ಪುಟ:ಚೆನ್ನ ಬಸವೇಶವಿಜಯಂ.djvu/೨೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಬಸವೇಕವಿಜಯಂ (ಕಂದ ೪) [ಅಧ್ಯಾಯ ದೆಗೆದು ಕಣ್ಮನ್ನೆಯಿಂದ ಸಖಿಯರನ್ನೆಲ್ಲ ಎಚ್ಚರಿಸಿ ಸುತ್ತಲೂ ಮುತ್ತಿ ಶಿವನ ಮೇಲೆ ನೀರನ್ನೆರಚುವಂತೆ ಮಾಡಿದಳು. ಮದನನು ತನ್ನನ್ನು ಅಗ್ನಿಯಿಂದ ಸುಟ್ಟ ಶಿವನನ್ನು ತನ್ನ ಸೈನಿಕರಾದ ನಾರಿಯರ ಹಸ್ತದಿಂದ ಜಲಾಸ್ತ್ರದ ಮೂಲಕ ಹೊಡೆಯಿಸಿ ಸೋಲಿಸಬೇಕೆಂದು ಪ್ರಯತ್ನಿಸಿದನೋ ಎಂ ಬಂತೆ ನಾರೀಕುಲವು ಶಿವನಮೇಲೆ ಚೀರೊಳವೆಗಳಿಂದ ನೀರನ್ನು ಪ್ರಯೋ ಗಿಸುತ್ತಿದ್ದಿತು, ನೀರನ್ನು ಮೊಗೆಯುವ ಎರಚುವ ಕೇಕೆಹಾಕುವ ದುಮಿ ಕುವ ಶಬ್ದವು ಸರೋವರದಲ್ಲೆಲ್ಲಾ ತುಂಬಿತು. ಹೀಗೆ ಜಲಕ್ರೀಡೆಯ ನಾಡಿದಬಳಿಕ ಮೊದಲು ಶಂಕರೀಶಂಕರರು ಸೋಪಾನವನ್ನು ಹತ್ತಿ ಮೇಲಣ ಮಂಟಪಕ್ಕೆ ತೆರಳ, ವಸ್ತ್ರ ಭೂಷಣಾದಿಗಳನ್ನು ಧರಿಸಿ, ಕೊ ಳದ ಕಡೆಗೆ ತಿರುಗಿನೋಡುತ್ತ ನಿಲ್ಲಲು, ಸೋಪಾನಗಳಮೇಲೆ ಒದ್ದೆ ಯಾದ ಬಟ್ಟೆಗಳಿಂದ ಹತ್ತಿದ ಶರೀರವುಳ್ಳವರಾಗಿ ಬೆಳ್ಳಬೆಳೆಗೆ ನಿಂತು ಬಿಸಿ ಲಿಗೆ ದೇಹವನ್ನು ಒಡ್ಡಿ ಕಾಯಿಸಿಕೊಳ್ಳುತ್ತಿರುವ ದೇವಾಂಗನೆಯರು ಸೋಪಾನಗಳಮೇಲೆ ಕೆತ್ತಿ ನಿಲ್ಲಿಸಿರುವೆ ಚಂದ್ರಕಾಂತಶಿಲೆಯ ಪ್ರತಿಮೆ ಗಳೊ, ಶಿವಸೇವೆಗಾಗಿ ಪಾತಾಳಲೋಕದಿಂದ ಹೊರಟು ಈ ಸರೋ ವರದ ದ್ವಾರದಿಂದ ಬಂದ ನಾಗಕನ್ನಿಕೆಯರೊ, ಮನ್ಮಥನ ಮಂತ್ರಾಧಿ ದೇವತೆಯೇ ಹೀಗೆ ಬಹುರೂಪಾಂತು ನಿಂತಿರುವಳೋ, ಎಂಬಂತೆ ತೋ ರುತ್ತಿದ್ದರು. ಇಂತಹ ನಾರಿಯರೆಲ್ಲರೂ ತಲೆಯನ್ನಾರಿಸಿ, ಮಡಿಯ ಸೀರೆ ಗಳನ್ನೂ ಆಭರಣಗಳನ್ನೂ ಧರಿಸಿ, ಸಕರ್ಪೂರತಾಂಬೂಲವನ್ನು ಸವಿದು ಸಿದ್ಧರಾಗಿ ನಿಂತರು. ಶಿವನು ವನಪಾಲಕನಿಗೆ ಬೇಕಾದುಡುಗೊರೆಗಳನ್ನಿ ತ್ತು ಸಂತೋಷಪಡಿಸಿ, ಕೈಲಾಸಕ್ಕೆ ಹೋಗಿ ಅಲ್ಲಿರುವುದಕ್ಕಿಂತಲೂ ವಸಂ ತಋತುವು ಮುಗಿಯುವವರೆಗೂ ಉಪವನಾಂತದಲ್ಲಿರುವ ಉಪ್ಪರಿಗೆ ಮನೆ ಯಲ್ಲೇ ವಾಸಮಾಡಿಕೊಂಡಿರುವುದು ಸುಖವೆಂದು ಬಯಸಿ ಪಾರತಿಯೊ ಡನೆ ಅಲ್ಲೇ ವಿಲಾಸದಿಂದಿರುತ್ತಿದ್ದನು. ಎಂದು ಚೆನ್ನಬಸವೇಶನು ನುಡಿದ ನಂಬಿಲ್ಲಿಗೆ ಐದನೆ ಅಧ್ಯಾಯವು ಸಂಪೂಣ್ಣವು. --