ಪುಟ:ಚೆನ್ನ ಬಸವೇಶವಿಜಯಂ.djvu/೨೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

o೪೬ ಚನ್ನಬಸವೇಶವಿಜಯಂ (Fಂಡ ೪) ಅಧ್ಯಾಯ ಯಮೇಲೆ ಇದಿರುಬಿದ್ದ ರಾಕ್ಷಸರೊಡನೆ ಮಲ್ಲಗಾಳಗದಿಂದಲೂ, ಕೇಶಾಕೇ ಶಿಯಿಂದಲೂ, ಮುಷ್ಟಾಮುಮ್ಮಿಯಿಂದಲೂ, ಗದಾಗದೆಯಿಂದಲೂ, ಹೊ ಡೆದಾಡುತ್ತಲೂ, ಸುರಂಗಗಳ ಮಾರ್ಗದಿಂದ ನುಗ್ಗಿ, ನಾಲ್ಕು ಕಡೆಯಲ್ಲ ದೈತ್ಯರನ್ನು ಬಳಸುತ್ತಲೂ, ಹಚ್ಚೆ ಹಜ್ಜೆಗೂ ಭೂಮಿಗುರುಳಿದರೂ ಇತ ರರು ಎದೆಗೆಡದೆ ಮುಂದೆ ಸಾಗುತ್ತಲೂ, ಒಂದುಜಾವದೊ ಳಗಾಗಿ ತ್ರಿಪು ರದ ಕೋಟೆಯಮೇಲೆ ಇಂದ್ರನ ಸೇನೆಯ ಬಹುಭಾಗವು ಹತ್ತಿ ಮಹಾತು ಮುಲಯುದ್ಧವನ್ನು ಮಾಡುತ್ತಿದ್ದಿತು. ಶೂಲಗಳ ಕೊಡಲಿಗಳ ಕತ್ತಿಗಳ ಮುದ್ರಗಳ ಮುಸಲಗಳ ಪ್ರಹಾರಗಳು ಖಣಿಖಣಿಲ್ಲಿ ಟಿಫಿಟಲ್ ಎಂದು ಶಬ್ದ ಮಾಡುತ್ತಿದ್ದುವು. ಹೆಣಗಳು ರಕ್ತ ಮಾಂಸಗಳು' ಆಯುಧಗಳು ಕರಿ ತುರಗ ರಥಗಳು ಗುಡ್ಡೆಗುಡ್ಡೆಯಾಗಿ ಆಳೋರಿಯಮೇಲೂ ಅಗಳುಗಳಲ್ಲ ತುಂಬಿದುವು. ಇಂದ್ರಾದಿದಿಳ್ಳಾಲಕರೆಲ್ಲರೂ ಅತ್ಯಂತವೀರಾವೇಶದಿಂದ ಸೇನೆಯನ್ನು ಪ್ರೋತ್ಸಾಹಿಸುತ್ತ 'ಕೋಟೆಯಮೇಲೆ ಏರಿಸುತ್ತಿದ್ದರೂ.. ಪು ರದ ರಾಕ್ಷಸರೆಲ್ಲರೂ ತಮ್ಮ ಪಟ್ಟಣವು ದೇವತೆಗಳಿಗೆ ಸೂರೆ ಹೆ..ಯಿತೆಂ ದು ಪ್ರಲಾಪಿಸುತ್ಯ ಅರಮನೆಯ ಮುಂದೆ ಗೋ೪ಟ್ಟರು. ಆಗ ವಿದ್ಯುನ್ಮಾ ಲಿಯು ವೀರಗಾಸೆಯನ್ನು ಕಟ್ಟಿ ಧನುರ್ಬಾಣಗಳನ್ನು ವಿಡಿದು ಮಣಿಪಥ ನನ್ನೆರಿ ಬಿರುದಾವಳಿಗಳನ್ನು ಹೊಗಳಿಸಿಕೊಳ್ಳ ಕೋಪದಿಂದ ನಿಮ್ಮಗ ರ್ಜನೆಯನ್ನು ಮಾಡಿಕೊಂಡು ಕೋಟೆಯ ಕಡೆಗೆ ಸಾಗಿ ಬಂದನು. ಅವ ನೊಡನೆ ಅಂತಕನ ಸೆನೆಯಂತೆ ಭಯಂಕರವಾದ ಮಹಾಚತುರಂಗಕ್ಕೆ ನೃವು ವಾದ್ಯಗಳನ್ನು ಭೋರ್ಗರಿಸುತ್ತ ಬಂದಿತು. ಎಂದು ಚೆನ್ನಬಸ ವೇಶನು ನುಡಿದನೆಂಬಿಲ್ಲಿಗೆ ೨ನೆ ಅಧ್ಯಾಯವು ಸಂಪೂರ್ಣವು. -****- ೩ ನೆ ಅಧ್ಯಾಯವು. ಕ ಮ ಲಾ ಕ ವ ಸೇ ನಾ ಯು ವು - ಎಲೆ ಸಿದ್ದರಾಮೇಶನೆ ಕೇಳು, ವಿದ್ಯುನ್ಮಾಲಿಯೊಡನೆ ಬಂದ ಮು ಹಾದೈತ್ಯಸೇನೆಯು ಕೋಪಾಟೋಪದಿಂದ ಕೋಟೆಯನ್ನೇರಿ ಅಲ್ಲಿದ್ದ