ಪುಟ:ಚೆನ್ನ ಬಸವೇಶವಿಜಯಂ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚನ್ನಬಸವೇಕಾ ವಕರಣವು ಮುಳುಗಿ ಹೋದರು, ಕೂಡಲೇ ದೇವದುಂದುಭಿಯು ಮೊಳಗಿತು ದೇವ ತೆಗಳು ಸಂತೋಷದಿಂದ ಪುಷ್ಪವೃಷ್ಟಿಯನ್ನು ಸುರಿಸಿದರು, ಸಭಿಕರೆಲ್ಲ ರನ್ನೂ ಅಪಾರವಾದ ಭಕ್ತಿರಸವು ಆವರಿಸಿಕೊಂಡಿತು, ಬಸವೇಶನು ಸಂ ತೋಪದಿಂದ ಮೈಮರೆತುಹೋದನು. ಬಿಜ್ಜಳರಾಜನೂ ಭಯಭಕ್ತಿಯಿಂ ದ ಕೂಡಿ ವಿರ್ಘದಂಡವಾಗಿ ನಮಸ್ಕರಿಸಿ, ಹಿಂದೆ ಶುಕಮುನಿಯ, ರಂಭೆ ಗೂ, ಸಿದ್ದರಾಮೇಶನು ಶಿವಶರಣರಿಗೂ ಹೊಟ್ಟೆಯನ್ನು ನೀ೪ ತೋರಿಸಿ ದರೆಂದು ಹೇಳುತ್ತಿದ್ದುದನ್ನು ಕೇಳಿದ್ದೆನು, ಈದಿನ ನಾನೇ ಪ್ರತ್ಯಕ್ಷವಾಗಿ ನೋಡಿದೆನು. ಎಂದು ಹೇಳುತ್ತ, ಎದ್ದು ನಿಂತು, ಕೈಮುಗಿದು“ಎಲೈ ಚಿರೂಪನೇ! ನಿನ್ನ ಸ್ಥಿತಿಯನ್ನು ತಿಳಿಯದೆ ನಾನು ಅಜ್ಞಾನದಿಂದ ಆಡಿದ ದ್ರೋಹವೊಂದು, ಶಿವಶರಣೆಯನ್ನು ಜರೆದ ದ್ರೋಹವು ಎರಡು, ಮೊದ ಲೇ ಕೆಳದ ಮಾತನ್ನು ಶಿವವಚನವೆಂದು ನಂಒದೆ ತಿರಸ್ಕರಿಸಿದ ದೈವ ದ್ರೋಹವು ಮೂರು, ಮದಾಂಧತೆಯಿಂದ ಈಕೆಯ ಹೊಟ್ಟೆಯನ್ನು ನೀ ೪ನಿವ ಸತೀದ್ರೋಹವು ನಾಲ್ಕು , ಇವಿಮ್ಮನ್ನೂ ನಾನು ಮೊದಲೇ ಯೋ ಚಿಸಿಕೊಳ್ಳದೆ ಹೋದ ಆತ್ಮದ್ರೋಹವು ಐದು, ಹೀಗೆ ಈ ಪಂಚದ್ರೋ ಹಗಳಿಂದಲೂ ಕೂಡಿದ ನನ್ನನ್ನು ದಯೆಯಿಂದ ಕಾಪಾಡು?” ಎಂದು ಪ್ರಾ ರ್ಥಿಸುತ್ತಿದ್ದನು. ಮತ್ತೊಂದುಕಡೆ ಬಸವೇಶನು ಸ್ತುತಿಸುತ್ತಿದ್ದನು. ಆ ನೋಂದು ಕಡೆ ಶಿವಶರಣರೆಲ್ಲರೂ ಜಯಜಯ ಎನ್ನುತಿ ದ್ದರು. ಹಿಂದೆ ಮುಂ ದೆ ಭಕ್ತಮಾತೃರಾದಿಗಳು ತುಂಬಿ ಕೊಂಡಾಡುತ್ತಿದ್ದರು. ಹೀಗೆ ಚಿನ್ನ ಬಸವೆಶನು ತನ್ನ ಆವಿರ್ಭಾವಕಾಲದಲ್ಲೇ ಒಂದು ಪವಾಡವನ್ನು ತೋರಿ ನಿದನು. ಆಗ ನಾಗಲಾಂಬಿಕೆಯು ತನ್ನ ಗರ್ಭಾಸನದಲ್ಲಿದ್ದ ಶಿಶುವನ್ನು ಅಂಗೈಗೆ ತೆಗೆದುಕೊಂಡಳು. ಕೂಡಲೇ ಎಂದಿನಂತೆ ಹೊಟ್ಟೆಯು ಸೇರಿ ಕೊಂಡು ಸಣ್ಣಗಾಯಿತು, (ಶಿವಮಹಾತ್ಮಿಯನ್ನು ತಿಳಿಯುವರಾರು! ) ಈ ಮಹಾಪುರುಷನ ಅವತರಣಮಾತ್ರದಿಂದಲೇ ಭೂದೇವತೆಯ ಮತ್ತೂ ಆದಿಶೇಷ ಆದಿಕೂಗ್ಯ ದಿಗ್ಗಜಗಳಮೇಲಿದ್ದ ಭಾರವೆಲ್ಲ ಕಡಿಮೆಯಾಯಿತು. ಕಡಿದು ಒಣಗಿ ಹೋಗಿದ್ದ ಮರಗಳೆಲ್ಲ ಚಿಗುರೇರಿದುವು. ಬರಡುಹಸುಗಳ ಲ್ಲವೂ ಕೊಡತುಂಬಿ ಹಾಲನ್ನು ಕರೆದುವು, ದೇವಾಲಯದಲ್ಲಿದ್ದ ಕಲ್ಲಿನ ಬೊಂಬೆಗಳೆಲ್ಲ ಕುಣಿದಾಡಿದವು, ದುಸ್ಸಮಯಿಗಳ ಎದೆಯೆಲ್ಲಾ ಕಂಪಿಸಿತು.