ಪುಟ:ಚೆನ್ನ ಬಸವೇಶವಿಜಯಂ.djvu/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಿ ಕಿ ಚೆನ್ನ ಬಸವೇಕೆವಿಜಯಂ (ಕಾಂಗ ಎ) ಅಧ್ಯಾಯ ಗಳೊಡನೆ ನದೀ ನಾರಿಯು ಇದಿರೊಳ್ಳುವುದಕ್ಕೆ ಸಿದ್ಧಳಾಗಿರುವಂತೆ ತೋ ರುತ್ತಿದ್ದಳು. ಆ ನದಿಯ ಇಕ್ಕೆಲದಲ್ಲಿ ಫಲಭಾರದಿಂದ ಹಲಸು ನಿಂಬೆ ನಾವು ನೆರಿಲು ದಾಳಿಂಬೆ ಖರ್ಜೂರ ಕಿತ್ತಿಳೆ ಬಾಳೆ ತೆಂಗು ಅಡಕೆ ಬೇ ಲ ಹತ್ತಿ ಮೊದಲಾದ ಮರಗಳು ಬಾಗಿ ನಿಂತಿರಲು, ತುಂಗಭದ್ರೆಯು ಪಾರ ತಿಯ ಪಾದಕ್ಕೆ ವಿವಿಧಫಲಾವಳಿಗಳನ್ನರ್ಪಿಸಿ ದೀರ್ಘದ'. ಡವಾಗಿ ನಮಸ್ಕ ರಿಸುವಂತೆ ತೋರುತ್ತಿದ್ದಳು. ಆ ನದಿಯ ಸೊಗಸನ್ನು ನೋಡಿ ಮುಂದ ಕ್ಕೆ ಸಾಗಲು, ಶಿವನು ನೆಲಸಿರುವ ಮಹಾಮಹಿಮಾಶ್ರಯವಾದ ಸಂಪಾ ಕ್ಷೇತ್ರವು ಕಾಣಿಸಿತು ಅಲ್ಲಿ ವಿಮಾವನ್ನು ನಿಲ್ಲಿಸಿ ಇಳಿದರು. ಪರ ತರಾ ನು ಮುಂದಾಗಿ ಹೋಗಿ, ಶಿವನು ಕುಳಿತಿದ್ದ ಆಶ್ರಮದ ಹೊರಬಾ ಗಿಲಲ್ಲಿ ಕಾದಿದ್ದ ನಂದೀಶ್ವರನನ್ನು ಕಂಡು, ಮಾದಕ್ಕೆ ನಮಸ್ಕರಿಸಿ, ತನ್ನ ಆಗಮನದ ಉದ್ದೇಶವನ್ನು ಬಿಸಿ, ಆತನಪ್ಪಣೆಯನ್ನು ಪಡೆದು, ಒ೪ಕ ಮಗಳನ್ನು ಕುರಿತು ತಾಯಿ ! ಇದುವರೆಗೆ ನಿನ್ನ ಪವಿತ್ರವಾದಾ ಶಯದಿಂದ ನಾವು ಸುಖನಿದೆವು, ನಮ್ಮ ವಂಶವು ಉದ್ದಾರವಾಯಿತು; ನಿನ್ನ ಪತಿಯು ಯೋಗಿಯಾಗಿ ಈ ಗುಹಾಂತರದಲ್ಲಿರುವನು. ಆತನನ್ನೂ ಲಿಸಿಕೊಂಡು ನಿನ್ನಿಷ್ಟಾರ್ಥವನ್ನು ಸಾಧಿಸಿಕೊಳ್ಳುವುದಕ್ಕಾಗಿ ನೀನು ಹೇಗೆ ನಡೆದುಕೊಳ್ಳಬೇಕೋ ಅದನ್ನು ತಿಳಿದು ನಡೆದುಕೊಳ್ಳೆಂದು ಹೇಳಿ, ಜಯ ವಿಜಯ ಎಂಬ ಇಬ್ಬರು ಸಖಿಯರನ್ನು ಜತೆಗೆ ಬಿಟ್ಟು, ತಾನು ಅಪ್ಪಣೆಯನ್ನು ಪಡೆದು ಹಿಂದಿರುಗಿದನು, ಪಾರತಿಯು ಪಂಪಾಕ್ಷೇತ್ರದ ಮಹಾ ಯಪ್ಪಾಶ್ರಮದ ಚೆಂದವನ್ನೆಲ್ಲ ನೋಡಿ ಹರ್ಷಗೊಂಡಳು. ಎತ್ತ ನೋಡಿದರೂ ಹೋಮಕುಂಡದಿಂದ ಆಕಾಶಕ್ಕೇಳುವ ಹೊಗೆ, ಎಲ್ಲಿ ನೋ ಡಿದರೂ ವೇದಮಂತ್ರಘೋಷ, ಎತ್ತ ತಿರುಗಿದರೂ ಪೂಜೋಪಕರಣಗ ೪ –ಣಿಮಾಡುವ ಮಮ್ಮಿನಾರಿಯರು. ರುದ್ರಾಕ್ಷಗಳನ್ನು ಪೋಣಿಸುವ ತ ರುಣರು, ನಾರುಡೆಗಳನ್ನು ತೊಳೆಯುವ ಅಂಗನೆಯರು, ದರ್ಭಾಸನಗಳ ನ್ನು ನಿದ್ದೆ ಮಾಡುವ ವೃದ್ದ ಮಗಳು, ಹೂವುಗಳನ್ನೆತ್ತುತ್ತಿರುವ ಬಾಲಿಕೆ ಯರು, ಕಣ್ಣಿಗೆ ಕಾಣಿಸುತ್ತಿದ್ದರು. ಅಲ್ಲಿರುವ ಕವಿಗಳು ಋಷಿಗಳಾಶ್ರ ಮಕ್ಕೆ ನಾನಾವಿಧಫಲಗಳನ್ನೂ ದರ್ಭಗಳನ್ನೂ ಸಮಿತ್ತುಗಳನ್ನೂ ತೆಗೆದು ಕೊಂಡು ಹೋಗಿ ಒಪ್ಪಿಸಿ, ವೃದ್ದರ ಪಾದಗಳನ್ನೊತ್ತಿ ಸೇವಿಸಿ, ಮುನಿಗ