ಪುಟ:ಚೆನ್ನ ಬಸವೇಶವಿಜಯಂ.djvu/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

abv ಚನ್ನಬಸವೇಶವಿನಹುಂ (ಕಾಂಡ4) [ಅಧ್ಯಾಯ ಡಿದನು. ಸಭಾಸದರೆಲ್ಲರೂ ಜಯಘೋಷದಿಂದ ದಂಪತಿಗಳ ಶಿರಸ್ಸಿನ ಮೇ ಲೆ ಮುತ್ತಿನಕ್ಷತೆಯನ್ನು ಸುರಿದರು, ದೇವನಾರಿಯರು ಶೋಭನವನ್ನು ಹಾ ಡಿದರು. ಬಳಿಕ ಸಭಾಸದರೆಲ್ಲರಿಗೂ ತಾಂಬೂಲಾದಿ ಮಾದೆಗಳು ಜರು ಗಿದುವು, ಮುನಿನಾರಿಯರು ಸತಿಪತಿಯರಿಗೆ ಆರತಿಯನ್ನು ಬೆಳಗಿದರು. ದಂಪತಿಗಳು ಕೈಹಿಡಿದು ಒಳಮನೆಯನ್ನು ಹೊಕ್ಕು ಬೂವವನ್ನು ಸವಿಯು ವುದೇ ಮೊದಲಾದ ಕಾಗ್ಯಗಳನ್ನು ಜರುಗಿಸಿದರು, ಸಭಾಸದರೆಲ್ಲರೂ ಮೈ ಪ್ಯಾನ್ನ ಭೋಜನದಿಂದ ಪರಿತೃಪ್ತರಾದರು, ಪುಪ್ಪಗಂಧತಾಂಬೂಲಾದಿಗ ೪೦ದ ಸಂತೋಷಗೊಂಡರು. ಅಂದಿನಿಂದ ಪ್ರತಿದಿನವೂ ಹಗಲು ಸಾ .ಯಂಕಾಲಗಳಲ್ಲಿ ದಂಪತಿಗಳು ಹಸೆಯಲ್ಲಿ ಕುಳಿತಾಗ ನನ ಗಾನೋತ್ಸ ವಗಳು ನಡೆಯುತ್ತಿದ್ದುವು, ದಂಪತಿಗಳಲ್ಲಿ ಹೂವಿನ ಚಂಡಾಟ ಉರುಟಣೆ ಮೊದಲಾದ ವಿನೋದಗಳು ಜರುಗುತ್ತಿದ್ದುವು. ನಾಲ್ಕನೆಯ ದಿನದ ರಾತ್ರಿ ಯಲ್ಲಿ ನಾಕವಲ್ಲಿಯ ಮಹೋತ್ಸವವು ಜರುಗಿತು. ಬಳಿಕ ಗಿರಿರಾಜನು ನನ ರತ್ನಖಚಿತವಾದ ಪಲ್ಲಕ್ಕಿಯಲ್ಲಿ ಪಾರತೀಪರಮೇಶ್ವರರನ್ನು ಕುಳ್ಳಿರಿಸಿ, ಸಕಲ ಚತುರಂಗಸೈನ್ಯದಿಂದಲೂ, ಮಹಾದೇವತಾಸ್ತೋಮದಿಂದಲೂ, ವಾದ್ಯಘೋಷದಿಂದಲೂ ಕೂಡಿ ಉತ್ಸವಗೊಳಿಸಿದನು, ಎರಡು ಸಾಲುಗಳ ಪಂಜುಗಳ ದೀಪಾವಳಿಯು ರಾತ್ರಿಯನ್ನು ಹಗಲಿನಂತೆ ಮಾಡಿದ್ದುವು. ಹರಿಬ್ರಹ್ಮರೂ ಇಂದ್ರಯವಾದಿಗಳೂ, ಗಿರಿರಾಜನೂ, ಸಪ್ತ ಮಹರ್ಮಿಗ ಳೂ, ಪಲ್ಲಕ್ಕಿಯ ಸವಿಾಪದಲ್ಲೇ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದರು ಅಪೂ ರೈತರವಾದ ಈ ಮಹೋತ್ಸವವನ್ನು ಪುರಜನರೆಲ್ಲರೂ ನೋಡಿ ಪರವಾ ನಂದಗೊಂಡು ಕೃತಾರ್ಥರಾದರು. ಅದರ ಮರುದಿವಸ ಅತ್ಯಂತ ಸಂಭ ಮದಿಂದ ಗಿರಿರಾಜನು ಬೀಗರ ಔತಣವನ್ನು ಮಾಡಿಸಿ ಸಂತೋಷಗೊಳಿಸಿ ದನು. ಎಲ್ಲರಿಗೂ ಗಂಧಮಾಲ್ಟಾವಿಗಳನ್ನಿತ್ತು ವಸ್ತ್ರ ಭೂಷಣಾದಿಯಾದ ಉಡುಗೊರೆಗಳನ್ನು ಯಥಾಶಕ್ತಿಯಾಗಿ ಕೊಟ್ಟನು. ಅನಂತರ ಅತ್ಯಂತವಿ ಕಾಲವಾಗಿಯೂ ನವರತ್ನ ಖಚಿತವಾಗಿಯೂ ಮಾಡಿಸಿದ್ದ ಕೊಳದಲ್ಲಿ ಕೇಸರಿ, ಶ್ರೀಗಂಧ, ಕರ್ಪೂರ, ಕಸ್ತೂರಿ ಮೊದಲಾದ ಗಂಧದ್ರವ್ಯಗಳನ್ನು ಕೂಡಿ ನಿ ಮಾಡಿದ ಓಕುಳಿಯ ನೀರನ್ನು ತುಂಬಿಸಿ, ವಸಂತೋತ್ಸವವನ್ನು ನಾ ಧಿಸಿದನು. ಹರಿಬ್ರಹ್ಮಾದಿಗಳೆಲ್ಲರೂ ಮಧ್ಯಾಹ್ನದ ಭೋಜನವನ್ನು ತೀ