ಪುಟ:ಚೆನ್ನ ಬಸವೇಶವಿಜಯಂ.djvu/೪೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ ಚನ್ನ ಬಸವೇಶವಿಭಯಂ (wಂಚ೫) [ಅಧ್ಯಾಯ ದು, ಅಲ್ಲಿ ಧೂಳಪವಾಡದವರು ಮೊದಲಾದ ೬೪ ಶೀಲದವರೂ ಇರುವರು ಸದಾಚಾರವೇ ಪ್ರಾಣವಾಗುಳ್ಳ ವೀರಶೈವಭಕ್ತರು ಮಾಹೇಶರರು ಪ್ರಸಾ ದಿಗಳು ಮೊದಲಾದವರು ಅಲ್ಲಿ ಅನಂತವಾಗಿರುವರು. ಆ ಪ್ರಾಂತದಲ್ಲಿ ಧನ ವಂತರಾದ ಸೆಟ್ಟಗಳು ಹೆಚ್ಚಾಗಿರುವುದರಿಂದ ಈ ಸೆಟ್ಟಿನಾಡು ೨೨ ಎನಿಸಿಕೆ ಇುವುದು, ಸಕಲಸೌಭಾಗ್ಯಕ್ಕೂ ನಿಧಿಯಾಗಿರುವುದರಿಂದ 'ಪ್ರಭುನಾಡು? ಎಂತಲೂ ಹೇಳಿಸಿಕೊಳ್ಳುವುದು, ಸಕಲ ವಿದ್ಯಾವೃದುಷ್ಯವುಳ್ಳ ಕರ್ನಾ ಟಕರಿಗೆ ನೆಲೆಯಾಗಿರುವುದರಿಂದ ಕನ್ನಡನಾಡು?” ಎಂತಲೂ ಕರಸಿಕೊ ಳ್ಳುವುದು, ಆ ದೇಶದಲ್ಲಿ ಸತ್ಯವ್ರತತತ್ಪರರಾದ ಜನರು ವಿಶೇಷವಾಗಿರುವು ದರಿಂದ ಅದು ಉಳಿದ ದೇಶಕ್ಕೆಲ್ಲ ಶ್ರೇಷ್ಠವಾಗಿರುವುದು, ಆ ದೇಶದಲ್ಲಿ. ಶಾಲಿವಾಹನಶಕ ಎಂಟುನೂರು ವರ್ಷ ಕಳೆದನಂತರ, ಬರುವ ವಿಳಂಬಿ ಸಂವತ್ಸರದ ಚೈತ್ರ ಶುದ್ಧ ದಶಮಿ ಗುರುವಾರದದಿನ ೧೨ ಗಳಿಗೆಯಲ್ಲಿ ಹೊ ಝಳಬಲ್ಲಾಳನಿಗೆ ಪಟ್ಟವಾಗುವುದು, ಅವನಾಳಿಕೆಯಿಂದ ಆ ರಾಜ್ಯಕ್ಕೆ ಹೊಯ್ಸಳರಾಜ್ಯವೆಂದು ಹೆಸರಾಗುವುದು, ಅವನೂ ಸೇರಿ ೯ ಮಂದಿ ಬ ಲ್ದಾಳರು ಅದನ್ನಾಳುವರು. ಅವರಲ್ಲಿ ವಿಷ್ಣುವರ್ಧನನೆಂಬುವನು ವೇಲಾಪು ರದಲ್ಲಿ ಒಂದು ಗುಡಿಯನ್ನು ಕಟ್ಟಿಸಿ, ಬೈಲಿನಲ್ಲಿ ಬಿದ್ದಿದ್ದ ಒಂದು ವಿಷ್ಣುವಿ ಗ್ರಹವನ್ನು ತರಿಸಿ, ಅಲ್ಲಿ ಪ್ರತಿಷ್ಠೆ ಮಾಡಿಸಿ, ಅಲ್ಲಿ ಹೊಲೆಯ ಮೊದಲಾಗಿ ೧೮ ಜಾತಿಯವರೂ ಒಟ್ಟಿಗೆ ಸೇವೆಯನ್ನೊಪ್ಪಿಸುವಂತೆ ಏರ್ಪಡಿಸು ವನು ಹಳೆಬೀ ಡೆಂಬ ಪಟ್ಟಣದಲ್ಲಿ ನರಸಿಹ ಬಲ್ಲಾಳನ ಹತ್ತಿರ ಗಣಕ (ಮುತ್ಸದ್ದಿ ) ರಲ್ಲಿ ಅಗ್ರಗಣ್ಯಾಧಿಕಾರವನ್ನು ವಹಿಸಿದ್ದ ಹರೀಶ್ವರದೇವ ನನ್ನು ಆ ಬಲ್ಲಾಳನು ಲೆಕ್ಕವನ್ನು ಕೇಳುವಲ್ಲಿ, ಆತನು ಕಡಿತವನ್ನು ಬಿಟ್ಟು ಕೈಯನ್ನು ಹೊಸಗುವನು. ಇದೇ ಒಂದು ದೊರೆಯು ಕೇಳಲು, ಹಂಪೆಯ ವಿರೂಪಾಕ್ಷ ದೇವಾಲಯದಲ್ಲಿ ದೀಪವು ಸೋಂಕಿ ತೆರೆಯು ಸು ಡುತ್ತಿದ್ದಿತು, ಅದನ್ನು ತಿಕ್ಕಿ ನಾನಾರಿಸಿದೆನೆಂದು ಹರೀಶ್ವರನ ಹೇಳು ವನು. ರಾಜನು- ಹಂಪೆಯಲ್ಲಿ? ನೀನೆಲ್ಲಿ? ಎಂದು ಆಕ್ಷಗಪಟ್ಟು, ಕೂ ಡಲೇ ಒಬ್ಬ ಆಳನ್ನು ಹಂಪೆಗೆ ಕಳುಹಿಸಿ, ವಿಚಾರ ಮಾಡಿಸುವಲ್ಲಿ, ಅಲ್ಲಿನ ಆರ್ಚಕರು ತೆರೆಸುಡುತ್ತಿದ್ದಾಗ ಹರಿಹರದೇವನು ಇಲ್ಲೇ ಇದ್ದು ಆರಿಸಿದ ನೊದು ಹೇಳಿ, ತೆರೆಯನ್ನೂ ತೋರಿಸುವರು. ಅದನ್ನು ತಿಳಿದುಬಂದು ಆಳು