ಪುಟ:ಚೆನ್ನ ಬಸವೇಶವಿಜಯಂ.djvu/೨೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಧಕಾಸುರಪ್ರಾಬಲ್ಯವು ೭ ನೆ ಅಧ್ಯಾಯವು. ಅ೦ ಧ ಕಾ ಸು ರ ಪ್ರಾಬ " ವು - ಎಲೆ ಸಿದ್ದರಾಮೇಶನೆ, ಕೇಳು, ಹಿರಣ್ಯಾಕ್ಷನೆಂಬ ಅಸುರನೊ ಬ್ಬನು ಪುತ್ರವರವನ್ನು ಪಡೆಯುವುದಕ್ಕಾಗಿ ಕೈಲಾಸಗಿರಿಯ ತಪ್ಪಲಿನಲ್ಲಿ ಶಿವನನ್ನು ಕುರಿತು ಫೆ ರ ತ ಪಸ್ಸನ್ನಾಚರಿಸುತ್ತಿದ್ದನು. ಮಾರತಿಯು ಕಣ್ಣನ್ನು ಮುಚ್ಚಲಾಗಿ ಅದರಿಂದ ಜನಿಸಿದ ಕತ್ತಲೆಯೇ ಶಿಶುರೂಪಾಂತು ಶಿವನ ಬಳಿಯಲ್ಲಿ ನಿಂತಿದ್ದಿ ತಸ್ಯೆ, ಆ ಮಗುವನ್ನೇ ಹಿರಣ್ಯಾಕ್ಷನಿಗೆ ಕೊಡಬೇಕೆಂದು ಶಂಕರನು ಯೋಚಿಸಿ, ಪಾರತೀಸಮೇತನಾಗಿ ಆಶಿಶು ವನ್ನು ಕರೆದುಕೊಂಡು ಕನಕಾಕ್ಷನಿದ್ದಲ್ಲಿಗೆ ಬಂದು ಕಾಣಿಸಿಕೊಂಡು ನಿನ್ನ ಸ್ವಾರ್ಥವೇನೆಂದು ಕೇಳಿದನು. ರಕ್ಕಸನು ಕಣ್ಣೆರೆದು ಎದ್ದು ಶಿವನಿಗೆ ನನು ಸ್ಕರಿಸಿ, ದೇವದೇವೋತ್ತಮನೆ ! ವಿಷ್ಟು ಬ್ರಹ್ಮಾದಿಗಳನ್ನೆಲ್ಲ ತನ್ನ ಶಕ್ತಿ ಯಿಂದ ಗೆಲ್ಲುವ ಮಗನನ್ನು ನನಗೆ ಅನುಗ್ರಹಿಸಬೇಕು, ಎಂದು ಬೇಡಿದ ನು. ಆಗ ಶಂಕರನು ತನ್ನ ಬಳಿಯಲ್ಲಿ ನಿಂತಿದ್ದ ಶಿಶುವನ್ನು ಕನಕಾಕ್ಷನ ಮುಂಗಡೆಯಲ್ಲಿ ನಿಲ್ಲಿಸಿ, ಇದೊ ಅಂಧಕಾರರೂಪನಾಗಿರುವ ಈಮಗನು ನಿನ್ನಿಷ್ಟ್ಯದಂತೆ ಮಹಾಪರಾಕ್ರಮದಿಂದ ಜಯಶೀಲನಾಗುವನು, ಪರಿಗ್ರಹಿ ಸು; ಎಂದು ಹೇಳಿ ಅನುಗ್ರಹಿಸಿ, ತನ್ನ ಸ್ಥಾನಕ್ಕೆ ತೆರಳಿದನು. ಕನಕಾ ಹನು ಆ ಮಗುವನ್ನೆತ್ತಿ ತಬ್ಬಿ ಮುದ್ದಾಡಿ ಸಂತೋಷಗೊಂಡು, ತನ್ನ ಪ ಟ್ಟಣಕ್ಕೆ ಸುದ್ದಿಯನ್ನು ಕಳುಹಿ, ಅಲಂಕಾರಗೊಳಿಸಿ, ಕಲಶ ಕನ್ನಡಿ ಆರ ತಿ ಮೊದಲಾದುವುಗಳನ್ನು ಸಿಡಿದ ಮುತ್ತೈದೆಯರಿಂದ ಇದಿರ್ಗೊಂಡು ವೈ ಭವದಿಂದ ಪುರಪ್ರವೇಶವನ್ನು ಮಾಡಿ, ಅರಮನೆಯಲ್ಲಿರುವ ತನ್ನ ಪತ್ನಿಯ ಹಸ್ತಕ್ಕೆ ವರಪುತ್ರನನ್ನು ಕೊಟ್ಟನು. ಆಕೆಯು ಕಂದನನ್ನು ಸಂಭ್ರಮ ದಿಂದೆತ್ತಿ ತೊಡೆಯಮೇಲೆ ಮಲಗಿಸಿ, ಹಾಲುಚಿಮ್ಮುತ್ತಿರುವ ಮೊಲೆಯ ನುಣಿಸಿ, ಮುದ್ದಾಡಿ “ ೩ ?” ಎಂದು ಪಾಡಿ, ಚಿನ್ನದ ತೊಟ್ಟಿಲಲ್ಲಿ ಮಲಗಿಸಿ ಜೋಗುಳವನ್ನು ಹೇಳಿ ಸಖಿಯರೊಡನೆ ತೂಗಿ, ಸಂತೋಷದಿಂ ದ ತನ್ನ ಪತಿಯ ಸಾಹಸವನ್ನು ನೆನೆನೆನೆದು ಕೊಂಡಾಡಿದಳು, ಮತ್ತೂ ಸತಿಪತಿಗಳು ಶುಭ ದಿವಸದಲ್ಲಿ ಗುರುವಾದ ಶುಕ್ರಾಚಾರೈನ ನೇಮದಂತೆ 85