ಪುಟ:ಚೆನ್ನ ಬಸವೇಶವಿಜಯಂ.djvu/೩೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೬ ವೀರಶೈವಶರಣರ ಕಭಗಳು ರಿಗೆ ಕೊಟ್ಟು ಕತ್ತರಿಸಲು, ರಾಚಮಲ್ಲಯ್ಯನ ತಾಳಕ್ಕೆ ಸರಿಯಾಗಿ ಆ ಮುಂಡವು ಕುಣಿದಾಡಿ ಮತ್ತೆ ರುಂಡಕ್ಕೆ ಸೇರಿ ನೇರವಾಯಿತು, ಹಾವಿನ ಹಾಳಕಲ್ಲಯ್ಯನು ಹಾರರೊಡನೆ ವಾದಮಾಡಿ ನಾಯಿಯಿಂದ ವೇದವನ್ನು ಹೇಳಿಸಿದನು. ಜಂಬೂರಕಾಳಯ್ಯನು ಹಾಗೆಯೇ ಶುನಕನಿಂದ ವೇದವ ನ್ಯೂದಿಸಿದನು. ತಂದೆಯು ತನ್ನ ತಲೆಯನ್ನು ತರಿದು ಶಿವನಿಗೆ ಆರತಿಯೆತ್ತಿ ಮತ್ತೆ ಮುನ್ನಿನಂತೆ ಸೇರಿಸಿಡಲು, ಮಗನಾದ ಗೋವಿಂದಭಟ್ಟನು ಅದನ್ನು ಕಂಡು, ಶಿವನಿಗೆ ಸಮರ್ಪಿಸಿದ ಕಾರಣದಿಂದ ನಿರಾವಾದ ಶಿರಸ್ಸನ್ನು ಮತ್ತೆ ಧರಿಸಿಕೊಳ್ಳುವುದು ಅನುಚಿತವೆಂದು ತಿರಸ್ಕರಿಸಿ, ತನ್ನ ತಲೆಯನ್ನು ತರಿದು ಶಿವನಿಗೆ ಬೆಳಗಿ, ಮರುದಿನದನಂತರ ಹೊಸತಲೆಯನ್ನು ಪಡೆದನು. ಮೊರಟದ ಬಂಕಯ್ಯನು ಒಣಗಿದ ಮೋಟುಮರವನ್ನು ಚಿಗುರಿಸಿ, ಗೊ ಡ್ಡು ಹಸುವಿನಿಂದ ಹಾಲನ್ನು ಕರೆದು, ಬತ್ತಿದ್ದ ಚಿಲುಮೆಯಲ್ಲಿ ನೀರನ್ನು ಹುಟ್ಟಿಸಿ, ಜಂಗಮನಿಗೆ ಕೊಟ್ಟನು. ಮತ್ತೂ ತನ್ನ ಶಿರಸ್ಸನ್ನು ತರಿದು ಲಿಂಗಕ್ಕೆ ಆರತಿಯನ್ನು ಬೆಳಗಿ, ತಲೆಯು ಮತ್ತೆ ಹುಟ್ಟಿಲಾಗಿ, ಅದನ್ನೂ ತರಿದು ಸಮರ್ಪಿಸುತ್ತ, ಹೀಗೆ ಅರುವತ್ತೆರಡುಬಾರಿ ಮಾಡಿ, ಹೊಸಹೊ ಸತಲೆಗೆ ಬೇರೆ ಬೇರೆ ಶರೀರಗಳನ್ನು ಪಡೆದನು, ಅನ್ಯರ ಲಿಂಗವನ್ನು ತಾನು ಎಂದಿಗೂ ಮುಟ್ಟದಿರುವ ನೇಮದ ಬೊಮ್ಮಯ್ಯನೊಬ್ಬನಿದ್ದನು. ತನ್ನ ಲಿಂಗವನ್ನು ಇತರರ ಕೈಯಿಂದ ಮುಟ್ಟಿಸದ ನಿಯಮವುಳ್ಳ ಮತ್ತೊಬ್ಬ ಬೊಮ್ಮಯ್ಯನಿದ್ದನು. ಇವರಿಬ್ಬರೂ ಬಸವೇಶನ ಅರಮನೆಗೆ ಬಂದು ಶಿವಾ ರ್ತನೆಯನ್ನು ಮಾಡಿಕೊಳ್ಳುತ್ತಿರುವಲ್ಲಿ, ಮೊದಲಿನವನು ಎರಡನೆಯವನ ಲಿಂಗವನ್ನು ಮುಟ್ಟಲಾಗಿ, ಅವರವರ ವ್ರತಕ್ಕೆ ಭಂಗ ಬಂದು, ಈರರ ಪ್ರಾಣವೂ ಹೋಯಿತು. ಇವರಿಬ್ಬರೂ ಪ್ರಾಣವಳಿದುದನ್ನು ಮತ್ತೊಬ್ಬ ಬೊಮ್ಮಯ್ಯನು ನೋಡಿ, ಭಕ್ತ ಪ್ರಾಣಿಯಾದುದರಿಂದ ತಾನೂ ಪ್ರಣವ ನ್ನು ಬಿಟ್ಟನು. ಇವರು ಮೂವರನ್ನೂ ನೋಡಿದ ಬಸವೇಶನು ತಾನು ಪ್ರಾ ಣವನ್ನು ಕಳೆದುಕೊಳ್ಳಲು ನಿದ್ದನಾಗುವರಲ್ಲಿ, ವೀರಬಂಕಯ್ಯನು ತನ್ನ ಕೊರಲಿಗೆ ಖಡ್ಗವನ್ನು ಹಾಕಿ, 'ಶಿವಾನುಗ್ರಹದಿಂದ ಮೂವರ ಪ್ರಾಣವನ್ನೂ ಬರಮಾಡಿದನು, ಜೈನನಾದ ಜಯನಿಕ್ಕರಾಜನ ಹೆಂಡತಿ ಶಿವಭಕ್ಕೆಯಾದ ಸುಗ್ಗ ಲದೇವಿಯು, ತನ್ನ ಗುರುವಾದ ದೇವರ ದಾಸಿಮಯ್ಯನನ್ನು ಬರಮಾ