ಪುಟ:ಚೆನ್ನ ಬಸವೇಶವಿಜಯಂ.djvu/೩೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹೀರಶೈವಶರಣರ ಚರಿತ್ರೆ ( ವನ್ನು ತಾನು ಮೊದಲಂತೆ ಮಾಡಿದನು. ಸತ್ತಿದ್ದ ಮಗನಿಗೆ ಆರುತಿಂಗಳ ಮೇಲೆ ಪ್ರಾಣವನ್ನು ಕೊಟ್ಟನು, ವೇಮನಾರನು ತನಗೆ ನಮಸ್ಕರಿಸಿದ ರಾಜನಿಗೆ ಅಲ್ಪಾಯುಷ್ಯವಿದ್ದುದರಿಂದ ಹರಸದೆ ಬಿಟ್ಟು, ಕಡೆಗೆ ಅವನು ಸರ್ಪದಪ್ಪನಾಗಿ ಅಳಿಯಲು, ಹರಣವನ್ನಿತ್ತನು. ಅಮರಗುಂಡದ ಮಲ್ಲಿ ಕಾರ್ಜುನಾರರೆಂಬ ತಮ್ಮ ಗುರುವಿನ ಹಾವುಗೆಗಳನ್ನು ತನ್ನ ಪಾದವು ಸೊಂಕಲಾಗಿ ಗುರುಭಕ್ತಾಗ್ರನು ಕೂಡಲೇ ತನ್ನ ಕಾಲನ್ನು ಕಡಿದು ಕೊಂಡು, ಗುರುವಿನ ಆಜ್ಞೆಯಮೇರೆ ಶೂಲವನ್ನೇರಿ, ಆ ಗುರುವಿನ ಅನು ಗ್ರಹದಿಂದಲೇ ಮತ್ತೆ ಕಾಲನ್ನು ಪಡೆದನು, ಪಾಢವತಿಯನ್ನು ತನ್ನ ಗು ರುವಿನ ಸೂಳೆಯಂದು ಕಾಣದೆ ಮೋಹಿಸಿದ ಗುರುಭಕ್ಸಾಂಡಾರಿಯು ಅವಳಿಂದ ನಿಜಸ್ಥಿತಿಯನ್ನು ತಿಳಿದ ಬಳಿಕ ಕೊರಗಿ ತನ್ನ ಕಣ್ಣನ್ನೇ ಕಳೆ ದುಹಾಕಿ, ಗುರುಕರುಣದಿಂದ ಪಡೆದುಕೊಂಡನು. ಉಷಃಕಾಲಕ್ಕೆ ಶಿವಾ ರ್ಚನೆಯನ್ನು ಮಾಡುವ ನೆವದ ವೆಲ್ಲಗೊಂಡದ ಮಹಾದೇವನು ಒಂದು ದಿನ ಮೈಮರೆದು ನಿದ್ರೆಯಲ್ಲಿದ್ದು ಎದ್ದಾಗ ಸೂರನುದಿಸಿರುವುದನ್ನು ಕೆಂ ಡು ಕಾಲಮಿಾರಿತೆಂದು ಭಯದಿಂದ ತನ್ನ ಕಣ್ಣನ್ನೆ ಕಳಚಿ, ಮತ್ತೆ ಶಿವಾ ನುಗ್ರಹದಿಂದ ಪಡೆದನು, ಮತ್ತೂ ತನ್ನ ಗುರುವಾದ ಪಂಡಿತಾರಾಧ್ಯರ ಪೂಜೋಪಕರಣಗಳನ್ನು ತನ್ನ ಕಾಲು ಸೋಂಕಲು, ಅದನ್ನು ಕಡಿದು, ಮತ್ತೆ ಗುರುಕರುಣದಿಂದ ಪಡೆದನು. ಶಂಕರದಾಸಿಮಯ್ಯನು ಶಿವನಿಂದ ಅ ಗ್ನಿನೇತ್ರವನ್ನು ಪಡೆದು, ಅನ್ಸದೇವಾಲಯಗಳನ್ನು ಆಕಣ್ಣಿನಿಂದ ನೋಡಿ ಸು ಡುತ್ತಿದ್ದನು. ಈಶರಣನು ಸೂಜೆಯಕಾಯಕದಿಂದ ಜೀವಿಸುತ್ತಿರಲು, ಈ ತನು ಬಡವನೆಂದು ತಿಳಿದು ಜೇಡರದಾಸಯ್ಯನು ತನ್ನ ಮನೆಯ ಬತ್ತವನ್ನು ಕಳುಹಿಸಿಕೊಡಲು, ಅದನ್ನು ಕೈಯಲ್ಲಿ ಹಿಡಿದು, ಜೆಡರದಾಸಯ್ಯನ ಕಣ ಜದ ಬತ್ತವೆಲ್ಲಾ ಬಯಲಾಗುವಂತೆವಾಡಿ, ಅವನು ಬಂದ ಕೊಂಡಾಡ ಲು, ಮತ್ತೆ ಎಂದಿನಂತೆ ಬತ್ತವನ್ನುಂಟುಮಾಡಿದನು. ಈ ಮಹಿಮನ ಮುಂ ದೆ ಮಸಣದಮಾರಯ್ಯನು ಒಬ್ಬ ಮಸಣಿಯನ್ನು ಕುಣಿಸಲು, ನನ್ನ ಮುಂದೆ ಮಸಣಿಯ? ಎಂದು ದಾಸಿಮಯ್ಯನು ಕಿಡಿಗಣ್ಣನ್ನು ಬಿಡಲು, ಅದನ್ನು ಮ ಸಣಿಯು ಬೆರಳಿನಿಂದ ಊಾಂಟ ನುಂಗಲು, ಅದನ್ನು ಶಿಕ್ಷಿಸಿ, ಅದರ ಮುಖ ದಿಂದ ಕಿಡಿಗಣ್ಣನ್ನು ಮಾರಯ್ಯನಮೇಲೆಯೇ ಉಗುಳಿಸಿದನು, ಸನ್ಯಾಸಿಯಂ