ಪುಟ:ಚೆನ್ನ ಬಸವೇಶವಿಜಯಂ.djvu/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕುಪತಿಪಟ್ಟವು ವಂತೆಯೂ, ಅದನ್ನು ಸುರನರೋರಗಾದಿಗಳಲ್ಲಿ ಯಾರೂ ಕಾಣದಿರುವಂತೆ ಯೂ, ದೇವಮಾನದ ಸಹಸ್ರವರ್ಷಗಳಾದರೆ ಆಗ ಮೂರೂ ಒಂದಾಗುವಂ ತೆಯೂ, ಆ ಸಮಯದಲ್ಲಿ ಒಂದೇ ಬಾಣವನ್ನು ಪ್ರಯೋಗಿಸಿ ಕೀಲನ್ನು ಮುರಿದರೆ ಈ ಪಟ್ಟಣವು ಅಳಿಯುವಂತೆಯೂ, ಹಾಗಲ್ಲದಿದ್ದರೆ ಸದಾಕಾ ಲವೂ ಗರಗರನೆ ತಿರುಗುತ್ತಿರುವಂತೆಯೂ, ವಿದ್ಯಾಧರ ಕಿನ್ನರ ಕಿಂಪುರುಷ | ಯಕ್ಷರಕ್ಷೇ ಮಾನವಾದಿಗಳೆಲ್ಲರೂ ನಮ್ಮನ್ನು ಸೇವಿಸಿಕೊಂಡು ನಮ್ಮ ಆಜ್ಞಾ ಪ್ರಕಾರ ನಡೆದುಕೊಳ್ಳುವಂತೆಯೂ, ಸಕಲಸಂಪತ್ತೂ ಅಮಿತವಾ ದ ಕೌ‌ಧೈಗಳೂ ನಮಗೆ ಪ್ರಾಪ್ತವಾಗುವಂತೆಯೂ, ವರವನ್ನು ಕೊಡ ಬೇಕು, ಎಂದು ಬೇಡಿದರು. ಅದನ್ನು ಕೇಳಿ ಬ್ರಹ್ಮನು ತಾನು ಯೊ ಚಿಸಿಕೊಂಡು ಬಂದಂತೆಯೇ ಆಯ್ಕೆಂದು ತಿಳಿದು, ನಿಟ್ಟುಸುರುಬಿಟ್ಟನು. ಕಡೆಗೆ ಉಪಾಯಾಂತರವಿಲ್ಲದೆ ನಿಮ್ಮಿಷ್ಟದಂತೆಯೇ ಸರವೂ ಆಗಲಿ ?” ಎಂದು ವರವಿತ್ತು ಸತ್ಯಲೋಕಕ್ಕೆ ತೆರಳಿದನು. ಆಗ ರಾಕ್ಷಸರಿಗುಂಟಾದ ಆನಂದವನ್ನು ಹೇಳತೀರದು. ಅಡರಿ ಕಾಡನ್ನು ಮುತ್ತಿ ಒಣಗಿದ ಸದೆ ಯನ್ನು ತಿಂದು ತೇಗುತ್ತಿರುವ ಅಗ್ನಿಗೆ ಗಾಳಿಯ ಸಹಾಯವಾದರೆ ಹೇಳ ತಕ್ಕುದೇನು ? ಮೊದಲೇ ಇವರು ಜಗದೀಕರನಾದ ತಾರಕನ ಮಕ್ಕ ೪ು ! ಇದರ ಮೇಲೆ ಬ್ರಹ್ಮನ ಮರವೂ ಇವರಿಗುಂಟಾದ ಬಳಿಕ ಇನ್ನಿವ ರನ್ನು ತಡೆಯುವರಾರು ? ಇವರಿಗಸಾಧ್ಯವಾದ ಕಾಧ್ಯವಾವುದು ? ಕೂಡ ಲೇ ದಾನವಶಿಲ್ಪಿಯಾದ ಮಯನನ್ನು ಬರಮಾಡಿದರು. ತಮ್ಮ ಸಂಕಲ್ಪ ಕ್ಕೆ ತಕ್ಕಂತೆ ಅಂತರಿಕ್ಷದಲ್ಲಿ ತ್ರಿಪುರಗಳನ್ನು ಕಟ್ಟಬೇಕೆಂದು ಅಪ್ಪಣೆಮಾ ಡಿದರು. ಅದರಂತೆಯೇ ಅವನು ಚಿನ್ನ ಬೆಳ್ಳಿ ಕಬ್ಬುನಗಳಿಂದ ಪಟ್ಟಣ ಗಳನ್ನು ಕಟ್ಟಿದನು. ಒಳಗೆ ರತ್ನಖಚಿತವಾದ ಸುವಣ್ಣರಜತದ ಉಪ್ಪರಿ ಗೆಗಳು ಕೋಟೆಗಳು ಧ್ವಜಪತಾಕೆಗಳು ಮೊದಲಾದುವುಗಳು ಥಳಥಳಿಸು ತಿದ್ದುವು, ಅವುಗಳಲ್ಲಿ ಚಿನ್ನದ ಕೋಟೆಯನ್ನು ತಾರಕಾಕ್ಷನೂ, ಬೆಳ್ಳಿ ಯಕೋಟೆಯನ್ನು ಕಮಲಾಕ್ಷನೂ, ಕಬ್ಬುನದಕೊಟೆಯನ್ನು ವಿದ್ಯುನ್ಮಾ ಲಿಯೂ ವಹಿಸಿಕೊಂಡು, ಅರುವತ್ತಾರುಕೋಟಿ ಸೈನ್ಯವನ್ನು ಕಟ್ಟಿ ಆ ಳುತ್ತ, ಅತ್ಯಂತವೈಭವದಿಂದ ಸಕಲೈಶ್ವದೊಡನೆ ಮೆರೆಯುತ್ತಿದ್ದರು. ಅಂತರಿಕ್ಷದಲ್ಲಿ ಅತ್ಯರೂರವಾಗಿ ಥಳಥಳಿಸುತ್ತಿರುವ ಈ ಪಟ್ಟಣಗಳನ್ನು 30