ಪುಟ:ಚೆನ್ನ ಬಸವೇಶವಿಜಯಂ.djvu/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ch+ ಚನ್ನ ಬಸವೇಶವಿಜಯಂ, (ಕಾಂಡ 4) [ಅಧ್ಯಾಯ ಲುಗಳು, ರಕ್ತದ ಕಾಿಗಳು, ಕಾಲು ತಲೆ ತೋಳು ತೊಡೆಗಳ ತುಂಡು ಗಳು ರಣಾಂಗಣದಲ್ಲಿ ತುಂಬಿ ತುಳುಕುತ್ತಿದ್ದುವು. ಮುಂದಿನ ಸೈನ್ಯವು ನಷ್ಮವಾದುದನ್ನು ವಕ್ರನಾಭನು ನೋಡಿ, ರೋಷದಿಂದ ಮಹಾಗರ್ಜನೆ ಯನ್ನು ಮಾಡಿ, ದೈತನಾಯಕರ ಸೇನೆಯೊಡನೆ ಕೂಡಿ ತಾನೇ ದೇವಸೇ ನೆಯಮೇಲೆ ಯುದ್ಧಕ್ಕೆ ಅನುವಾಗಿ ನಿಂತ ಬಲಶಾಲಿಯಾದ ದೇವೇಂ ದ್ರನ ಪರುಷವನ್ನು ನೋಡುತ್ತೇನೆ, ಮುಂದಕ್ಕೆ ಬರಹೇಳಿ ?” ಎಂದು ನುಡಿಯುತ್ತ ರಥವನ್ನು ಮುಂಗಡೆಗೆ ಸಾಗಿಸಿದನು. ಎಂದು ಚೆನ್ನಬಸ ವೇಶನು ನುಡಿದನೆಂಬಿಲ್ಲಿಗೆ ಹನ್ನೊಂದನೆ ಅಧ್ಯಾಯವು ಸಂಪೂರ್ಣವು. ~**#*- ೧೨ ನೆ ಅಧ್ಯಾಯ. ಕು ಮಾ ರ ತಾ ರ ಕ ಸೇ ನಾ ಯು ದ್ದವು . ಎಲೆ ಸಿದ್ದರಾಮೇಶನೆ ಕೇಳು, ಅತ್ತ ರಾಕ್ಷಸ ಸೇನೆಯಲ್ಲಿ ವಜ) ನಾಭನು ಪ್ರಮುಖರಾಕ್ಷಸರೊಡನೆ ಕೂಡಿ ಇದಿರಾಗಲು, ಅದನ್ನು ಕಂ ಡು ಇತ್ತ ದೇವಸೇನೆಯಲ್ಲಿ ಇಂದ್ರಪ್ರಮುಖರಾದ ದೇವಶ್ರೇಷ್ಠರುಗಳ ಲ್ಲರೂ ಕೂಡಿ ಪ್ರತಿಭಟಿಸಿದರು. ನಿದ್ದ ಸಾಧ್ಯ ಯಕ್ಷ ವಸು ವಿದ್ಯಾಧರ ಕಿನ್ನರಾದಿಗಳ ಸೇನೆಯು ವಾದೃಧನಿ ಮಾಡುತ್ತ ಕೋಲಾಹಲದಿಂದ ರಾ ಕ್ಷಸರಮೇಲೆ ಬಿದ್ದು ಬಾಣದ ಮಳೆಯನ್ನು ಕರೆದು, ಇರಿ ತಿವಿ ಕೊಲ್ಲು ತರಿ ಬಗಿ ಎಂದು ಮೊದಲಾಗಿ ಕೂಗಿ ಪ್ರೋತ್ಸಾಹಿಸುತಲಿದ್ದಿತು. ಇದನ್ನು ವಸ್ತುನಾಭನು ಕಂಡು ಓಹೋ ! ಇವರು ದಿಕಾಲಕರೊ ? ಇವ ನೇ ಇಂದ್ರನೊ ? ಈ ಬಾಣಾವಳಿಯನ್ನು ಕರೆಯುವವರು ಶೂರರೋ ? ಭಲಾ ! ಹುಲ್ಲೆಗಳು ಹುಲಿಯ ಕಾಡಿಗೆ ಯುದ್ಧ ಮಾಡುವುದಕ್ಕಾಗಿ ಬಂ ದಂತಾಯಿತು ! " ಎನ್ನುತ್ತ, ತನ್ನ ಭುಜವನ್ನು ತಟ್ಟಿ ಆರ್ಭಟಿಸಿ, ಆಯುಧವನ್ನೆತ್ತಿದನು. ಆಗ ದೇವತೆಗಳು ತಮ್ಮ ಕಡೆಯವರನ್ನು ಕುರಿ .ತು- “ ಬೆದರಬೇಡಿರಿ, ಹಿಂದೆ ಬೆಂಬಲವಾಗಿ ಶಿವಪುತ್ರನಿದ್ದಾನೆ; ಮುಂ