ಪುಟ:ಚೆನ್ನ ಬಸವೇಶವಿಜಯಂ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

hy ಚನ್ನ ಬಸವೇಕನಿಜಯಂ. [ಅಧ್ಯಾಯ ಡು, ಅನುಭವಮಂಟಪಕ್ಕೆ ಬಂದು, ರಾತ್ರಿ ನಡೆದ ಸಂಗತಿಯನ್ನೆಲ್ಲ ದಂ ಡಾಧೀಶನಾದ ಬಸವೇಶ್ವರ ಮೊದಲಾದ ಪ್ರಮಥರೊಡನೆ ಸಾಂಗವಾಗಿ ತಿಳುಹಿದಳು, ಅದನ್ನು ಕೆಬಸವೇಶ ಮೊದಲಾದ ಸಕಲಶಿವಗಣಂ ಗಳೂ ಆನಂದಪಟ್ಟರು. ನಾಗಲಾಂಬಿಕೆಯ ಉಲ್ಲಾಸದಿಂದಿದ್ದಳು. ಕ್ಷೀರಸಮುದ್ರದ ಮಧ್ಯದಲ್ಲಿ ರುವ ರತ್ನದಂತೆಯೂ, ಶರತ್ಕಾಲದ ಮೊ ಡದ ಮರೆಯಲ್ಲಡಗಿರುವ ಶುಕ್ಲ ಪಕ್ಷದ ಚಂದ್ರರೇಖೆಯಂತೆಯ, ಪುಣ್ಯ ಭೂಮಿಗತವಾಗಿರುವ ನಿಧಿಯಂತೆಯೂ, ಗುರುಬೋಧೆಯಲ್ಲಿ ಲೀನವಾಗಿ ರುವ ಮುಕ್ಕಿಯಂತೆಯ, ಸೂಗ್ಯಕಾಂತಶಿಲೆಯಲ್ಲಿ ಗುಪ್ತವಾಗಿರುವ ತೇಜಸ್ಸಿನಂತೆಯ, ಕಲ್ಪವೃಕ್ಷದ ಹೂವಿನ ಮೊಗ್ಗೆಯಲ್ಲಿ ಗುಪ್ತವಾಗಿ ರುವ ಪರಿಮಳದಂತೆಯೂ, ಆ ನಾಗಲಾಂಬಿಕೆಯ ಗರ್ಭದಲ್ಲಿ ಪರತತ್ವ ನಿಧಿಯಾದ ನಿಂತವು ವೃದ್ಧಿಯನ್ನೈದುತ್ತಿದ್ದಿತು. ಇದರಿಂದ ಆಕೆಯ ದೇಹ ದಲ್ಲಿ ಗರ್ಭಚಿಹ್ನಗಳು ತೋರಲಾರಂಭಿಸಿದುವು. ಮುಖವು ಬೆಳ್ಳಗಾಯಿ ತು, ಹೊಟ್ಟೆಯ ಮೇಲಣ ವಳಿಗಳು ಕಾಣದಂತಾದುವು. ರೋಮರಾ ಜಿಯು ಕಷ್ಟಾಯಿತು. "ನಗಳು ದಪ್ಪನಾಗಿ ತೊಟ್ಟು ಕಚ್ಚಾಯಿತು. ನಡುವು ಸ್ಫೂಲವಾಯಿತು, ಅಲಸಿಕೆ ಹೆಚ್ಚಿತು, ನಗೆಯು ಮಂದವಾಯಿ ತು, ಆ ಎಳಸುರಿನಲ್ಲಿ ಶಿವ ಪೂಜೆ, ಶಿವಕಥಾಶ್ರವಣ, ಶಿವೋತ್ಸವದರ್ಶ ನಾದಿಗಳ, ಗುರುಲಿಂಗ ಹಂಗನಸೇವೆ, ತತೀರ್ಥಪ್ರಸಾದಗೀಕಾರಗಳ ಬಯಕೆಯಲ್ಲದೆ ಇನ್ಯಾವ ಬಯಕೆಯ ಆ ತಾಯಿಗೆ ಉಂಟಾಗಿರಲಿಲ್ಲ. ಹೀಗಿರುವಲ್ಲಿ ಆ ಗರ್ಧವ ವಿಷಯವಾಗಿ ಊರಿನಲ್ಲೆಲ್ಲ ಸಾಮಾನ್ಯಜನಗಳಲ್ಲಿ ಗುಜುಗುಂಪಲು ಪಟ್ಟಿ, ನಾಗಲಾಂಬಿಕೆಯು ಘನವಿರಕ್ಕಳು! ಮತ್ತೂ ರಾಜನ ಮುಖ್ಯಮಂತ್ರಿಯಾಗಿರುವ ಬಸವರಾಜನ ಅಕ್ಕ! ಇಂಥವಳು ಬಸುರಾಗಿ ರುವು ಪರಮಾತ್ಮ -! 2” ಎಂಬುದಾಗಿ ಮನೆಮನೆಯಲ್ಲಿ ಹಾದಿಬೀದಿಯಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಇನ್ನು ಕೆಲವರು ಉತ್ತ ಮರಾದವರು ( ಆಕೆಯ) ತ್ರಿಕಾಲಜ್ಞಾನಸಂಪನ್ನೆ; ಸಾಮಾನ್ಯಳಲ್ಲ ? ಎಂದು ಆಡಿಕೊಳ್ಳುತ್ತಿದ್ದು, ಮಧ್ಯಸ್ಥರಾಗಿರುವವರು “ಏನೋ ಹೇಗಿ ರುವುದೊ, ಹೀಗೆಯೇ ಸರಿ ಯೆಂದು ಹೇಳಲಾಗುವುದಿಲ್ಲ ” ವೆಂಬದಾಗಿ ಆಶ್ಚರ ಪಡುತ್ತಿದ್ದರು. ಅವಿವೇಕಿಗಳಾದ ನಿಘಜನರು ನಾನಾವಿಧವಾಗಿ