ಪುಟ:ಚೆನ್ನ ಬಸವೇಶವಿಜಯಂ.djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(v4 ಚಾತೀತಶ್ಚರಣವು ಆಪ್ಪಣೆಯಂತೆ ನಡೆದುಕೊಳ್ಳುತ್ತಿದ್ದುವು. ಅಲ್ಲಿ ಗಾಳಿಯು ಬಿರುಸಾಗಿ ಬೀಸುತ್ತಿರಲಿಲ್ಲ, ತುಂಬಿಯು ಹೂವುಗಳನ್ನು ತುಳಿದು ಕಂದಿಸಲಿಲ್ಲ, ಸೂನು ಬಿಸಿಲನ್ನು ತೀಕ್ಷ್ಯವಾಗಿ ಚೆಲ್ಲುತ್ತಿರಲಿಲ್ಲ, ಕಾಳ್ಳಿಚ್ಚು ಹೊತ್ತಿ ಬೇಯಲು ಧೈಗೊಳ್ಳುತ್ತಿರಲಿಲ್ಲ, ಮೋಡಗಳು ಬಿರುಮಳೆಯನ್ನು ಹೊ ಯ್ಯುತ್ತಿರಲಿಲ್ಲ; ಸಣ್ಣಿಲಿಗಳು ಬೆಕ್ಕುಗಳು ಹಾವುಗಳು ಕಿರಗಳು ಒಂದು ಕಡೆ ಕೂಡಿ ಆಟವಾಡುತ್ತಿರುವುವು. ತೋಳ ನರಿ ಮೊಲಗಳು ಒಂದು ಕಡೆಯ, ಆನೆ ನಿಷ್ಕಗಳು ಬೇರೊಂದು ಕಡೆಯ, ಹುಲ್ಲೆ ಹುಲಿಗಳು ಮಗುಳೊಂದು ಸ್ಥಲದಲ್ಲ, ಶರಭ ಭೇರುಂಡಗಳು ಇನ್ನೊಂದು ಬಳಿಯ ಲ್ಲಿಯೂ ಜಾತಿ ವೈರವನ್ನು ಬಿಟ್ಟು ಪರಸ್ಪರ ವಿನೋದಗಳಿಂದ ಕಾಲಹರಣ ಮಾಡುತ್ತಿರುವುವು. ಆ ಪುಣ್ಯಾಶ್ರಮದ ಪ್ರಭಾವವು ಹೇಗಿರಬಹುದು ! ಇಂತಪ್ಪ ಮಸ್ಥಾಶ್ರಮವನ್ನು ನಗಜಾತೆಯು ನೋಡಿ, ಭಕ್ತಿ ಸಿದ್ದಮನ ಸ್ವಳಾಗಿ, ಮುಂದುವರಿದು, ನಿಶ್ಯಬ್ದವಾಗಿರುವ ಪರಶಿವಾಶ್ರಮವನ್ನು ಹೊ ಕು, ತೇಜೋಮೂರಿಯಾಗಿ ಅಂತರ್ದಯಿಂದ ಕರೂರದ ರಾಶಿ ಯಂತೆ ಕುಳಿತಿದ್ದ ಮಹಾದೇವನನ್ನು ಕಂಡಳು. ಆನಂದಾತಿರೇಕದಿಂದ ದೇಹದಲ್ಲಿ ರೋಮಾಂಚವಾಗಿ ನಯನದಲ್ಲಿ ಬಾಷ್ಪಗಳು ತುಂಬಿದುವು. ದೂರದಲ್ಲೆ ದೀರ್ಘದಂಡನಮಸ್ಕಾರ ಮಾಡಿ, ಭಯಭಕ್ತಿಯಿಂದ ಸ್ತು ತಿಸಿ, ಸವಿಾಪಕ್ಕೆ ಬಂದು, ಏಕಾಗ್ರಚಿತ್ತದಿಂದ ಪೂಜಿಸ ತೊಡಗಿದಳು. ಪ್ರತಿದಿನವೂ ಉರಃಕಾಲಕ್ಕೆ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ, ನಾ ರುನುಡಿಯನ್ನು ೬, ಹಣೆಗೆ ಶುಭವಾದ ಭಸಿತವನ್ನು ಧರಿಸಿ, ಕಂಠದಲ್ಲಿ ರುದ್ರಾಕ್ಷಮಾಲೆಯನ್ನು ತಾಳಿ, ಆಗತಾನೇ ಅರಳಿದ ಹೂವುಗಳನ್ನೂ ಚಿಗು ರಾದ ಬಿಎಂನನ್ನ ಆರಿಸಿ ಎತ್ತಿ ತಂದು, ಸರಗಳನ್ನು ಮಾಡಿ, ಶಿವನ ಪಾ ದಾದಿ ಸರಾಂಗಕ್ಕೂ ಅಲಂಕರಿಸಿ, ನಮಿಸಿ, ಸ್ತುತಿಸುತ್ತಿರ್ದಳು, ಇತ್ಯ ಲೋಕದಲ್ಲಿ ತಾರಕಾಸುರನೆಂಬ ಖಳರಾಕ್ಷಸನೊಬ್ಬನು ಬ್ರಹ್ಮನ ವರ ದಿಂದ ಪ್ರಬಲಿಸಿ, ಸ್ವರ್ಗ ಮರ್ತ ಪಾತಾಳಗಳನ್ನೆಲ್ಲ ಜೈನಿ, ಇಂದ್ರಾದಿ ದಿಕ್ಷಾಲಕರನ್ನೆಲ್ಲ ಬಡಿದೋಡಿಸಿ, ಅವರ ದುರ್ಗಗಳನ್ನೆಲ್ಲ ತನ್ನ ತಾವ ಸ್ನಾಗಿ ಮಾಡಿಕೊಂಡನು. ದೇವತೆಗಳೆಲ್ಲರೂ ವೇಷಾಂತರವನ್ನು ಧರಿಸಿ, ತಮ್ಮ ತಮ್ಮ ಹೆಂಡತಿಯರೊಡಗೂಡಿ ಮೇರುಪರತದ ಗುಹೆಗಳೊಳಗೆ ಅ