ಪುಟ:ಚೆನ್ನ ಬಸವೇಶವಿಜಯಂ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೫ 4] ಚನ್ನಬಸವೇಶನ ಪವಾಡವು ಕೂಡ ಪ್ರಾಣಲಿಂಗಾಂಗಿಗಳೆನಿಸಿಕೊಳ್ಳುವರು, ಘಟ್ಟಿವಾಳಯ್ಯನೆಂಬ ಶರ ಣನು ತನ್ನ ಆತ್ಮಲಿಂಗವನ್ನು ತನ್ನ ಕಾಲ್ಗೆ ಕಟ್ಟಿಕೊಂಡು ನಡೆಯುತ್ತಿ ರಲು, ಜಂಗಮರು ಅದನ್ನು ಕಂಡು ಕಿತ್ತುಕೊಂಡರು. ಆತನು ಕೊರಲಿಗೆ ಒಂದು ದೊಡ್ಡ ಗುಂಡನ್ನು ಕಟ್ಟಿಕೊಂಡು ಊರ ಬಾಗಿಲಲ್ಲಿ ಅಡ್ಡಲಾಗಿ ನಿಂತುಕೊಂಡನು. ಇದರಿಂದ ಹೋಗಿ ಬರುವವರಿಗೆ ದಾರಿಯಿಲ್ಲದೆ ಹೋ ಯಿತು. ಆಗ ಜಂಗಮರು ಅವನ ಲಿಂಗವನ್ನವನಿಗೆ ಕೊಟ್ಟು ಬಿಟ್ಟರು. ಘಟ್ಟಿವಾಳಯ್ಯನಾದರೂ ಲಿಂಗದಲ್ಲಿ ಆ ಗುಂಡನ್ನು ಅಡಗಿಸಿದನು. ಈ ತನೇ ಲಿಂಗpಾಣಿಯೆನಿಸಿಕೊಳ್ಳುವನು, ಆ ಸೂಳಯ ನೀರಿನ ದಾಸಿ ಯೂ ಕೂಡ ಜಂಗಮಪ್ರಾಣಿಗಳೆನಿಸಿಕೊಳ್ಳುವರು. ಅವರುಗಳು ನಿನ್ನಂತೆ ಜಂಗಮನು ಮುಳಿಸಿಕೊಂಡು ಹೋದಮಾತ್ರದಿಂದಲೇ ಪ್ರಾಣವನ್ನು ಬಿ ಟ್ಟರೆ ? ಹಿಂದೆ ಕಿನ್ನರಯ್ಯನು ಪ್ರಾಣವನ್ನು ಬಿಟ್ಟಾಗ ನೀನೂ ಅವನೊ ಡನೆ ಪ್ರಾಣವನ್ನು ನಿಗಿದುದನ್ನೂ, ಮೇದರ ಕೇತಯ್ಯನೊಡನೆ ನೀನು ಪ್ರಾಣಬಿಟ್ಟುದನ್ನೂ ನಾವು ಅನುಚಿತವೆಂದು ಹೇಳುತ್ತೇವೆಯೆ ? ಇನ್ನು ಈ ಚರಿತ್ರದ ಸುದ್ದಿಯನ್ನು ಕೇಳಿ ಭೂಲೋಕದ ಭಕ್ತ ಮಾಹೇಶ್ವರರೂ, ನಿನ್ನೊಡನೆ ಛವಿ ಗವತರಿಸಿರುವ ಅಮರಗಣಂಗಳೂ ಸಹ ನಿನ್ನನ್ನು ನೋ ಡುವುದಕ್ಕಾಗಿ ಬರುತ್ತಾರೆ. ಈ ನಿನ್ನ ಮಕ್ಕಳಾಟಿಕೆ ಸಾಕಪ್ಪ ! ಎಂದು ಹೇಳಿ, ಚೆನ್ನಬಸವೇಶನು ಎಚ್ಚರಿಸಿ, ತನ್ನ ಮನೆಗೆ ತೆರಳ, ಶಿವಾನುಭವ ಗೋಷ್ಠಿಯಲ್ಲಿ ಸುಖದಿಂದಿದ್ದನು. ಇಂಥ ಶಿವಜ್ಞಾನಸಂಪನ್ನರ ಮಹಾಮಹಿಮರೂ ಆದ ಬಸವೇಶ ಚೆನ್ನಬಸವೇಶರನ್ನೂ, ಕೈಲಾಸದಿಂದವತರಿಸಿರುವ ನಾನಾ ಶಿವಗಣಂಗಳ ನ್ಯೂ, ಅಂತಪ್ಪ ಬಸವೇಶನನ್ನೇ ಮಂತ್ರಿಯನ್ನಾಗಿ ಪಡೆದಿರುವ-ಕಾರ ಣಾಂತರದಿಂದ ಧರೆಗೆ ಬಂದಿರುವ-ಶಿವಪುರದ್ವಾರಪಾಲಕನಾದ-ಬಿಜ್ಜಳರಾ ಜನನ್ನೂ ಹೊಂದಿರುವ ಆ ಕಲ್ಯಾಪಟ್ಟಣದ ಭಾಗ್ಯವನ್ನಿಷ್ಮೆಂದು ಹೇಳ ಬಹುದೆ ? ಇಂಥವರ ಅಧಿಕಾರಕ್ಕೊಳಪಟ್ಟ ಪ್ರಜೆಗಳ ಸದ್ಧರ ಸದಾ ಚಾರ ಸುನೀತಿ ಮೊದಲಾದುವುಗಳ ಪ್ರಾಶಸ್ಯವನ್ನು ಹೊಗಳುವುದಕ್ಕಾ ದೀತೆ ? ಆ ಪಟ್ಟಣದ ಜನಗಳಲ್ಲಿ ಸುಳ್ಳು ಕಳ್ಳತನ ಮೋಸ ಹಾದರ ವ ಕ್ಟರ ದ್ವೀಪ ಠಕ್ಕು ನಿಂದೆ ದುರ್ವಸನ ದುರಾಚಾರ ಅನ್ಯಾಯ ಕೃತ