ಪುಟ:ಚೆನ್ನ ಬಸವೇಶವಿಜಯಂ.djvu/೨೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

odo ಕನ್ನಬಸವೇಕವಿಜಯಂ (wಂತ8) [ಅಧ್ಯಾಡು ಸದ್ದಾಗದಂತೆ ಬಂದು ಲತಾಮಂಟಪದ ಮರೆಗೆ ಹೋಗಿ ನಿಂತು, ತನ್ನನ್ನು ತಡಕಿಕೊಂಡು ಬಂದ ಸಖಿಯರನ್ನೆಲ್ಲ ಕೈಸನ್ನೆಯಿಂದ ಹಿಂದಕ್ಕೆ ಕಳುಹಿ, ಮಲ್ಲನೆ ಶಿವನ ಹಿಂಗಡೆಗೆ ಬಂದು, ತನ್ನ ಕರಪಲ್ಲವದಿಂದ ಶಿವನ ಕಣ್ಣು ಗಳನ್ನು ಬಿಮ್ಮನೆ ಮುಚ್ಚಿದಳು, ಆ ಹಸ್ತಗಳ ಸೋಂಕಿನಿಂದಲೇ ಈ ಕೆಯು ಪಾರ್ವತಿಯಂದು ಶಂಕರನು ತಿಳಿದನು, ಮತ್ತೂ ಪ್ರಿಯತಮೆಯ ಸ್ಪರ್ಶದಿಂದ ತನ್ನ ದೇಹದಲ್ಲಿ ರೋಮಾಂಕಿತನಾಗಿ, ಪರವಶನಾದನು. ಶಿವನ ಕಣ್ಣು ಗಳು ಯಾವಾಗ ಮುಞ್ಚಲ್ಪಟ್ಟು, ವೋ ಆಕೂಡಲೇ ಅವನಕಣ್ಣುಗಳೇ ತಾವಾದ ಸೂಚಂದ್ರಮಂಡಲಗಳು ಕಾಣದಂತಾದುವು. ಮೂರಾಂಧಕಾ ರವು ಜಗತ್ತನ್ನೆಲ್ಲ ಆವರಿಸಿತು. ಲೋಕದವರ ಕಣ್ಣೆಲ್ಲ ಮುಚ್ಚಿದಂತಾದು ವು. ಇದೇನು ದೊಡ್ಡ ಕಾಡಿಗೆಯ ಭರಣಿಯೋ ! ಕಾಳರಾತ್ರಿಗಳ ಬ ಬ್ಲುಳಿಯೋ! ಪ್ರಳಯಕಾಲದ ಮೇಘಗಳ ಒಡ್ವ! ಮಾಯೆಯ ಬೀಜ ದ ಒಟ್ಟಿಲೊ ! ವಿಷದ ಗುಳಿಯೊ! ಎಂಬಂತೆ ಬ್ರಹ್ಮಾಂಡಸರೂಪವು ಕ ರನೆ ಭೀಕರವಾಯಿತು, ಅಂತಹ ಮಹಾಂಧಕಾರದಲ್ಲಿ ಜಗತ್ತಿನ ೪ನವು ಅತ್ತಿತ್ತ ತಿರುಗಾಡಲಾರದೆ ದಾರಿಕಾಣದೆ ನಿಂತಕಡೆ ನಿಂತು, ಕುಳಿತಕಡೆ ಕುಳತು, ಆಹಾರಗಳಿಲ್ಲದೆ ಲಯಗೊಳ್ಳುತ್ತ ಬಂದಿತು. ಹರಿಬ್ರಹ್ಮಾದಿಗ ಳು-ಅಕಸ್ಮಾತ್ತಾಗಿ ಇದೇನು ಪ್ರಳಯಕಾಲವು ಸಂಧಿಸಿತು! ಎಂದು ದಿ ಗಿಲುಬಿದ್ದು, ಮೃತ್ಯುಂಜಯಧ್ಯಾನವನ್ನು ಮಾಡಿದರು. ಅಪ್ಪರಲ್ಲಿ ಸಾರ್ವ ತಿಯ ಕಣ್ಣುಗಳಿಂದ ಸುರಿದ ಆನಂದಾಶ್ರುವು ಬೆನ್ನಿಗೆ ಇಳಿದು ತಣ್ಣಗಾಗ ಲು, ಶಂಕರನು ಎಚ್ಚತ್ತು, ಕತ್ತಲೆಯಿಂದ ಲೋಕಕ್ಕುಂಟಾಗಿರುವ ವಿಪ ತನ್ನು ತಿಳಿದು, ಬಲಾತ್ಕಾರದಿಂದ ಕೈಗಳನ್ನು ಬಿಡಿಸಿದರೆ ಪಾರತಿಯು ಕೋಪಗೊಳ್ಳುವಳೆಂದು ಯೋಚಿಸಿ, ಕತ್ತಲೆಯ ಮನೆಗೆ' ದೀಪವನ್ನಿಟ್ಟು ಬೆಳಕುಗೊಳಿಸುವಂತೆ ಮಾಡಬೇಕೆಂದು, ಹಣೆಗಣ್ಣಿನ ಕೊನೆಯನ್ನು ಸೆ. ಲ್ಪಮಾತ್ರವೇ ತೆರೆದನು, ಅದರಿಂದಾದದ್ಭುತವನ್ನು ಏನು ಹೇಳಲಿ : ಮ ಹಾಗ್ನಿಜ್ವಾಲೆಯು ಭುಗಿಲುಭುಗಿಲೆಂದು ಹೊರಟಿತು. ಕತ್ತಲೆಯು ಹರಿ ದೋಡಿತು, ಮತ್ತೂ ಒಂದುಕಾರಣಕ್ಕಾಗಿ ಶಿವನಾಜ್ಞೆಯಿಂದ ಆಗಾಢಾಂ ಧಕಾರವೆಲ್ಲ ಒಟ್ಟುಗೂಡಿ ಬಲಿದು, ಒಂದುಶಿಶುವಿನಾಕಾರವನ್ನು ಧರಿಸಿ, ಶಿವನ ಬಳಿಗೆ ಬಂದು ನಿಂತಿತು. ಅತ್ತ ಅಗ್ನಿಜ್ವಾಲೆಯು ಬ್ರಹ್ಮಾಂಡಕಟಾಹ