ಪುಟ:ಚೆನ್ನ ಬಸವೇಶವಿಜಯಂ.djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦]. ಕುಮಾರ ಇರಕಸೇನಾಯುದ್ದವು » ಹದಲ್ಲಿ ಗಾಯವಾಗಿ ರಕ್ತವು ಸುರಿಯಹತ್ತಿತು. ಹರಿಯ ಈ ಅವಸ್ಥೆ ಯನ್ನು ನೋಡಿ, ಕಿನ್ನರ ಕಿಂಪುರುಷ ವಿದ್ಯಾಧರಾದಿ ದೇವಸ್ರಮವೆ ಲ್ಲವೂ ದಿಕ್ಕು ದಿಕ್ಕಿಗೆ ತಲೆತಪ್ಪಿಸಿಕೊಂಡು ಓಡಿತು. ಓಡಲಾರದೆ ರಾಕ್ಷ ಸರ ಕೈಗೆ ಸಿಕ್ಕಿದವರು ಹಲ್ಕಿರಿದು ಪ್ರಾಣದಾನವನ್ನು ಬೇಡಿಕೊಂಡರು. ಆಗ ದಿಕ್ಕಾಲಕರೆಲ್ಲರೂ ಕುಮಾರಸ್ವಾಮಿಯ ಬಳಿಗೆ ಬಂದು ನಮಸ್ಕರಿಸಿ, ತಮ್ಮವಸ್ಥೆಯನ್ನು ಹೇಳಿಕೊಂಡು ನಮ್ಮನ್ನು ದರಿಸಬೇಕೆಂದು ಬೇಡಿದರು. ಕಾಲ್ಮುರಿದು ಗಾಯವೇರಿ, ರಕ್ತ ಸುರಿದು, 'ತಲೆಯೊಡೆದು, ನಾನಾವಿಧ ವಾಗಿ ಭಂಗಗೊಂಡಿರುವ ದೇವತೆಗಳನ್ನೆಲ್ಲ ಪಣ್ಣು ಖನು ಸಮಾಧಾನಮಾಡಿ, ಬೆನ್ನ ಹಿಂದಿಟ್ಟುಕೊಂಡು, ನವಿಲನ್ನೇರಿ ತಾನೇ ಯುದ್ಧಕ್ಕೆ ಸನ್ನದ್ಧನಾಗಿ ಹೊರಟನು, ಗರುಡರನ್ನು ಬಡಿ, ಯಕ್ಷರನ್ನು ಕಡಿ, ಗಂಧರರನ್ನು ಜಡಿ, ಕಿನ್ನರರನ್ನು ವಿಡಿ, ಎಂದು ಮೊದಲಾಗಿ ಕೂಗಿಕೊಂಡು ಅಟ್ಟಿ ಬರುತ್ತಿ ರುವ ಮಹಾನಾಭನ ಸೈನ್ಯಕ್ಕೆ ಇದಿರಾದನು. ಹನ್ನೆರಡು ಕಣ್ಣುಗಳಿಂದ ೮ ಕಿಡಿಯನ್ನು ಸುರಿಸುತ್ತ ಪ್ರಳಯಕಾಲದ ರುದ್ರನಂತೆ ಭೀಕರವಾಗಿ ದೈತಸೇನೆಯನ್ನು ದುರುದುರನೆ ನೋಡಿದನು. ಕೈಗೆ ಬಿಲ್ಲನ್ನು ತೆಗೆದು ಕೆಂಡು, ಬಾಣವನ್ನು ಸಿಂಹಿನಿಯಲ್ಲಿ ಜೋಡಿಸಿ ಬಿಡಲಾರಂಭಿಸಿದನು. ಬಗ್ಗಿದ ಬಿಲ್ಲು ನಿಲ್ಲಲಿಲ್ಲ, ಇಂಜಿನಿಯ ಶಬ್ದವು ತಪ್ಪಲಿಲ್ಲ, ಬಾಣದ ಪುಂ ಖಾನುಪುಂಖಗಮನವು ವಿಚ್ಛೆತ್ರಿಗೊಳ್ಳಲಿಲ್ಲ, ಇದಿರಾಗಿ ಕುಮಾರನ ಬಳಿಗೆ ಒಂದುಬಾಣವಾದರೂ ಬರಲಿಲ್ಲ, ಅವನ ಬಾಣಗಳ ಜೋಡಣೆಗೆ ಯು ದ್ವಾಂಕಣವು ಸಾಲಲಿಲ್ಲ; ಭೂಮ್ಮಂತರಿಕ್ಷಗಳೊಂದೂ ಕಾಣಲಿಲ್ಲ. ಕು ಮಾರನು ಅದಾವಾಗ ಬಾಣವನ್ನು ಬತ್ತಳಿಕೆಯಿಂದ ತೆಗೆವನೋ ! ಯಾವಾ ಗ ತೊಡುವನೊ! ಯಾವಾಗ ಬಿಡುವನೋ! ಒಬ್ಬರಿಗೂ ಕಾಣದಂತೆ ಅ ಬ್ಲೊಂದು ಕರಲಾಘವದಿಂದ ಕ್ಷಣಕಾಲದಲ್ಲಿ ಬಾಣಲೋಕವನ್ನು ನಿನ್ನಿನಿ ದಂತೆ ಮಾಡಿಬಿಟ್ಟನು. ದೈತ್ಯರ ಸೇನೆಯೊಳಗೆ ಕುಮಾರನ ಬಾಣದೇ ಟಿನ ಬೆಸೆಯಿಂದ ಕಾಲಾಳ್ಳು ಕುದುರೆಗಳಮೇಲೂ, ಕುದುರೆಗಳು ಆನೆ ಗಳಮೇಲೂ, ಆನೆಗಳು ರಥಗಳಮೇಲೂ ಬಿದ್ದು , ಒಂದರಿಂದೊಂದು ತಾ ವು ತಾವೇ ಹತಿಗೊಳ್ಳುತ್ತಿದ್ದುವು. ಮಹಾನಾಭನ ದೇಹದ ರೋಮಕೂ ಪಗಳಲ್ಲೆಲ್ಲ ಬಾಣಗಳು ನಾಟಕೊಂಡುವು. ಅವನ ಕಿರೀಟ ಭುಜಕೀರ್ತಿ