ಪುಟ:ಚೆನ್ನ ಬಸವೇಶವಿಜಯಂ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ಳಿ ಚನ್ನ ಬಸವೇಕವಿಜಯಂ (೪ುಂಜ ೨) [ಅಧ್ಯಾಯ %ಂಡಲವನ್ನೆಲ್ಲ ಕಿವುಡುಗೊಳಿಸುತ್ತಿದ್ದುವು. ಈ ಸೇನಾಪಾದಹತಿಯಿಂದ ಭೂಮಿಯೆಲ್ಲ ಧೂಳಮಯವಾಗಿ ಕಂಪಿಸುತ್ತಿದ್ದಿತು. ಆಗ ಇದಿರಿನಲ್ಲಿ ನೀ ಲಗಿರಿಯು ಕೈಕಾಲುಮೂಡಿ ನಡೆತರುತ್ತಿರುವಂತೆಯ, ಪ್ರಳಯಕಾಲದ ಮೇಘಗಳು ಗಜಾಕೃತಿಯನ್ನು ತಾಳಿ ಬರುವಂತೆಯ, ಗಜಾಸುರನು ನ ಹಾಗರ್ಜನೆಯನ್ನು ಮಾಡಿಕೊಂಡು ಬ್ರಹ್ಮಾಂಡವೆಲ್ಲ ನಡುಗುವಂತೆ ಶ್ಯಾ ಸೋಚ್ಛಾಸಗಳನ್ನು ಮಾಡುತ್ತ ಬರುತ್ತಿದ್ದನು. ಇದಿರಿಗೆ ಸಿಕ್ಕಿದ ಬೆಟ್ಟ ಗಳ ಬುಡಕ್ಕೆ ಕೊಂಬನ್ನು ಚುಚ್ಚಿ ಚಿಮ್ಮುತ್ತಲೂ, ಮಗ್ಗು ಅಲ್ಲಿದ್ದ ಮರ ಗಳನ್ನು ಸುಂಡಿಲಿನಿಂದ ಸುತ್ತಿ ಬುಡಸಹಿತ ಕಿತ್ತು ಬಿಸುಡುತ್ತಲೂ, ದೊ ಡ್ಡ ದೊಡ್ಡ ಗುಂಡುಗಳನ್ನು ಸುಂಡಿಲಿನಿಂದ ಸಿಡಿದು ದಿಕ್ಕು ದಿಕ್ಕಿಗೆ ಬೀರುತ್ತ ಲ, ಧೂಳಿಯನ್ನೆ ೩ ಬಿರುಸಾಗಿ ಬೀಸುತ್ತಲೂ ಆರ್ಭಟಿಸುತ್ತಲೂ ದೇವ ಸನೆಯನ್ನು ಸಂಧಿಸಿದನು. ಆಗ ಸೈನಿಕರೆಲ್ಲರೂ ಶಿವನೇ ! ಈತನೆ? ಲೋಕವನ್ನೆಲ್ಲ ತಿಂದು ತೇಗಿದ ಮಹಾಗಜಾಸುರನು ! ೨” »ಂದು ಕೂಗಿ ಕೊಂಡು, ಬಡಬಾಗ್ನಿಯನ್ನು ಸಮುದ್ರದ ನೀರು ಮುತ್ತುವಂತೆ ಎಲ್ಲರೂ ಕೌಲ್ಟಾಟೋಪದಿಂದ ಆನೆಯನ್ನು ಮುತ್ತಿದರು. ಒಂದು ಕಡೆಯಲ್ಲಿ ಕತ್ತಿ ಕೊಡಲಿ ಈಟ ಮೊದಲಾದ ಆಯುಧಗಳ ಪ್ರಹಾರವೂ ಒಂದುಕಡೆ ಕು? ತ ಗದೆ ಗಂಡಾಯಧಗಳ ಹೊಡೆತವೂ, ಬೇರೊಂದು ಕಡೆಯಲ್ಲಿ ಬಾಣ ಅಂಕುಶ ಮೊದಲಾದುವುಗಳ ಒಟೂ, ಅವಿಚ್ಛಿನ್ನವಾಗಿ ಆನೆಯಮೇಲೆ ಸು ರಿಯುತ್ತಿದ್ದವು, ವೈಯತುಂಬ ಬಾಣಗಳು ಕವಿದಿದ್ದ ಆ ಗಜರಾಜನು ಬೆತ್ತರ ಬೆಳೆಗಳು ಮುತ್ತಿದ ದೊಡ್ಡ ಬೆಟ್ಟದಂತೆ ಕಾಣುತ್ತಿ ದ್ದನು. ಹೀಗೆ ಬಲವಾದ ಪೆಟ್ಟಿಗೆ ಸಿಕ್ಕಿದ ದಾನವನು ಕ್ಷಣಕಾಲವೂ ನಿಂತಲ್ಲಿ ನಿಲ್ಲದೆ ಬಾಲ ವನ್ನು ಬಿಸಿ ಅಪ್ಪಳಿಸುತ್ತಲೂ, ಸುಂಡಿಲನ್ನು ರು ರಾಡಿಸಿ ಸದೆಬಡಿಯುತ್ತ ಲೂ, ಕೊಂಬಿನಿಂದ ಇರಿಯುತ್ತಲೂ, ಕಾಲಿಗೆ ಸಿಕ್ಕಿದವರನ್ನು ತುಯು ತಲೂ, ನಿಕ್ಕಿದವರನ್ನು ಹಿಡಿಹಿಡಿದು ಚಂಡಿನಂತೆ ಆಕಾಶಕ್ಕೆ ಎಸೆಯುತ್ತ ಲೂ, ಲೀಲಾಜಾಲದಿಂದ ಸೇನೆಯನ್ನು ಬರಿದುಮಾಡುತ್ತಿದ್ದನು. ಮತ್ತೆ ಮತ್ತೆ ಹೊಸಸೆನೆಯು ಕವಿಯುವುದಕ್ಕೂ, ಗಜರಾಜನು ಅದನ್ನು ಬಯ ಲುಮಾಡುವುದಕ್ಕೂ ಕೊನೆಮೊದಲಿಲ್ಲವಾಯಿತು. ಎಲ್ಲಿ ನೋಡಿದರೂ ಕೈ ಕಾಲುಡಿಮ,ರಕ್ತವನ್ನು ಕಾರಿ,ಪ್ರಾಣವನ್ನು ಬಿಟ್ಟೂ ಬಿಡುತ್ತಲೂ ಇರುವ