ಪುಟ:ಚೆನ್ನ ಬಸವೇಶವಿಜಯಂ.djvu/೩೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚನ್ನಬಸವೇಶವಿಜಯಂ (ಕಾಂಡ ೪) ಅಧ್ಯಾಯ ನಿಗೆ ಅಧೋಕ್ಷಜನೆಂತಲೂ ಹೆಸರಾಯಿತು. ಹರಿಬ್ರಹ್ಮರು ವಾದಮಾಡಿ, ಮಧ್ಯದಲ್ಲಿ ಉದ್ಭವಿಸಿದ ಲಿಂಗದ ಪಾದ ಶಿರಸ್ಸುಗಳನ್ನು ಕಾಣುವುದಕ್ಕಾಗಿ ಹಂದಿ ಹಕ್ಕಿಗಳಾಗಿ ಹೋಗಿ, ಕಾಣಲಾರದೆ ಹೋದರು. ಶಿವನ ಕೈಯಲ್ಲಿ ದ್ದ ಭಿಕ್ಷಾಪಾತ್ರೆಗೆ ಹರಿಯು ತನ್ನ ಹಣೆಯನ್ನು ಕೊರೆದು ರಕ್ತವನ್ನು ಸು ರಿಸಿ ತೃಪ್ತಿಗೊಳಿಸಲಾರದೆ ಹೋದನು. ಹರಿಯು ಶಿವನನ್ನು ತಪಸ್ಸಿನಿಂದ ಮೆಚ್ಚಿಸಿ ಜಲಂಧರನ ವಧೆಗಾಗಿ ಶಿವನು ನಿರಿಸಿದ್ದ ಚಕ್ರವನ್ನು ಪಡೆದು ಕೊಂಡನು. ಮಹಾಪ್ರಳಯದಲ್ಲಿ ನಾರಾಯಣನು ಆಲದೆಲೆಯಮೇಲೆ ಮು ಲಗಿ ತೇಲುತ್ತಿರುವನು. ಶಿವನು ಆ ಮಹಾಜಲವನ್ನು ಮಲ್ಲಿಕಾಕುಸುಮ ದಂತೆ ಜಡೆಯಲ್ಲಿ ಧರಿಸಿಕೊಂಡನು. ಜಗತ್ತನ್ನೆಲ್ಲ ಆವರಿಸಿದ ಮಹಾವಿಷವು ವಿಸ್ಸು ಬ್ರಹೇಂದ್ರಾದಿಗಳನ್ನೆಲ್ಲ ಸುಟ್ಟು ದಿಗಂತಕ್ಕೆ ಓಡಿಸಲು, ಅದನ್ನು ಶಂಭುವು ಲೀಲಾಮಾತ್ರದಿಂದ ನೀಲಮಣಿಯಂತೆ ವಿಡಿದು ಕಂಠದಲ್ಲಿ ಧರಿಸಿ ದನು, ನಿಮ್ಮ ವೈಕುಂತನು ಸಹಾಯವಾಗಿ ನಿಂತು, ಹನಿಗೆ ಅಗ್ರಭಾಗ ವನ್ನು ಕೊಡದೆ ಮಾಡಿಸಿದ್ದ ದಕ್ಷ ಯಾಗವನ್ನು ಶಿವನು ತನ್ನ ಮಗನನ್ನು ಕ ಳುಹಿ ಹಾಳ್ಳಾಡಿಸಿ ಅಲ್ಲಿದ್ದವರೆಲ್ಲರಿಗೂ ಭಂಗಗೊಳಿಸಿದನು. ಜಗತ್ಕಂಟಕ ರಾಗಿದ್ದ ತಾರಕಾಕ್ಷ ಜಲಂಧರ ಅಂಧಕಾಸುರ ಗಜಾಸುರ ವ್ಯಾಘಾಸುರ ಮೊದಲಾದವರನ್ನೆಲ್ಲ ಶಿವನು ಸಾರಗೊಳಿಸಿ ದೇವತೆಗಳನ್ನುದ್ದರಿಸಿರುವುದ ರಿಂದ ದುಷ್ಯನಿಗ್ರಹ ಶಿಷ್ಯ ಪರಿಪಾಲನೆಗೆ ಆತನೇ ಸಮರ್ಥನಾಗಿರುವನು. ಮತ್ತೂ ಆತನು ವಿಷ್ಣು ಒಂದಾದಿ ಪಶುಗಳಿಗೆಲ್ಲ ಪತಿಯಾಗಿರುವನು. ಅಲ್ಲದೆ ಬ್ರಹ್ಮನು ಸಸ್ಯಗಾತ್ರಸ್ಥರಃಪ್ರಧಾನಂ ” ಎಂಬಂತೆ ದೇಹ ಕೈಲ್ಲ ಮುಖ್ಯವಾದ ತನ್ನ ಶಿರಸ್ಸನ್ನ, ಹರಿಯು " ಸರೇ೦ದ್ರಿಯಾಣಾಂ ನಯನಂಪ್ರಧಾನಂ 2' ಎಂಬಂತೆ ಇ೦ದ್ರಿಯಗಳಲ್ಲಿ ಮುಖ್ಯವಾದ ತನ್ನ ಕಣ್ಣನ್ನೂ ಶಿವನಿಗೆ ಸಮರ್ಪಿಸಿ, ಶಿಷ್ಯರೂ ಭಕ್ತರೂ ಆಗಿರುವರು. ಇದರಿಂದಲೇ ನಿನ್ನ ವಿಷ್ಣುವಿನ ಪೂಜಕತ್ರವೂ ಶಿವನ ಪೂಜ್ಯತ್ನವೂ ಗೊ ತಾಗುವುದಿಲ್ಲವೆ ? ಮತ್ತೂ ನಿನ್ನ ಹರಿಯು ಭೌಗುವಿನ ಶಾಪದಿಂದ ದಶಾವ ತಾರವನ್ನೆತ್ತಿದನು. ಮೊದಲನೆ ಮತ್ಯಾವತಾರದಿಂದ ಸಮುದ್ರವನ್ನು ಹೊಕ್ಕು ಸೋಮುಕಾಸುರನನ್ನು ಕೊಂದು ಅಹಂಕರಿಸಲು, ಶಿವನು ಅವ ನನ್ನು ಸ೪, ಬೆನ್ನ ಮಳೆಯನ್ನು ಧರಿಸಿ ಕಂಕಾಳಧರನಾದನು, ಸಮು