ಪುಟ:ಚೆನ್ನ ಬಸವೇಶವಿಜಯಂ.djvu/೩೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ ೧೩] | ಕಿರಾಠರುದ್ರನೀತಿ ೧೩ ನ ಅಧ್ಯಾಯವು. ಕಿರಾ ತ ರು ದ) ಲೀಲೆ. ಎಲೈ ಸಿದ್ದರಾಮೇಶನೆ ಕೇಳು- ಪೂರದಲ್ಲಿ ಚಂದ್ರವಂಶದ ಳಗೆ ಹುಟ್ಟಿದ ಪಾಂಡುರಾಯನಿಗೆ ಧಮ್ಮರಾಜ ಭೀಮ ಅರ್ಜುನ ನಕುಲ ಸಹದೇವರೆಂಬ ೫ ಮಂದಿ ಮಕ್ಕಳಾಗಿ, ಅವರು ರಾಜ್ಜಿವನ್ನಾಳಕೊಂಡಿ ರುವಲ್ಲಿ, ಅವರಿಗೂ ದಾಯಾದರಿಗೂ ಕಲಹವು ಹುಟ್ಟಿ, ಬಂಡವರು ಜೂ ಜಿನಲ್ಲಿ ತಮ್ಮ ರಾಜ್ಯಕೋಶಗಳನ್ನೆಲ್ಲ ಸೋತು ಅರಣ್ಯವಾಸಕ್ಕೀಡಾದರು. ಒಂದುದಿನ ಅವರಿದ್ದ ಕಾಡಿಗೆ ವೇದವ್ಯಾಸಮಹರ್ಷಿಯು ಬಂದು, ಹಿರಿಯ ನಾದ ಧಮ್ಮರಾಯನನ್ನು ಕುರಿತು.“ ನೃಪತಿಯೆ ! ನಿಮಗೆ ಶತ್ರುಜಯ ದಿಂದ ರಾಜ್ಯಸಂಪತ್ತು ಮೊದಲಿನಂತೆ ದೊರೆಯಬೇಕಾದರೆ, ಶಿವನಿಂದ ಪಾಶುಪತಾಸ್ತ್ರವನ್ನು ಪಡೆದು ಬರಬೇಕು ?” ಎಂದು ಹೇಳಿದನು. ಅದ ಕ್ಯಾಧರರಾಜನು ಋಷಿವಗ್ಗರೆ ! ಒಳ್ಳೆಯ ಭಗೀರಥಪ್ರಯತ್ನವನ್ನು ಹೇಳದಿರಿ ! ಶಿವನೆಂದರೇನು ? ನಾವೆಂದರೇನು ? ನಮಗೆ ಆತನು ಬಾಣ ನನ್ನನುಗ್ರಹಿಸುವುದೆಂದರೇನು ? ಎಂದು ಆಶ್ಚರದಿಂದ ನುಡಿದನು. ಆಗ ಋಷಿಯು ಅಯ್ಯಾ ! ಶಿವನು ಇತರರಿಗೆ ದುರ್ಲಭನಾದರೂ ಭಕ್ತರಿಗೆ ಸುಲಭನು, ಘನಕೃಪಾಕರನು; ಅವನನ್ನು ಮಚ್ಚಿಸಿ ಅಸ್ತ್ರವನ್ನು ಪಡೆ ದು ಬರುವುದಕ್ಕೆ ನಿಮ್ಮ ತವರಲ್ಲಿ ಈ ಅರ್ಜನನನ್ನು ಕಳುಹಿಕೊಡಿ, ಎಂ ದು ಹೇಳಿ, ಧಮ್ಮರಾಯನಿಗೆ ಶಿವಮಂತ್ರೋಪದೇಶವನ್ನು ಮಾಡಿ, ತೆರಳ ದನು. ಇತ್ತ ಧುರಾಜನು ಅದೇಮಂತ್ರವನ್ನು ಅರ್ಜುನನಿಗೆ ಉಪದೇ ಶಿಸಿ, ತಪಶ್ರಕ್ಕಾಗಿ ಅವನನ್ನು ಕಳುಹಿಕೊಟ್ಟನು. ಆತನು ಇಂದ್ರಕೀ ಲಪರತದ ಅರಣ್ಯಕ್ಕೆ ಹೋಗಿ, ಪ್ರಶಸ್ತವಾದ ಸ್ಥಾನವನ್ನು ಹುಡುಕಿ, ನಿಮ್ಮಲವಾದ ಕೊಳವೊಂದರಲ್ಲಿ ಮಿಂದು, ನಾರುಮಡಿಯನ್ನುಟ್ಟು, ವಿಭೂ ತಿರುದ್ರಾಕ್ಷಗಳನ್ನು ಧರಿಸಿ, ಹೆಗಲಿಗೆ ಬಿಲ್ಲುಬತ್ತಳಿಕೆಗಳನ್ನು ಸೇದಿ ಕಟ್ಟಿ, ಭೂಮಿಯಮೇಲೆ ಪದದ ಹೆಬ್ಬೆರಳನ್ನು ಮಾತ್ರ ಊರಿ ನಿಂತು, ಭುಜಗ ಳನ್ನು ಮೇಲಕ್ಕೆತ್ತಿ, ಕೈಮುಗಿದು, ಮನಸ್ಸಿನಲ್ಲಿ ಶಿವಮರಿಯನ್ನು ನೆಲೆ ಗೊಳಸಿ, ತಪಸ್ಸನ್ನಾಚರಿಸುತ್ತಿದ್ದನು, ಕೆಲದಿನ ಗೆಡ್ಡೆ ಗೆಣಸನ್ನೂ, ಕಲಡಿನ