ಪುಟ:ಚೆನ್ನ ಬಸವೇಶವಿಜಯಂ.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

•°- * ಮಾತೀತಕ್ಟರಣವು h4 ತನ್ನ ಪೀಠದ ಒರಗಿನ ಮೇಲ್ಗಡೆಯಲ್ಲಿ ಅಲಂಕರಿಸಿ, ಚವನ್ನು ಹಾನಿ ಆಸನವನ್ನು ಮಾಡಿ ಕುಳಿತು, ದೇವತೆಗಳಿಗೆಲ್ಲ ಅಪ್ಪಣೆ ಕೊಟ್ಟು ಕಳುಹಿ, ಸುಖಮಯನಾಗಿದ್ದನೆಂದು ಚೆನ್ನಬಸವೇಶನು ನುಡಿದ ನೆಂಬಿಲ್ಲಿಗೆ ಆರನೆ ಅಧ್ಯಾಯವು ಸಂಪೂರ್ಣವು. ~****- ೭ ನೆ ಅಧ್ಯಾಯವು. ಲಿಫ್ ಪಾ ರತಿ ತ ಪ ಕೃ ರಣ ವು . ಎಲೆ ಸಿದ್ದರಾಮೇಶನೆ ! ಪೂರದಲ್ಲಿ ಹಿಮವಂತನ ಪತ್ನಿಯಾದ ಮೇ ನಕಿಯು ಶಂಕರಿಯನ್ನು ಕುರಿತು ಕಠಿನವಾದ ತಪಸ್ಸನ್ನಾಚರಿಸಿದಳು. ಶಿವೆಯು ಮೆಚ್ಚಿ ಪ್ರತ್ಯಕ್ಷಳಾಗಿ, ನಿನ್ನಿಷ್ಟವೇನೆಂದು ಕೇಳಲು, “ ನೀ ನು ಮಗಳಾಗಿ ನನ್ನ ಹೊಟ್ಟೆಯಿಂದ ಜನಿಸಬೇಕು ” ಎಂದು ಬೇಡಿದಳು. ಭವಾನಿಯು ಹಾಗೆಯೇ ಆಗಲೆಂದೊಪ್ಪಿ ವರವನ್ನು ಕೊಟ್ಟಿದ್ದಳು. ಆ ದಕ್ಷಯಾಗದಲ್ಲಿ ದಕ್ಷನ ಸಂಬಂಧದ ತನ್ನ ದೇಹವನ್ನು ಯೋಗಾಗ್ನಿಗೆ ಆಹುತಿಮಾಡಿ ವಿಸರ್ಜಿಸಿದ ಬಳಿಕ, ಮೇನಕಿಗೆ ಮುಂಚೆ ಕೊಟ್ಟಿದ್ದ ವರ ದ ಪರಿಪಾಲನಾರ್ಥವಾಗಿ ಆಕೆಯ ಗರ್ಭವನ್ನು ಪ್ರವೇಶಿಸಿ ವಿಂಡವಾಗಿ ಬೆ ಳೆದಳು, ನವಮಾಸವು ತುಂಬಿದ ಬಳಿಕ ಶುಭಮಾಸ ಶುಭತಿಥಿ ಶುಭನ ಕತ್ರ ಶುಭಲಗ್ನದಲ್ಲಿ ಮೇನಕಿಯು ಲಿಂಗಧಾರಿಣಿಯಾದ ಸುಕುಮಾರಿಯ ನ್ನು ಹಡೆದಳು. ಜನನವಾದ ವಾಕ್ಕಿಯನ್ನು ಗಿರಿರಾಜನು ಕೇಳಿ ಬಂದು ಶಿಶುವನ್ನು ನೋಡಿ ಸಂತೋಷಪಟ್ಟು, ತಮ್ಮ ಕುಲಗುರುವಿನಿಂದ ದೀಕ್ಷೆ ಮಾಡಿಸಿ, ಉಮೆ ಯೆಂದು ನಾಮಕರಣವನ್ನು ಮಾಡಿದನು. ಈ ಗಿರಿ ಜಾತೆಯು ನಗರಾಜನ ಮನೆಯಲ್ಲಿ ಶಿವನ ಪುಣ್ಯವೇ ಸಾಕಾರವಾಗಿ ವೃದ್ಧಿ ಗೊಳ್ಳುತ್ತಿರುವಂತೆಯೂ, ಶಂಕರನ ಮೋಹನಮಂತ್ರ ಶಕ್ತಿಯೇ ಬೆಳೆ ಯುತ್ತಿರುವಂತೆಯೂ, ಶಿವನ ಸೌಖ್ಯಸಾರವೇ ಹೆಣ್ಣಿನ ರೂಪದಿಂದ ಅಭಿ ವೃದ್ದವಾಗುತ್ತಿರುವಂತೆಯ, ಸಾಂದ‌ತೇಜೋವೈಭವದಿಂದ ಬೆಳೆಯು