ಪುಟ:ಚೆನ್ನ ಬಸವೇಶವಿಜಯಂ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಿನ ಚಿತ್ಕಳಾವತರಣ ರ್ಥವನ್ನು ಬೋಧಿಸುವಂತೆ ದಯಪಾಲಿಸಬೇಕೆಂದು ಕೇಳಿಕೊಂಡಳು. ಆಗ ನಾನು ಹಾಗೇಆಗಲಿ; ನಾರದ ಮಹರ್ಷಿಯು ಈದಿನ ಬಂದ ಕಾರ್ ವು ನಿದ್ದಿನಿತು; ನಿನ್ನಿಂದಲೂ ಈ ನಂದೀಶನಿಂದಲೂ ಭೂತಲದ ಗಣತ್ರೆ ಣಿಯ ಭವನೆಲ್ಲವೂ ತೊಲಗುವಂತಾಯಿತು; ಮುಂದೆ ಭಾರತ ಭೂಮಿ ಯಲ್ಲಿ ವೀರಶೈವಧುವು ಒಳ್ಳೆಯ ನೆಲೆಗೆ ನಿಂತುಕೊಳ್ಳುವುದು; ಅದುಕಾ ರಣ, ಮುಂದಾಗಿ ನೀವೆಲ್ಲರೂ ಭೂಮಿಗೆ ಹೋಗಿ ಜನಿಸಿರಿ; ಹಿಂದೆಯೇ ನಾನು ನನ್ನ ಜ್ಞಾನಪುತ್ರನನ್ನು ಕಳುಹಿಸಿಕೊಡುತ್ತೇನೆ; ಎಂದು ಹೇಳಿದೆ ನು. ಆಗ ನಂದೀಶನು-ಸಿಜವಾಗಿ ಕಳುಹಿಸುವಿರೆ? ಎನಲು, ನಾನು-ಕಳು ಹುತ್ತೇನೆ ಎಂದೆನು. ನಂದಿ-ನಂಬಿಕೊಳ್ಳಲೋ? ಎನಲು, ನಾನು ನಬು, ನಿನ್ನನ್ನು ಬಿಟ್ಟಿರುವುದಿಲ್ಲ; ಹೋಗು: ಕತ್ತಲೆಯನ್ನು ಬೆಳಕೂ, ವಿಷವನ್ನು ಅಮೃತವೂ, ಪಾಪವನ್ನು ಪುಣ್ಯವೂ, ಓಡಿಸಿಬಿಡುವಂತೆ ನೀನು ಭೂಮಿಯಲ್ಲಿ ಅನೇಕ ಪವಾಡಗಳಿಂದ ಪರವಾದವನ್ನು ಗೆದ್ದು, ನಿಮ್ಮ ಲವಾದ ವೀರಶೈವಮಾರ್ಗವನ್ನು ಉದ್ಧರಿಸು, ಎಂದು ಹೇಳಿ ಕಳುಹಿಸಿಕೊಟ್ಟೆನು. ಆ ಕೂಡಲೇ ಒಳರೆಪ್ಪತ್ತಮರಗಣಂಗಳೂ, ರುದ್ರಕನ್ನಿಕೆಯರೂ, ಇತರ ಅಸಂಖ್ಯಾತಗಣಂಗಳೂ ಸಹ ಸಂತೋಪದಿಂದೆದ್ದು, ಭಕ್ತಿಯಿಂದ ನಮ ಸ್ಕರಿಸಿ, ನನ್ನಪ್ಪಣೆಯನ್ನು ಪಡೆದು, ಭೂಮಿಗಿಳಿದು ನಾನಾಮಾನವ ಗರ್ಭ ದಲ್ಲಿ ಜನಿಸಿ, ಅನೇಕ ವಿಧವಾದ ಕಾಯಕಗಳನ್ನು ಹಿಡಿದು, ವೀರಶೈವಾ ಚಾರಸಂಸನ್ನರಾಗಿ ಇರುತ್ತಿರುವರು, ಅವರಲ್ಲಿ ಆದಿನಿರಂಜನಮೂದ್ಯೆಯೆ ಅಲ್ಲಮಪ್ರಭುವಾಗಿಯೂ, ನನ್ನ ಪ್ರತಿಬಿಂಬವೇ ನಿದ್ದರಾಮವಾಗಿಯ, ವೀರಭ೨ನೇ ಮಡಿವಳ ಮಾಚಿದೇವನಾಗಿಯೂ, ಮಹಾ ದೇವಿಯೆಂಬ ರುದ್ರಕನಕೆಯೇ ವಾದೇವಿಯಕ್ಕನಾಗಿಯೂ, ಹೀಗೆಯೇ ಉಳಿದ ನಾನಾ ಗಣಂಗಳು ನಾನಾವಿಧದ ರೂಪನಾಮಾದಿಭೇದಗಳಿ೦ದ ಅವತರಿಸಿರುವರು. ಮಲಡಿಗೆ ಮಾದಿರಾಜನೆಂಬ ಬ್ರಾಹ್ಮಣನ ಪತ್ನಿಯಾದ ಮಾದಾಂಬಿಕೆಯ ಗರ್ಭದಲ್ಲಿ ಪಾರತಿಯ ಚಿತ್ಕಳೆಯು ನಾಗಲಾಂಬಿಕೆಯೆಂಬ ಹೆಸರಿನಿಂದ ಲೂ, ನಂದೀಶನು ಬಸವರಾಜನೆಂಬ ಹೆಸರಿನಿಂದಲೂ ಅಕ್ಕತಮ್ಮಂದಿರಾಗಿ ಉದಿಸಿರುವರು. ಬಸವೇಶವಾದರೂ ತನ್ನ ತೇಜಸ್ಸಿನಿಂದ ಕಲ್ಯಾಣಪುರದ ರಸಾದ ಬಿಜ್ಜಳನಿಗೆ ಮುಖ್ಯ ಮಂತ್ರಿಯಾಗಿರುವನು. ಮತ್ತೂ ಸಕಲ ಶಿವ