ಪುಟ:ಚೆನ್ನ ಬಸವೇಶವಿಜಯಂ.djvu/೨೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

bಕಿ ಅಂಧಕಸಕ್ಕಾರಯಾತ್ರಯು ದೂಗಿಸುತ್ತಿದ್ದರು. ಇರಿವ ತರಿವ ಪರಿವ ಮುರಿವ ಕೊರೆವ ನೆರೆವ ಕಚ್ಚುವ ಕೊಚ್ಚುವ ಮೆಚ್ಚುವ ಹೆಚ್ಚುವ ಬೀಳ ನೀಳ ಕೊಳ್ಳ ಏಳ್ಳ ವಿಡಿವ ಮಿಡಿವ ಕಡಿವ ಕಡೆವ ಪೊಡೆವ ತಡೆವ ನಡೆವ ಸೆಡೆವ ನೂಂಕವ ಔ೦ಕುವ ಸೋಂಕುವ ತೆಂಕುವ ಇರುಂಕುವ ತುಡುಂಕುವ ಕಲಂಕುವ ಪಟುಭಟ ರಗಳು ಸಮರಾಂಗಣವನ್ನು ಭಯಂಕರವಾಗಿ ಮಾಡಿದರು. ಎತ್ತ ನೋಡಿ ದರೂ ಹೆಣಗಳು ಕರುಳುಗಳು ತಲೆಗಳು ಮುಂಡಗಳು ಕಡಿತೋಳು ರಕ್ತ ದ ಪ್ರವಾಹಗಳು ರಥದ ಮುರುಕುಗಳು ಆನೆಗಳ ಹೋಳುಗಳು ಕುದುರೆ ಗಳ ಸೀಳುಗಳು ಛತ್ರಚಾಮರಗಳ ತುಣುಕುಗಳು ಕಿರೀಟ ಕುಂಡಲ ಹಾರಗಳು ಬಾಣ ಬತ್ತ೪ಕೆ ಗದೆ ಕತ್ತಿ ಕುಂತ ಮೊದಲಾದಾಯಧಗಳು ತುಂಬಿ ತೋರುತ್ತಿದ್ದುವು. ಭೂತ ಪ್ರೇತ ಪಿಶಾಚ ಶಾಕಿನಿ ಡಾಕಿನಿಯರು ಮಾಂಸವನ್ನು ತಿಂದು ರಕ್ತವನ್ನು ಕುಡಿದು ಕರುಳಮಾಲೆಯನ್ನು ಹಾಕಿ ತಲೆಬುರುಡೆಗಳನ್ನು ವಿಡಿದು ಹೆಣಗಳ ತಲೆಯ ಕಿರೀಟವನ್ನು ಕಿತ್ತು ತಮ್ಮ ತಲೆಗೆ ಸಿಕ್ಕಿಸಿ ಅವರ ಬಿರುದಿನ ಪೆಂಡೆಯಗಳನ್ನು ತಮ್ಮ ಕಾಲಿಗೆ ಹಾಕಿ ಹಾಡತ್ತ ಕುಣಿಯುತ್ತ ಕುಪ್ಪರಿಸುತ್ತ ವಿಹರಿಸುತ್ತಿದ್ದುವು. ಎಂದು ಚೆನ್ನಬ ಸವೆ ಶನು ಅಪ್ಪಣೆಕೊಡಿಸಿದನೆಂಬಿಲ್ಲಿಗೆ ಎಂಟನೆ ಅಧ್ಯಾಯವು ಮುಗಿದುದು. ಜ೧ ೯ ನೆ ಅಧ್ಯಾಯವು. - ಬಲ ನನುಚಿ ದೈತ್ಯಾದಿ ಯುದ್ದವು. ಸಿದ್ದರಾಮೇಶನೆ ಕೇಳು-ಚೂಣಿಯ ಸೇನೆಯೆಲ್ಲವೂ ಹತವಾಗುತ್ತ ಬರಲು, ಅತಿರಥಮಹಾರಥರುಗಳು ತಮ್ಮ ರಥಗಳನ್ನು ಮುಂದೆ ಸರಿಸಿ, ಧ ನುಸ್ಸಿಗೆ ಗರಿಯಬಾಣವನ್ನು ಹೂಡಿ ಅತಿಚಮತ್ಕಾರದಿಂದ ಪ್ರಯೋಗಿಸು ತಿದ್ದರು. ತೊಟ್ಟಾಗ ಕಾಣುತ್ತಿದ್ದ ೧ ಬಾಣವು ಬಿಟ್ಟಾಗ ಹತ್ತಾಗಿ ಹೋಗುವಾಗ ನೂರಾಗಿ, ನಡುವಾಗ ಸವಿರವಾಗಿ, ಹೊರಹೊರಡುವಾಗ ಲಕ್ಷಗಳಾಗುತ್ತಿದ್ದಿತು. ರಾಕ್ಷಸನ ಸೇನಾನಾಯಕರೂ, ದೇವತೆಗಳ ಕಡೆ ಯ ದಿಕ್ಷಾಲಕರೂ ಬಿಟ್ಟ ಬಾಣಗಳು ಪ್ರತಿಪಕ್ಷದವರನ್ನು ಚುಚ್ಚಿ, ರಕ್ತ ವನ್ನು ಸುರಿಸಿ, ಕತ್ತುಗಳನ್ನು ಕತ್ತರಿಸಿ, ರುಂಡಗಳನ್ನು ಹಾರಿಸಿ, ಕಂಗೆ