ಪುಟ:ಚೆನ್ನ ಬಸವೇಶವಿಜಯಂ.djvu/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ ೧೧] ಕುಮಾರೋತ್ಪತ್ತಿಯು ನೂ ನಿಲ್ಲಿಸಲ್ಪಟ್ಟರು, ತಾರಕಾಸುರನು ಈ ಸೇನಾರಚನೆಯನ್ನು ನೋಡಿ ಸಂತೋಷ್ಟಿಸಿ, ದಳವಾಯಿಗೂ ಸೇನಾಮುಖಂಡರಿಗೂ ವೀಳಯವನ್ನು ಕೊಟ್ಟು ಉತ್ಸಾಹಿಸಿ, ತಾನು ಮೇಲ್ಯಾವಲಿನಲ್ಲಿ ನಿಂತುಕೊಂಡನು. ದೇವ ದಾನವಸೇನೆಗಳೆರಡೂ ಮುಂಗಡೆಯಲ್ಲಿ ಸಂಧಿಸಿದುವು. ಉಭಯಪಕ್ಷದ ವೀರರೂ ಮೂದಲಿಸಿ ನಿಕ್ಕನಾದವನ್ನು ಮಾಡಿ ಧನುಸ್ಸುಗಳನ್ನು ಧ್ವನಿ ಮಾಡಿ ಬಾಣವನ್ನು ಹೂಡಿ ಪ್ರಯೋಗಿಸುತ್ತ ಬಂದರು ನಿಮಿಷ ನಿಮಿ ಪಕ್ಕೆ ಕೋಪವು ಉಕ್ಕೇರಲು, ಬಿಲ್ಲಿನವರು ಬಿಲ್ಲಿನವರೊಂದಿಗೂ, ಕತ್ತಿ ಯವರು ಖಡ್ಡ ದವರೊಡನೆಯೂ, ಭಲ್ಲೆ ಯದವರು ಭರ್ಜಿಯವರೊಡನೆ ಯೂ, ಆನೆಯವರು ಆನೆಯವರಮೇಲೆಯೂ, ರಾವುತರು ರಾವುತರವೇ ಲೂ, ರಥಿಕರು ರಥಿಕರಮೇಲೂ ಬಿದ್ದು ದೇಹಾಭಿಮಾನವನ್ನು ತೊರೆದು ಕಾದಾಡುತ್ತಿದ್ದರು. ಒಬ್ಬರಮೇಲೊಬ್ಬರು ಬಿದ್ದು ಮುಂದೆ ಸಾಗುತ್ತ ಲೂ, ಕೈಗೆ ಸಿಕ್ಕಿದವನ ಮುಂದಲೆಯನ್ನು ಹಿಡಿದು ಬಗ್ಗಿಸಿ, ಬಲಗೈ ಕತ್ತಿ ಯಿಂದ ತರಿಯುತ್ತಲ, ದೂರದಲ್ಲಿದ್ದ ಶತ)ವನ್ನು ಭಯದಿಂದ ಇರಿಯು ತಲೂ, ಮಗ್ಗುಲಿಗೆ ಬಂದವನನ್ನು ಈಟಿಯಿಂದ ತಿವಿಯುತ್ತಲೂ, ಮೂ ದಲಿಸಿದವನನ್ನು ಮತ್ಸರಿಸಿ ಹಾರಿ ಒಡೆದು ಕೆಡವಿ ಹೊಟ್ಟೆಯ ಬಗಿಯು ತಲೂ, ತಲೆಗಳನ್ನೂ ಬಾಹುಗಳನ್ನೂ ಕಡಿದು ಹಾರಾಡಿಸುತ್ತಲೂ, ಮುಂದೆ ಹೆಣಗಳನ್ನು ತುಳಿದು ವಿರಾವೇಶದಿಂದ ಮಂಡಿಯೂರಿ ಕುಳಿತು ಬಾಣಗಳನ್ನೆಸೆದು ಸಿಕ್ಕನಾದವನ್ನು ಮಾಡುತ್ತಲೂ, ಆನೆಗಳ ಸುಂಡಿಲಿ ನಿಂದ ಪ್ರತಿಪಕ್ಷದ ಆನೆಯ ಮೇಲೆ ಕುಳಿತಿರುವ ಮಾವುತನನ್ನು ಎಳೆಯಿರಿ ಕೆಳಕ್ಕೆ ಕೆಡಹುತ್ತಲೂ, ಆನೆಗಳನ್ನು ಪ್ರತಿಸೇನೆಯಲ್ಲಿ ನುಗ್ಗಿ ಸಿ ಕೊಂಬಿ ಗೆ ಸಿಕ್ಕಿಸಿರುವ ಅಲಗುಗಳಿಂದ ಶತ್ರುಗಳನ್ನು ಇರಿಸುತ್ತಲೂ, ರಾವುತರು ವಾಫೆಗಳನ್ನೆಳೆದು ಕುದುರೆಗಳನ್ನು ಚಿಮ್ಮಿಸಿ ಎರಡು ಕೈಗಳಿಂದಲೂ ಇಕ್ಕ ಡೆಗಳಲ್ಲಿ ಸಿಕ್ಕಿದ ಭಟರನ್ನು ತರಿಯುತ್ತಲೂ, ರಥಿಕರು ವರ್ಷಾಕಾಲದ ಮೇಘಗಳಂತೆ ಬಾಣವರ್ಷವನ್ನು ಕರೆದು ಪ್ರತಿಪಕ್ಷದ ರಥ ಸಾರಥಿ ಹಯಾ ದಿಗಳನ್ನು ನುಚ್ಚು ಮಾಡುತ್ತಲೂ, ಮಹಾಭೀಕರವಾಗಿ ಕಾದಾಡುತ್ತಿದ್ದ ರು, ಮುಹೂರ್ತಕಾಲದೊಳಗಾಗಿ ಸೇನೆಯ ಮುಂಭಾಗವು ಎರಡು ಕಡೆ ಯಲ್ಲ ಬಯಲಾಗುತ್ತ ಬಂದಿತು, ಮಾಂಸರಾತಿಗಳು, ಮೂಳೆಗಳ ಒಟ್ಟಿ 29