ಪುಟ:ಚೆನ್ನ ಬಸವೇಶವಿಜಯಂ.djvu/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

044 ಕರಕಸಕ್ಕಾರವು ಕಣ್ಣನ್ನು ಕೆಂಪಗೆ ಮಾಡಿ, ಮೂಗುಬಾಯಿಗಳಿಂದ ಕೋಪಾಗ್ನಿಯ ಬಿ ಸಿಯಾದ ಹೊಗೆಯನ್ನು ಬಿಡುತ್ತ, ಆಗ್ಗಾಗ್ಗೆ ನಿಕ್ಕನಾದವನ್ನು ಮಾಡುತ್ತ ಹೊಡೆದಾಡುತ್ತಿದ್ದರು. ಆಗ ಕುಮಾರನು ಅತ್ಯಂತ ಕೋಪೋದ್ರಿಕ್ತನಾಗಿ ಎರಡು ಮಂತ್ರಾಸ್ತ್ರಗಳನ್ನು ಜೋಡಿಸಿ, ಬಲವಾಗಿ ಸೆಳೆದು, ದೈತ್ಯನ ಹಣೆಗೆ ಗುರಿಯಿಟ್ಟು ಹೊಡೆದನು. ಅವು ನಟ್ಟು ಗಾಯಮಾಡಿ ಬಿಸಿರಕ್ಕೆ ವನ್ನು ಸುರಿಸಿದುವು. ಅವನ್ನು ರಕ್ಕಸನು ಕಿತ್ತು, ರಕ್ತವನ್ನೊರಸಿ, ತಾಂ ಬೂಲವನ್ನು ಸವಿದು ಉಲ್ಲಾಸಗೊಂಡು, ತನ್ನ ಬತ್ತಳಿಕೆಯಲ್ಲಿದ್ದ ಬಾಣ ಗಳಲ್ಲೆಲ್ಲ ತಿಕವಾದುವುಗಳನ್ನಾದು ಐದನ್ನು ಒಂದೇ ಬಾರಿಗೆ ಜೋಡಿ ನಿ ಪ್ರಯೋಗಿಸಿ ಗರ್ಜಿಸಿದನು. ಅಗ್ನಿ ಕಣವನ್ನು ಸುರಿಸುತ್ತ ಬಂದ ಆ ಬಾಣಗಳನ್ನು ಕ್ಷಣಾರ್ಧದಲ್ಲಿ ಕುಮಾರನು ಖಂಡಿಸಿ, ಬೇರೆ ನಿಶಿತಾಸ್ತ್ರ ಗಳನ್ನು ದನುಜನಮೇಲೆ ಬಿಟ್ಟನು. ಅವು ತಾರಕನ ಎದೆಯನ್ನು ಹೊಕ್ಕು ಬೆನ್ನನ್ನು ಭೇದಿಸಿ ಹೊರಕ್ಕೆ ಹೊರಟು ಪಾತಾಳವನ್ನು ನುಗ್ಗಿ ಆದಿಶೇಷ ನನ್ನ ಕಣ್ಣಿದುವು. ಆ ಯೇಟಿನಿಂದ ತಾರಕನು ಮೂರ್ಛಾಗತನಾದನು. ಕ್ಷಣಕಾಲದಲ್ಲಿ ಚೇತರಿಸಿಕೊಂಡೆದ್ದು ನಿಂತು, ಎಲೋ ಮಗುವೇ ! ಹಸುಗೂಸಿ ಡವ ಅತುಳಪರಾಕ್ರಮವನ್ನು ತೋರಿಸುವುದೇತಕ್ಕೆಂದು ನಾನು ಸಾಧಾ-ಣವಾಗಿ ಕಾಯುತ್ತಿದ್ದರೆ ನೀನು ಗರ್ವದಿಂದ ಬೆರೆತುಕೊಂ ಡೆ ! ಇದೋ ನನ್ನ ಶೌವನ್ನಿಗ ತೋರಿಸುತ್ತೇನೆ; ನಿನ್ನ ತಲೆಗಳನ್ನು ಳುಹಿಕೊ ?” ಎಂದು ಶ್ರೀ ಕವಾದ ಬಾಣಗಳನ್ನು ತಡೆಬಿಡುವಿಲ್ಲದಂತೆ ಕುಮಾರನಮೇಲೆ ಸುರಿಸಿದನು. ಗುಹನಾದರೂ ಅವುಗಳನ್ನೆಲ್ಲ ಲೀಲಾಮಾ ತದಲ್ಲಿ ಛೇದಿನಿ, ಬೇರೆ ಬಾಣಗಳನ್ನು ಬಿಟ್ಟು ರಾಕ್ಷಸನ ಸಾರಥಿ ರಥ ತುರಗಗಳನ್ನೆಲ್ಲ ಕತ್ತರಿಸಿದನು. ತಾರಕನು ಹೊಸರಥವನ್ನೇರಿ ಬಂದು ಮ ತೆ ಬಾಣಗಳನ್ನು ಬಿಡಲು, ಕುಮಾರನು ಅವನ ಧನುರ್ಬಾಣಗಳನ್ನೂ ಬತ್ತಳಿಕೆಯನ್ನೂ ಕಡಿತುಂಡುಗಳನ್ನು ಮಾಡಿದನು. ಹೀಗೆ ಒಬ್ಬರೊ ಬ್ಬರ ಬಾಣಗಳನ್ನು ಕಡಿದು ಕೊಟ್ಟಂತರಬಾಣಗಳ ತುಂಡುಗಳ ರಾಶಿ ಯನ್ನು ಯುದ್ಧಾಂಗಣದಲ್ಲಿ ಒಟ್ಟಿದರು. ರಕ್ಕಸನು ಬಲುಬೇಸತ್ತು, ಅ ಗ್ರಸ್ತವನ್ನು ತೆಗೆದು ಕುಮಾರನ ಮೇಲೆ ಪ್ರಯೋಗಿಸಿದನು. ಅದು ದೇವಸೇನೆಯಮೇಲೆಲ್ಲ ನಾಲಿಗೆಯನ್ನು ಚಾಚಿ, ಧಗಧಗನೆ ಉಜ್ಲಿಸಿ,