ಪುಟ:ಚೆನ್ನ ಬಸವೇಶವಿಜಯಂ.djvu/೪೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲಜ್ಞಾನವು. ತಿಂ ಯು, ಅದಕ್ಕಿಂತ ಪರವಾದ ಮುಕ್ತಿಯಿಲ್ಲವೆಂಬುದೇ ಸಿದ್ಧಾಂತವು. ಇದೇ ಪ್ರಟ್ಟಲಮಾರ್ಗಾಚರಣೆಯೆಂದು ಕೆನ್ನಬಸವೇಶನು ನಿರೂಪಿಸಿದನೆಂಬಿಲ್ಲಿಗೆ ಎಂಟನೆ ಅಧ್ಯಾಯವು ಸಂಪೂರ್ಣವು. –****- ೯ ನೆ ಅಧ್ಯಾಯವು. ಕಾ ಲಜ್ಞಾ ನ ವು - ಚೆನ್ನಬಸವೇಶನು ನಿರೂಪಿಸಿದ ಪಟ್ಟಅತತ್ತ್ವವನ್ನೆಲ್ಲಿ ಸಿದ್ದರಾ ಮೇಶನು ಕೇಳಿ, ( ಗುರುವೆ ! ತನ್ನನುಗ್ರಹದಿಂದ ಪಟ್ಟಲತತ್ವ ನ್ನು ತಿಳಿದು ಕೃತಕೃತ್ಯನಾದೆನು ? ಎಂದು ಕೊಂಡಾಡುತ್ತಿರುವಲ್ಲಿ, ಅಲ್ಲ ಮಪ್ರಭುವು - ಎಲೆ ಸಿದ್ಧರಾಮರೆ, ನೀನಿಲ್ಲಿಗೆ ಬಂದುದು ಸಫಲವಾಯಿತು. ನಾವಿನ್ನು ಹೊರಡುತ್ತೇವೆ ಯೆನ್ನಲು, ಪ್ರಭುವೆ ! ತಮ್ಮಿಂದ ನಾನು ಇಂ ತಪ್ಪ ಗುರುವನ್ನು ಪಡೆದಹಾಗಾಯಿತು, ಎಂದು ಕೃತಜ್ಞತೆಯಿಂದ ಪ್ರಭು ವಿನ ಪಾದಕ್ಕೆರಗಿ ಕೊಂಡಾಡಿದನು. ಆಗ ಚೆನ್ನಬಸವೇನು ಪ್ರಭುವನ್ನೂ ಸಿದ್ದರಾಮನನ್ನೂ ಅಲ್ಲಿದ್ದ ಅಬಿಲಗಣಸಮೂಹವನ್ನೂ ತನ್ನ ಮನೆಗೆ ಕರೆ ದುಕೊಂಡು ಹೋಗಿ, ಎಲ್ಲರಿಗೂ ಮೃಷ್ಟಾನ್ನ ಭೋಜನದಿಂದ ತೃಪ್ತಿ ಪಡಿ ನಿದನು. ಆಗ ಅಲ್ಲಮನು ಬಸವಾದಿ ಪ್ರಮಥರನ್ನೆಲ್ಲ ಕುರಿತು- ನೀವುಗಳ ಲ್ಲರೂ ಚೆನ್ನಬಸವೇಶನು ಅನುಗ್ರಹಿಸಿದ ಪಟ್ಟಲಮಾರ್ಗವನ್ನು ಚೆನ್ನಾಗಿ ತಿಳಿದುಕೊಂಡು ಅದರಂತೆ ಆಚರಿಸುತ್ತಿದ್ದರೆ, ನಾವು ಮತ್ತೆ ಬಂದು ನಿನ್ನ ಗೆ ಮುಕ್ತಿಯನ್ನು ಕೊಡುವೆವು ಎಂದು ಹೇಳಿ ನಂಬುಗೆಗೊಟ್ಟು, ಬಸ ವೇಶ ಚೆನ್ನಬಸವೇಶ ಸಿದ್ಧರಾಮೇಶ ಮೊದಲಾದವರನ್ನೆಲ್ಲ ಅಲ್ಲೇ ನಿಲ್ಲಿಸಿ, ತಾನು ಹೊರಟನು. ಬಳಿಕ ಸಿದ್ದರಾಮೇಶನು ಚೆನ್ನಬಸವೇಶನಿಗೆ ನಮ ಸ್ಮರಿಸಿ, ನನಗೆ ಬುದ್ದಿ ವಾದವನ್ನಪ್ಪಣೆ ಕೊಡಿಸಬೇಕೆಂದು ಬೇಡಲು, “ ನೀನು ಸೊನ್ನಲಾಪುರದಲ್ಲಿ ಸಮಾಧಿಸ್ಥನಾಗಿರು ” ಎಂದು ಅಪ್ಪಣೆ ಮಾ ಡಿದನು, ಅವನು ಮತ್ತೆ ನಮಸ್ಕರಿಸಿ, ಮುಂದೆ ನಡೆಯುವ ವಿಶೇಷ ಸಂಗ