ಪುಟ:ಚೆನ್ನ ಬಸವೇಶವಿಜಯಂ.djvu/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

hod ಗಿರಿಜಾ ಕಲ್ಯಾಣವು cರ್b ರಿಸಿಕೊಂಡು ಸರ್ಣರಜತದ ಕೈಯಂಡೆಗಳನ್ನು ಹಿಡಿದು ಹಿಡಿದು ವಸಂತ ಮಂಟಪಕ್ಕೆ ಬಂದು, ಶಂಕರೀ ಶಂಕರರು ಆರೋಗಣೆಗೊಂಡು ಹಸ «ುಖರಾಗಿ ವಸಂತಮಂಟಪಕ್ಕೆ ಬಂದು, ನಿದ್ದ ಮೂಡಿದ್ದ ನಿಷ್ಟಾ ಸನದಲ್ಲಿ ಮೂರಿಗೊಂಡರು, ವಾದ್ಯಗಳು ಇಂಪಾಗಿ ಬಾರಿಸಲ್ಪಟ್ಟುವು, ಮೊದಲು ಪಾರತಿಯು ಶ್ರೀಗಂಧ ಹಲವನ್ನು ತುಂಬಿದ ಪೊಟ್ಟಣದಿಂದ ಶಿವನನ್ನು ಹೊಡೆದಳು. ಬಳಿಕ ಶಿವನು ಕಸ್ತೂರೀ ಜಲವನ್ನು ತುಂಬಿದ ಪೊಟ್ಟಣದಿಂ ದ ಸರತಿಯನ್ನು ಹೊಡೆದನು, ಮತ್ತೆ ಶಂಕರಿಯು ನಸುನಗುತ್ತ ಶಿವನ ಮೇಲೆ ಇಟ್ಟಳು. ಆಗ ಶಿವನು ಎಲ್ಲರಿಗೂ ವಸಂತಕೀತೆಗೆ ಅಪ್ಪಣೆಕೊಟ್ಟ ನು, ಹರಿಬ್ರಹ್ಮರು, ದಿಕ್ಕಾಲಕರುಗಳು, ಅಷ್ಟವಸುಗಳು, ಮನುಮುನಿಗೆ ಳು, ವಿದ್ಯಾಧರ ಕಿನ್ನರರು ಮೊದಲಾದವರು ಸೇರಿ ಚಿನ್ನದ ಬೇರೊಳವೆ ಗಳನ್ನೂ ಅಂಡೆಗಳನ್ನೂ ಹಿಡಿದು ನೀರಾಟಕ್ಕೆ ನಿಂತರು. ಅಕ್ಷ್ಮಿ, ಸರಸ್ಸು ತಿ, ಶಚಿ, ರೋಹಿಣಿ ಮೊದಲಾದ ದೇವಾಂಗನಾವರೈಯರೂ, ರಂಭೆ ಊರಶಿ ತಿಲೋತ್ತಮೆ ಸಂಕೇತಿ ಮೊದಲಾದ ಅಸ್ಸರನ್ತಿ ಯರೂ ಒಂ ದೊಂದು ಕಡೆ ಸೇರಿ ಆಟಕ್ಕೆ ನಿಂತ ಕು. ಜೇನುಮೇಣದ ಚಂಡಿನೊಳಗೆ ಕೆಸರಿಯನೀರನ್ನು ತುಂಬಿ ಒಬ್ಬರ ಮುಖಕ್ಕೊಬ್ಬರು ರಭಸದಿಂದ ಹೊ ಡೆಯಲು, ಚಂಡು ಒಡೆದು ನೀರಿನ ಹನಿಯು ಕೆಚ್ಚನೆ ಸಿಡಿದು ಎಲ್ಲಕಡೆ ಗೂ ತುಂಬಿಕೊಳ್ಳುತ್ತಿರಲಾಗಿ, ನಾರಿಯರ ಮುಖವೆಂಬ ಕಮಲದಮೇಲೆ ಚಂಡೆಂಬ ಚಂದ್ರನು ಬಿದ್ದು ಮುಷ್ಟಿಯುದ್ಧವನ್ನು ಮಾಡುತ್ತಿರಲಾಗಿ ಅ ವರೀರರ ಕೋಪಾಗ್ನಿಯ ಕಿಡಿಯು ಜಲಕಣದ ರೂಪವಾಗಿ ಹಾರುತ್ತಿದೆ ಯೋ ಎಂಬಂತೆ ಕಾಣುತ್ತಿದ್ದಿತು. ಒಂದು ಕಡೆ ಲಕ್ಷ್ಮಿಯು ತನ್ನ ಗಂ ಡನ ಶರೀರದ ಮೇಲೆ ಕೇಸರಿಯ ಜಲವನ್ನೆರಚಲು, ಆ ಶರೀರವು ಮಿಂಚಿ ನಿಂದ ಕೂಡಿದ ಮೇಘದಂತೆ ಕಾಣಿಸಿತು. ಹರಿಯು ಲಕ್ಷ್ಮಿಯ ಮೇಲೆ ಶ್ರೀಗಂಧವನ್ನು ಎರಚಲು, ಪಾದರಸವನ್ನು ಲೇಪಿಸಿದ ಚಿನ್ನದ ಪುತ್ತ೪ಯಂ ತೆ ಕಾಣಿಸಿದಳು. ಬ್ರಹ್ಮನು ಸರಸ್ವತಿಯ ಮೇಲೆ ಕಸ್ತೂರಿಯ ಜಲವನ್ನೆ ರಚಲು, ಆಕೆಯು ಚಂದ್ರಕಾಂತವಿಲಯ ಪ್ರಳಯಮೇಲೆ ಮಬ್ಬು ಕವಿ ದಂತೆ ಕಾಣಿಸುತ್ತಿದ್ದಳು. ಸರಸ್ವತಿಯು ಪತಿಯಮೇಲೆ ಶ್ರೀಗಂಧದ ನೀ ರನ್ನೆರಚಲು, ಆತನು ವೆರಪ ತದಮೇಲೆ ಹಿಮವು ಮುಸುಕಿರವಂತೆ

  • ೭) '

ಬು ?