ಪುಟ:ಚೆನ್ನ ಬಸವೇಶವಿಜಯಂ.djvu/೨೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಢರ ಇಳಯ sur ಹೆಂಗಿಳಿಯು ವಕ್ರದೃಷ್ಟಿಯಿಂದ ನೋಡಿ, ಕಾಲಿನಿಂದೊದೆದು ನೂಂಕಿ'ಮುತ್ತ ಇಲ್ಲಿಗೇಕೆ ಬಂದೆ? ನಿನ್ನೆ ಯಾವಳಲ್ಲಿದ್ದೆಯೋ ಅಲ್ಲೇ ಇರು ಹೋ ಗು, ನನ್ನಿಂದೇನು ಕೆಲಸ ? ನೀನು ಎಷ್ಟು ಮುಚ್ಚಿದರೂ ನಿನ್ನ ಕಳ್ಳತ ನವು ನನಗೆ ಗೊತ್ತಾಗಲಿಲ್ಲವೆ ? ಸಾಕು; ನಡೆ; ೨” ಎಂದು ಸಿಡಿಮಿಡಿಗೊಂ ಡು ಗಜರಿತು, ಗಂಡುಗಿಳಿಯಾದರೂ ( ರಮಣೀ ! ನಿನ್ನ ಹೊರತು ನನಗೆ ಪ್ರಿಯರಾದವರು ಲೋಕದಲ್ಲಿ ಮತ್ತಾರೂ ಇಲ್ಲ, ಮತ್ತಾವಳ ಸಂಗ ವನ್ನೂ ನಾನು ಸತ್ಯವಾಗಿಯೂ ಮಾಡಿದವನಲ್ಲ; ಸುಮ್ಮನೆ ನನ್ನ ಮೇಲೆ ಕೋಪಗೊಂಡು ನನ್ನ ಮನೋವ್ಯಥೆಯನ್ನು ಹೆಚ್ಚಿಸಬೇಡ; ನನ್ನ ಶರೀರ ದಲ್ಲಿ ಇಷ್ಟೊಂದು ಪರಿಮಳವುಂಟಾಗುವುದಕ್ಕೆ ಕಾರಣವೇನೆಂಬುದನ್ನು ನೀನು ವಿಚಾರಿಸದೆ ಸಂಶಯಪಡುವುದು ಉಚಿತವಲ್ಲ; ಪರಶಿವನು ಈ ಉ ದ್ವಾನವನದ ಸರೋವರದಲ್ಲಿ ಜಲಕ್ರೀಡೆಯನ್ನು ಮಾಡಿದುದರಿಂದ ಅದು ಜ ಗತ್ತಿನಲ್ಲೆಲ್ಲ ಪುಣ್ಯತೀರ್ಥವೆಂದು ಪ್ರಸಿದ್ಧವಾಗಿರುವುದು ; ಅದರಲ್ಲಿ ಹರಿಬ್ರ ಹ್ಯಾದಿಗಳೆಲ್ಲ ಸ್ನಾನಮಾಡಿ ಪುಣ್ಯಶರೀರರಾಗಿರುವರು ; ಅಂತಹ ತೀರ್ಥ ದಲ್ಲಿ ಸ್ನಾನಮಾಡುತ್ತ ತಡವಾದುದರಿಂದ ರಾತ್ರಿ ಬರುವುದಕ್ಕೆ ನನಗೆ ಅವ ಕಾಶವಿಲ್ಲವಾಯಿತು; ಬೇಕಿದ್ದರೆ ಬಾ ನಿನಗೂ ತೋರಿಸುತ್ತೇನೆ, ಎಂದು ಹೇಳಿ ಸಮಾಧಾನಪಡಿಸಲು, ಎರಡೂ ಪರಸ್ಪರವಾಗಿ ಸಂತೋಷಿಸಿ, ಸುಖಿ ನಿದುವು. ಇತ್ತ ಶಿವನು ಆ ಗಿಳಿಗಳ ಚರಿತ್ರವನ್ನೆಲ್ಲ ನೋಡುತ್ತಿರಲು, ಅತ್ತ ಮಂಚದ ಮೇಲೆ ಮಲಗಿದ್ದ ಪಾರ್ವತಿಯು ನಿದ್ರೆತಿಳಿದೆದ್ದು , ಮಗ್ಗುಲಲ್ಲಿ ಶಿವನಿಲ್ಲದಿರುವುದನ್ನು ಕಂಡು, ಎತ್ತ ಹೋದನೋ ! ಎಂದು ಅಂತಃಪುರದ ಲೆಲ್ಲ ತಡಕಿ, ಕಾಣದೆ, ಜಲಕ್ರೀಡೆಯ ಆಸಕ್ತಿಯಿಂದ ಮತ್ತಾವಸಖಿ ಯನ್ನಾದರೂ ಕೂಡಿಕೊಂಡು ಹೋಗಿರುವನೋ ? ಎಂದು ಯೋಚಿಸಿ, ವನದಲ್ಲೆಲ್ಲ ಹುಡುಕುತ್ತ ಬಂದಳು, ಮರಗಳು ಲತಾಗೃಹಗಳು ಸುಸ್ತಿ ರಗಳು ಜಗತಿಗಳು ಹೂವಿನ ಚಪ್ಪರಗಳು ಕ್ರೀಡಾಪರ್ವತಗಳು ಕೊಳಗ ಳು ಮೊದಲಾದೆಡೆಯಲ್ಲೆಲ್ಲ ಹುಡುಕಿಕೊಂಡು ಬರುತ್ತೆ, ಮಾವಿನ ಮರದ ಕೆ ಳಗೆ ಶಿವನೊಬ್ಬನೇ ಕುಳಿತಿರುವುದನ್ನು ಕಂಡಳು. ಸಂತೋಷದಿಂದ ರೋ ಮಾಂಚಗೊಂಡು ಕಣ್ಣೀರನ್ನು ಸುರಿಸಿದಳು, ತಾನೊಬ್ಬಳೇ ಅರಸಿಕೊಂಡು ಬಂದುದಕ್ಕೆ ಭೀತಿಯನ್ನೂ ಲಜ್ಜೆಯನ್ನೂ ಹೊಂದಿದಳು, ಆಭರಣಗಳು