ಪುಟ:ಚೆನ್ನ ಬಸವೇಶವಿಜಯಂ.djvu/೩೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೋಮಸೂ‌ನ್ನಯವಂಕವಿವರಣವು ಯನ್ನು ಹಿಡಿದೆತ್ತಿ, ಭಕ್ತನೆ! ನಿನ್ನ ದೃಢಭಕ್ತಿಗೆ ಬೆಚ್ಚಿದೆನು; ಇದೊ ಈ ಅಂಜನಾಸ್ತ್ರವನ್ನು ನಿನಗೆ ಕೊಡುವೆನು; ಇದು ಒಂದಾಗಿದ್ದರೂ ಬಿಲ್ಲಿನಲ್ಲಿ ತೊಡುವಾಗ ಹತ್ತು, ಬಿಡುವಾಗ ನೂರು, ಹೊರಗೆ ಹೋಗು ನಾಗ ಸಾವಿರ, ಶತ್ತು ಬಾಣಗಳನ್ನು ಕಡಿವಾಗ ಲಕ್ಷ, ಅರಿಗಳ ಸಮಿಾಪ ಕ್ಕೆ ಹೋಗುವಾಗ ಕೊಟ, ನಡುವಾಗ ಗಣನಾತೀತವಾಗಿ ಹಬ್ಬಿ, ಲಯ ಗೊಳಸಿ, ಮತ್ತೆ ಹಿಂತಿರುಗಿ ನಿನ್ನ ಬಳಿಗೆ ಬಂದು, ಒಂದಾಗಿ ನಿಲ್ಲುವು ದು ?” ಎಂದು ಹೇಳಿ, ಕೈಗೆ ಕೊಟ್ಟು, ಯುದ್ಧಾಂಗಣದಲ್ಲಿ ಜಯಶೀಲ ನಾಗು, ಎಂದು ಹರಸಿದಳು. ಪಾರ್ಥನು ಧನ್ಯನಾದೆನೆಂದು ಆ ಜಗನ್ನಾತಾ ಪಿರ್ತಗಳಿಗೆ ವಂದಿಸಿದನು. ಶಿವನು ಸಕಲಪರಿವಾರದೊಡನೆ ಕೈಲಾಸಕ್ಕೆ ಪ್ರ ಯಾ-೧ಗೊಂಡನು. ಎಲೆ ಸಿದ್ದರಾಮೇಶನೆ! ಇದುವರೆಗೆ ಹೇಳಿದುದೇ ಪರಶಿ ವನ ಪಂಚವಿಂಶತಿ ಲೀಲೆಗಳ ವಿವರಣವು, ಎಂದು ಚೆನ್ನಬಸವೇಶನು ನಿರ ವಿಸಿವನೆಂಬಿಲ್ಲಿಗೆ ಹದಿಮೂರನೆ ಅಧ್ಯಾಯದೊಡನೆ ೪ನೆ ಕಾಂಡವು ಮುಗಿದುದು.

  • * *

೫ ನೆ ಕಾ ೦ ತ ವು ಸೋ ನ ಸೂ ಾ ನ ಯ ವ ೧ ಶ ವಿ ವ ರ ಣ ವು - ಪೂಕ್ತವಾದ ಅರ್ಜುನನ ವೃತ್ತಾಂತವನ್ನು ಕೇಳಿದ ಸಿದ್ದರಾ ಮೇಶನು ಚೆನ್ನಬಸವೇಶ್ವರನನ್ನು ಕುರಿತು ಗುರುವೆ, ಅರ್ಜುನನು ಪಾ ಶುಪತಾಸ್ತ್ರವನ್ನು ಪಡೆದ ಬಳಿಕ ಎಲ್ಲಿಗೆ ಹೋದನು ? ಏನನ್ನು ಮಾಡಿ ದನು ? ಅವನ ಪೂರಾಸರವೇನು ? ದಯೆಯಿಟ್ಟು ಬೋಧಿಸಬೇಕು, ಎಂದು ಬೇಡಿದನು, ಆಗಳಾಚೆನ್ನಬಸವೇಶನು ಹೇಳತೊಡಗಿದನೆಂತೆಂದರೆಎರೈ ಸಿದ್ದರಾಮೇಶ., ಚತುರು ಖಬ್ರಹ್ಮನ ಅಂಗದಿಂದ ನವಬ್ರಹ್ಮರು ಹುಟ್ಟಿದ ಸಂಗತಿಯನ್ನು ಹಿಂದೆಯೇ ವಿವರಿಸಿರುವೆನಮ್ಮೆ; ಆ ನವಬ್ರಹ್ಮ ರಲ್ಲಿ ಒಬ್ಬನಾದ ಅತ್ರಿಮಹರ್ಷಿಯಿಂದ ಚಂದ್ರನು ಹುಟ್ಟಿದನು. ಅವನ ಪಾರಂಪಕ್ಕೆ ಚಂದ್ರವಂಶವೆಂದು ಹೆಸರು, ಚಂದ್ರನಿಂದ ಬುಧನು ಹು ಮೈದನು. ಅವನಿಗೆ ಪುರೂರವನು ಮಗನು. ಪುರೂರವನಿಗೆ ಊರತಿಯ 43