ಪುಟ:ಚೆನ್ನ ಬಸವೇಶವಿಜಯಂ.djvu/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಲ ನನುಚಿ ದೃವ್ಯಾದಿಯುದ್ಧವು ೬rt ವನ್ನು ನಿನಗಾಗಿಯೇ ಮೀಸಲಾಗಿ ಇಟ್ಟಿದ್ದೆನು, ತೆಗೆದುಕೊ” ಎಂದು ಹೇ ೪ ಗುರಿಗಟ್ಟಿ ಪ್ರಯೋಗಿಸಿ ಅವನ ರಥ ತುರಗ ಧ್ವಜ ಪತಾಕಗಳನ್ನೆಲ್ಲ ಕ ಡಿದು, ಬಡರೆ ರುದ್ರಾಸ್ತ್ರವನ್ನು ಬಿಟ್ಟು ದನುಜನ ಕತ್ತನ್ನು ಕತ್ತರಿಸಿ ಗಗನತಟಕ್ಕೆ ಹಾರಿಸಿ ಬೊಬ್ಬಿರಿದನು. ಇದನ್ನು ಕಂಡು ಬಲಾಸುರನು ಇಂದ್ರನಿಗಿದಿರಾಗಿ, ಎಲೋ ನೀಚನೆ ! ನಿನ್ನ ಬಾಣಕ್ಕೆ ನಮುಚಿಯು ಬಲಿಯಾದನು, ನನ್ನ ಬಾಣಕ್ಕೆ ನೀನು ಬಲಿಯಾಗು, ” ಎಂದು ಹೇಳು ತ್ಯ, ಬಾಣಾವಳಿಗಳನ್ನು ಇಂದ್ರನ ಸುತ್ತಲೂ ಮುತ್ತಿಸಿದನು, ಇಂದ್ರನು ಕಣ್ಣನ್ನು ಮುಚ್ಚಿ ತೆರೆಯುವುದರೊಳಗೆ ಅವನ್ನೆಲ್ಲ ಪ್ರತಿಬಾಣಗಳಿಂದ ಖಂ ಡಿಸಿ, “ ಎಲೋ ಖಳನೆ ! ಕೈಯಲ್ಲಿ ಸಾಗದವನು ಬಾಯಲ್ಲಿ ಬೈದಾ ಡಬೇಕು, ನಿನ್ನ ಆಸೆಯನ್ನು ಬಿಟ್ಟು ಬಿಡುವಂತೆ ನಿನ್ನ ತಾಯೊಡನೆ ಹೇಳಿ ಬಂದಿದ್ದರೆ ಸರಿ, ಇಲ್ಲದಿದ್ದರೆ ಈಗಳಾದರೂ ಹೇಳ ಬಾ ಹೋ ಗು, ಅಥವಾ ನಿನ್ನ ಹೆತ್ತವಳನ್ನು ಪುತ್ರಶೋಕದಿಂದ ಸಾಯುವಂತೆ ಮಾ ಡದೆ, ನನಗೆ ಶರಣಾಗತನಾಗಿ ಯುದ್ಧಾ೦ಕಣದಿಂದ ತಿರುಗಿ ತಲೆಯುಳುಹಿ ಕೊಂಡು ಬಾಳು ; ಇವೆರಡೂ ಇಲ್ಲದಿದ್ದರೆ ನಮುಚಿಯ ಮೇಲಣ ಅಭಿ ಮಾನದಿಂದ ಅವನ ಸ್ಥಾನಕ್ಕೆ ಬಂದು ನಿಂತಿರುವ ನಿನ್ನನ್ನೂ ಅವನ ಜತೆ ಯಲ್ಲಿಯೇ ಪರಲೋಕದಲ್ಲಿ ಇರುವಂತೆ ಮಾಡಿ ನಿಮ್ಮಿಬ್ಬರ ಸ್ನೇಹಬಂ ಧವನ್ನು ಕಾಪಾಡುತ್ತೇನೆ, ನೋಡು ೨” ಎಂದು ಹೇಳಿ, ೧೫ ಬಾಣಗಳ ನ್ನು ರಾಕ್ಷಸನ ಮೇಲೆ ಪ್ರಯೋಗಿಸಿದನು, ಅವುಗಳ ಹತಿಯಿಂದ ನೋಂ ದ ರಕ್ಕಸನು ಕೆರಳ, ಮಾರವಾದ ಬಾಣವೊಂದನ್ನು ಇಂದ್ರನ ಹಣೆಗೆ ಪ್ರ ಯೋಗಿಸಿದನು, ಅದರೇಟಿನಿಂದ ಇಂದ್ರನು ಕಣ್ಣ ಮುಚ್ಚಿ ಕ್ಷಣಕಾಲ ಮೂ ರ್ಛಗೊಂಡನು. ಬಳಿಕ ಎಚ್ಚತ್ತು ರೋಪೋದ್ರಿಕ್ತನಾಗಿ, ಕವಲುಬಾಣ ವನ್ನಾದು ತೆಗೆದು ಬರಸೆಳೆದು ದೈತನ ಕೋರಲಿಗೆ ಗುರಿಯಿಟ್ಟು ಹೊಡೆದ ನು, ಅದು ರಕ್ಕಸನ ತಲೆಯನ್ನು ಚಂಡನ್ನು ಹಾರಿಸಿದಂತೆ ಹಾರಿಸಿಕೊಂ ಡು ಹೋಯಿತು, ಬಲನ ದೇಹವು ಭೂಮಿಯಮೇಲೆ ಬೆಟ್ಟದಂತೆ ಉರು ೪ತು. ದೇವಸೇನೆಯಲ್ಲಿ ಜಯಭೇರಿಯ ಶಬ್ದ ವಾಯಿತು. ರಾಕ್ಷಸರು ಬೆ ಜೈ ಹಿಂದೆಗೆದರು, ವೃತ್ತ ಜಂಭಾಸುರರು ನನುಚಿ ಬಲರ ಮರಣವನ್ನು ಕೇಳಿ, ಕೆರಳ, ಇಂದ್ರನಕಡೆಗೆ ರಥವನ್ನು ಸಾಗಿಸಿಕೊಂಡು ಬಂದರು.