಿ ಅವಿನಾಭೂತವಾಗಿ ಸಪ್ರಕಾಶತಾಶಕ್ತಿಯಾಗಿ ಬೆರೆದಿರುವ ಆ ಜಗದಂಬಿಕೆಯನ್ನು ಭಕ್ತಿಭಾ ವಧಿಂದ ಪೊಡಮಡುವೆನು. ಜಗದಾದಿಮರಿಯಾದ ಶಂಕರನ ಸದ್ಧ ಗವೇ ತಾನೊಂದುರೂಪಾ ಗಿಯೂ, ಸಕಲಶಿವಗಣಕ್ಕಧೀಶನಾಗಿಯೂ, ನಂದಿಯೆಂಬ ಹೆಸರಿನಿಂದ