ಪುಟ:ಚೆನ್ನ ಬಸವೇಶವಿಜಯಂ.djvu/೨೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚನ್ನಬಸವೇಶವಿಜಯಂ (ಕಾಂಡ ೪) [ಅಧ್ಯಾಯ ಶಿವನ ಬಾಯಿಂದ ಬಂದಿದ್ದ ನಾಮವನ್ನೇ ಅನುಸರಿಸಿ, “ ಅಂಧಕಾಸುರ ?” ನೆಂದು ಮಗನಿಗೆ ನಾಮಕರಣ ಮಾಡಿದರು. ಆತನು ದೇವತೆಗಳ ಮಹಾ ಮೃತ್ಯುವು ವೃದ್ಧಿಗೊಳ್ಳುತ್ತಿರುವಂತೆಯ, ಪಾಪಸ್ಸರೂಪವು ಬಳೆಯುತ್ತಿ ರುವಂತೆಯೂ, ಮಾಯೆಯ ಬೆಟ್ಟವು ದೊಡ್ಡದಾಗುತ್ತಿರುವಂತೆಯ ದಿನದಿ ನಕ್ಕೆ ಪ್ರವರ್ಧಮಾನನಾಗುತ್ತ ಬಂದನು. ಹೀಗಿರುತ್ತಿರುವಲ್ಲಿ ಈತನ ತಂ ಡೆಯಾದ ಹಿರಣ್ಯಾಕನೂ, ಅವನ ಸಹೋದರನಾದ ಹಿರಣ್ಯಕಶಿಪುವೂ ವ ರಾಹ ನೃಸಿಜ್ಞಾವತಾರವನ್ನು ಧರಿಸಿದ್ದ ಹರಿಯಿಂದ ಮೃತರಾಗಲಾಗಿ, ಅವರ ದುರ್ಗಗಳಲ್ಲಿ ಅವರ ಅಣ್ಣ ತಮ್ಮಂದಿರ ಮಕ್ಕಳು ಮಿತ್ರರು ಮಂತ್ರಿಗಳು ದಳ ನಾಯಿಗಳು ಭಟರು ಮೊದಲಾದವರುಗಳಲ್ಲಿ ವಾಸಮಾಡಿಕೊಂಡಿದ್ದ ರು. ಅವರೆಲ್ಲರನ್ನೂ ಅಂಧಕಾಸುರನ ಬಳಿಗೆ ಹೋಗಿ ಓಿಸಿಕೊಂಡಿರುವಂತೆ ಶುಕ್ರಾಚಾರ್ನು ಬೆಸಸಲಾಗಿ ಅದರಂತೆಯೇ ಅವರುಗಳು ಬಂದು ಈ ಅಸುರನಿಗೆ ರಾಕ್ಷಸರಾಜಪಟ್ಟವನ್ನು ಕಟ್ಟಿ ಕಾಣೆಯಿತ್ತು ನಮಸ್ಕರಿಸಿ ಓಲೈಸಿಕೊಂಡಿದ್ದರು. ಇದರಿಂದ ಮದವೇರಿದ ಆನೆಯ ಕೈಗೆ ಆಯುಧ ವನ್ನು ಕೊಟ್ಟಂತೆಯೂ, ಹಸಿದ ಹೊಸಹಾವಿಗೆ ರಕ್ಕೆ ಮೂಡಿದಂತೆಯ ಕೋಪದಿಂದ ಆರ್ಭಟಿಸುವ ಹಿರಿಯ ಹುಲಿಗೆ ಧೈರವು ಮೂಡಿದಂತೆಯೂ, ಕತ್ತಲೆಗೆ ಕಾಠಿಣ್ಯವು ದೊರೆಕೊಂಡಂತೆಯೂ, ಮತ್ತಷ್ಟು ಸಹಾಯಕ ವಾಗಿ ಈ ರಾಕ್ಷಸರಾಜನ ಶೌರಸಾಹಸ ಬಲಗಳು ದಿನದಿನಕ್ಕೆ ಹೆಚ್ಚುತ್ತ ಬಂದುವು. ಭೂಮಿಯಮೇಲಿದ್ದ ಅನೇಕರಾಜರುಗಳ ಗಿರಿ ವನ ದುರ್ಗಾ ದಿಗಳನ್ನೆಲ್ಲ ತನ್ನ ಧೀನಮಾಡಿಕೊಳ್ಳುತ್ತ ಬಂದನು, ಸಪ್ತ ದೀಪ ಸಪ್ತ ಸಮುದ್ರಾದಿ ಭೂಲೋಕವೆಲ್ಲಾ ತನ್ನ ಧೀನವಾದಬಳಿಕ ಸ್ವರ್ಗಲೋಕ ಕ್ಯೂ ದಾಳಿಯಿಟ್ಟನು. ಇಂದ್ರಾದಿದಿಕ್ನಾಲಕರನ್ನು ಸದೆಬಡಿದು ಅವರವರ ಲೋಕದಿಂದ ಓಡಿಸಿದನು. ದೇವಾಂಗನೆಯರನ್ನೆಲ್ಲಿ ಸೆರೆಹಿಡಿಸಿ ತನ್ನ ಪ ಟ್ಟಣಕ್ಕೆ ಸಾಗಿಸಿದನು. ಕೊನೆಗೆ ಸತ್ಯಲೋಕ ವೈಕುಂಠಲೋಕಗಳಿಗೂ ನುಗ್ಗಿ ಬ್ರಹ್ಮ ವಿಪ್ಪುಗಳನ್ನೋಡಿಸಿದನು, ಅವರು ಹೆಂಡಿರುಗಳನ್ನು ಕಟ್ಟಿ ಕೊಂಡು ಕೈಲಾಸಪರಂತಕ್ಕೆ ಹೋಗಿ, ಶಿವನ ಮರೆಹೊಕ್ಕರು. ಇತ್ತ ಅ೦ ಧಕಾಸುರನಿಗೆ ಚತುಸ್ಸಾಗರಮಧ್ಯದ ಭೂಮಿಯೆಲ್ಲ ಅಧೀನವೇ ಆಯಿತು. ಅವನಿಗಿದಿರಾಗುವವರು ಸ್ವರ್ಗಮರ್ತೃಪಾತಾಳಗಳಲ್ಲಿ ಒಬ್ಬರೂ ಇಲ್ಲದಂ