ಪುಟ:ಚೆನ್ನ ಬಸವೇಶವಿಜಯಂ.djvu/೪೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ರಿ ಚೆನ್ನಬಸವೇರ್ಳಜಯಂ (ಕಾಂಡ ೫) ಅಧ್ಯಾಡು ರರಾಗಿಯೇ ಇರುವಿರೋ ? ?” ಎಂದು ಕೇಳುವೆವು, ಅವರಾದರೋ“ ನೀವು ಮತ್ತೆ ಇಲ್ಲಿಗೆ ಬರುವವರೆಗೂ ನಾವು ನಮ್ಮ ಗುರುವಿತ್ರ ಪ್ರಸಾದ ವನ್ನು ಸೇವಿಸುತ್ತ ಕಲ್ಲಾಪಟ್ಟಣದಲ್ಲಿ ಗೂಢವಾಗಿರುವೆವು” ಎಂದು ಹೇಳಲು, ರುದ್ರಮುನಿ ಮೊದಲಾದ ಚರಮರಿಗಳಿಗೆ ನಾವು ನಮಸ್ಕರಿಸಿ ಕಳುಹಿಕೊಟ್ಟು, ಬಳಿಕ ನಾವು ಬರುವವರೆಗೂ ನೀನು ಸೊನ್ನಲಾಪುರಕ್ಕೆ ಹೋಗಿ ಶಿವಯೋಗಸಮಾಧಿಯಲ್ಲಿರೆಂದು ನಿನಗೆ ಹೇಳಿ ಕಳುಹಿಕೊಟ್ಟು, ಮರೆತುಬಂದಿರುವ ಹಾವುಗೆಯನ್ನು ತೆಗೆದುಕೊಂಡುಬಾರೆಂದು ರೇಚಣ್ಣ ನಿಗೆ ಹೇಳಿ ಕಳುಹಿಸಿ, ಅಕ್ಕ ನಾಗಾಂಬಿಕೆಯೊಡನೆ ಇತರ ಶರಣರನ್ನೆಲ್ಲ ನಿ ರವಯವವನ್ನೇದಿಸಿ, ಕಡೆಗೆ ನಾವು ಬಯಲಾಗುವೆವು, ಆಗ ಭೂಲೋಕ ದಲ್ಲುಳಿದ ಜಂಗಮರೆಲ್ಲ ನಾನಾ ದಿಕ್ಕುಗಳಿಗೆ ಚದರಿಹೋಗಲು, ಚರಪತಿಗಳು ಮಾತ್ರ ಕಲ್ಯಾಣದಲ್ಲುಳಿದು ಗೋಪ್ಯದಿಂದಿರುವರು. ಅವರಲ್ಲಿ ರುದ್ರಮುನಿ ತಂದೆಯು ತನ್ನ ಶಿಷ್ಯನಾದ ಮುಕ್ತಿಮುನಿಯನ್ನು ಕುರಿತು-ನೀನು ದೇಶಾ ಟನವನ್ನು ಮಾಡುತ್ತ, ಪರವಾದಿಗಳನ್ನು ಜೈನಿ, ಶಿವಶರಣರನ್ನು ರಕ್ಷಿಸಂ (ದು ಹೇಳಿಕಳುಹುವನು. ಅದೇನೊರೆಗೆ ಮುಕ್ತಿಮುನಿಯು ಸಂಚರಿಸಿಕೊಂ ಡು, ಶ್ರೀಗಿರಿಯ ವಿಜ್ಞಾಸನಕ್ಕೆ ಬಂದು ನಿಂತು ಭಕ್ತರನ್ನು ಪೊರೆಯುವನು. ಅಲ್ಲಿಂದ ೫೬ ದೇಶಗಳಮೇಲೂ ಗಣಾಚಾರಿಗಳನ್ನು ನೇಮಿಸಿ ಕಳುಹಿ, ಸದಾ ಚಾರವನ್ನು ಬೋಧಿಸಿ,ತನ್ನಾಜ್ಞೆಯನ್ನು ಮಾರಿ ನಡೆದವರಿಂದ ಅಪರಾಧಕಾ ಣಿಕೆಗಳನ್ನು ತರಿಸಿಕೊಳ್ಳುತ್ತ, ಪರವಾದಿಗಳನ್ನು ಸಹ್ಮರಿಸುತ್ತಲಿರುವನು. ಅತ್ತ ಮಲೆನಾಡಿನಲ್ಲಿ ಜೈನದೊರೆಗಳು ಪ್ರಬಲಿಸಿ, ಅಲ್ಲಿದ್ದ ವೀರಭದ್ರೇಶರನ ನ್ನು ಕಿತ್ತು ನದಿಯಲ್ಲಿ ಬಿಸುಡಿದ್ದರು. ಈ ಸುದ್ದಿಯನ್ನು ಮುಕ್ತಿಮುನಿನಾಥ ನು ಕೇಳಿ, ಅಜಾತಭಿಕ್ಷಾವೃತ್ತಿಯಿಂಒ ತಮ್ಮ ಶಿಷ್ಯನಿಗೆ ತಮ್ಮ ಪಟ್ಟವನ್ನು ಕಟ್ಟಿ, ಕಾಜ್ಞೆಯನ್ನು ಕೊಟ್ಟು, ಇನ್ನೊಬ್ಬ ಶಿಷ್ಯನಾದ ದಿಗಂಬರನು ಕಿಮುನಿಯನ್ನು ಕರೆದು ನೀನು ಮಲೆನಾಡಿಗೆ ಹೋಗಿ ಪರವಾದಿಗಳನ್ನು ಸಕ್ಕರಿಸೆಂದು ಹೇಳಿ ಕಳುಹಿಸಿ, ತಾನು ಮಲ್ಲಿಕಾರ್ಜುನಲಿಂಗದಲ್ಲಿ ನಾಗುವನು. ಗುರುವಿನಾಜ್ಞೆಯಂತೆ ದಿಗಂಬರಮಕ್ಕಿಮುನಿಯು ಇನ್ನು ಕೆಲ ಚರಪತಿಗಳನ್ನು ಕೂಡಿಕೊಂಡು, ಮಲೆನಾಡಿಗೆ ಬಂದು, ಖಾಂಡದ ಲ್ಲಿ ನಿಂತು, ಅಲ್ಲಿನ ಜೈನರನ್ನೆಲ್ಲ ಸಹ್ಮರಿಸಿ, ಅವರ ಹಲ್ಲುಗಳನ್ನೆಲ್ಲ ಕಳೆಯಿ