ಪುಟ:ಚೆನ್ನ ಬಸವೇಶವಿಜಯಂ.djvu/೨೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

.vಳಿ Lyrಳಿ ಚಿನ್ನ ಬಸವೇಶವಿಜಯಂ (ಕಾಂಡ ೪) [ಅಧ್ಯಾಯ ತಿರುವವನೇ ಹರಿಯು; ನವಿಲನ್ನೇರಿ ಆರುಮುಖಗಳನ್ನು ಹೊಂದಿ ಶಕ್ಕಾ ಯುಧವನ್ನು ಪಿಡಿದಿರುವವನೇ ಏಳುದಿನದ ವಯಸ್ಸಿನಲ್ಲಿ ಲೋಕಭೀಕರ ನಾದ ತಾರಕಾಸುರನನ್ನು ಕೊಂದ ಲೋಕೈಕವೀರನಾದ ಕುಮಾರಸ್ಕಾ ವಿಯು; ಈತನೇ ಈ ಸಕಲ ದೇವಸೇನೆಗೂ ದಳಪತಿಯು; ಅದೋ ಖಡ್ಗ ಖಟ ಸಬಳ ಫಲಕ ಮೊದಲಾದ ಮೂವತ್ತೆರಡು ಆಯುಧಗಳನ್ನು ಹಿಡಿದು ವಿರರಸವೇ ಮರಿವತ್ತಾದಂತೆ ನಿಂತು ತೋರುತ್ತಿರುವವನೇ ಶಿವನ ಕೋಪಾಗ್ನಿಯಿಂದುದಿಸಿದ ವೀರೇತನು; ಈತನೇ ನೃಸಿಕ್ಕ ಭೀಮ ವಿಕ್ರಮ ವ್ಯಾಳ ಪಂಚಮೇಢ ಮೊದಲಾದವರನ್ನು ಜೈಸಿದ ಮಹಾಶೂ ರನು; ಅತ್ತ ನಿಂತಿರುವವರನ್ನು ನೋಡು- ಮುಳಿದರೆ ಅನಂತಬ್ರಹ್ಮಾಂ ಡವನ್ನೆಲ್ಲ ಸುಟ್ಟು ಬೂದಿಮಾಡುವ-ಸಮುದ್ರಗಳನ್ನೂ ಆಪೋಶನಮಾಡಿ ಕೊಳ್ಳುವ ಸಾಮರ್ಥ್ಯವುಳ್ಳ ರುದ್ರಗಣವೇ ಅವರು; ಇವರೆಲ್ಲರ ಮಧ್ಯದಲ್ಲಿ ನಿಂತು ಪಂಚಮುಖ ದಶಭುಜ ಚಂದ್ರಶೇಖರ ವೃಷಭ ವಾಹನಗಳಿಂದೆ ಘ್ನು ಶುದ್ಧ ಸ್ಥಟಕವರ್ಣನಾಗಿರುವವನೇ ಪರಮೇಶ್ವರನು; ಆತನೇ ಇ ಕ್ಲಾಮಾತ್ರದಿಂದ ಅಗಣಿತಭುವನವನ್ನು ನಿರಿಸಿ ಲಯಗೊಳಿಸುವ ಮಹಿ ಮೆಯುಳ್ಳ ಪ್ರತಿಭಟಿಸಿದವರನ್ನು ಕೊಂದು ಮರೆಹೊಕ್ಕವರನ್ನು ಉದ್ಧರಿ ಸುವ_ಬಿರುದಿನ ಮಹಾದೇವನು, ಆತನನ್ನು ಮರೆಹೊಕ್ಕು ಬಾಳುವುದೇ ನಿನಗೆ ಶ್ರೇಯಸ್ಕರವೆಂದು ನನಗೆ ತೋರುತ್ತದೆ. ಅದರಂತೆ ಮಾಡುವುದೇ ಸರ ಥಾ ಉಚಿತವ; ಎಂದು ನುಡಿದನು. ರಾಕ್ಷಸರನು ಕೇಳಿ ಖತಿ ಗೊಂಡು, ಗುರುಗಳೆ ! ಚೆನ್ನಾಗಿ ಹೇಳಿದಿರಿ ! ಒಳ್ಳೆಯ ಅಂಜುಕುಳ ಯ ಮಾತನ್ನಾಡಿದಿರಿ ' ಎಂದು ತಿರಸ್ಕರಿಸಿ, ಆರ್ಭಟಮಾಡಿ, ತನ್ನ ಸುವ ರ್ಣರಥವನ್ನು ದೇವಸೇನೆಯ ಮುಂಗಡೆಗೆ ತಿರುಗಿಸಲು, ದಳಪತಿಗಳಪ್ಪ ಣೆ ಯಮೇರೆ ಚೂಣಿಯ ಸೈನಿಕರು ಸಂಧಿಸಿ ಕಾದಾಡಲುಪಕ್ರಮಿಸಿದರು. ಬೊಬ್ಬೆಗಳು ದಿಂಡಲವನ್ನು ಭೇದಿಸಿದುವು. ಮೂದಲೆಗಳು ಗಣನಾತೀ ತವಾದುವು. ಧನುಷ್ಕಕಾರವು ಎಡೆಬಿಡದಂತಾಯಿತು ಆಯುಧಗಳ ಸದ್ದು ಕಿವಿಯನ್ನು ಕಿವುಡುಗೊಳಿಸಿತು. ರಕ್ತದ ಹಾರಾಟವು ಬಿರುಮಳೆಯನ್ನು ವಿಾರಿಸಿತು, ರಥಕ್ಕೆ ರಥ, ಆನೆಗೆ ಆನೆ, ಕುದುರೆಗೆ ಕುದುರೆ, ಕಾಲಾಳಿಗೆ ಕಾಲಾಳು, ಇದಿರಾಗಿ ವೀರಾವೇಶದಿಂದ ಕಾದಿ ಪ್ರತಿಪಕ್ಷದವರನ್ನು ತಲೆ