ಪುಟ:ಚೆನ್ನ ಬಸವೇಶವಿಜಯಂ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಲ್ಲಮಪ್ರಭುವರಾಗಮನವು

೨ ನೆ ಕಾಂಡ, ಇ ೧ನೆ ಅಧ್ಯಾಯವು. ಶೈ ವ ಸ ಮ್ಮೆ ಕ ಮ ಬೋ ಧೆ. ಬಳಿಕ ಅಲ್ಲಮಪ್ರಭುವು ನಸುನಗುತ್ತ ಬಸವೇಶನನ್ನು ಕುರಿತು ಚೆನ್ನಬಸವೇಶನ ಮನೆಗೆ ಹೋಗುವ ನಡೆಯಿರೆಂದು ಹೇಳಿ, ಅಲ್ಲಿದ್ದ ಶಿವ ಗಣಂಗಳೆಲ್ಲರನ್ನೂ ಕೂಡಿಕೊಂಡು ಬಂದು, ಚೆನ್ನಬಸವೇಶನರಮನೆಯ ಹೊರಬಾಗಿಲ ಚೆಲ್ವಿಕೆಯನ್ನು ನೋಡಿ ಸಂತೋಷಪಟ್ಟು, ಪಕ್ಕದಲ್ಲಿ ಶೋಭಿಸುತ್ತಿದ್ದ ಸಭಾಮಂಟಪವನ್ನು ತೋರಿಸಲು, ಎಲ್ಲರ ಸಮೇತನಾಗಿ ಅಲ್ಲಿ ಕುಳಿತುಕೊಂಡು, ಚೆನ್ನಬಸವೇಶನನ್ನು ಕುರಿತು ಇದೇನಯ್ಯಾ ! ನಮ್ಮನ್ನು ಕರೆತಂದು ಅಂತಃಪುರಕ್ಕೆ ಕರೆದುಕೊಂಡು ಹೋಗದೆ ಇಲ್ಲೇ ಕುಳ್ಳಿರಿಸಿದೆ ? ಎಂದು ಪ್ರಭ-ರಾಯನು ಕೇಳಿದನು. ಟೆನ್ನಬಸವೇಶನಾ ದರೋ ನಸುನಗುತ್ತ, ಎಲೈ ಜಗವಿತ್ರನೇ ! ಪಟ್ಟಅತತಾರ್ಥವನ್ನು ಹೇಳಿದವರ ಹೊರತಾಗಿ ಇತರರನ್ನು ಒಳಗೆ ಬಿಡುವುದಿಲ್ಲವೆಂಬ ಕಟ್ಟಾಗಿ ರುವುದು, ತನ್ನೊಡನೆ ಒಂದಿರುವ ಸಿದ್ದರಾಮಯ್ಯನಿಗೆ ಶರೀರದಲ್ಲಿ ಇಪ್ಪ ಲಿಂಗಧಾರಣೆಯೇ ಇಲ್ಲ. ಇಂಥ €ಂಗವಿಹೀನರನ್ನು ಲಿಂಗಾಂಗಿಗಳು ತಮ್ಮ ಮ ತೆಯೊಳಗೆ ಬರಗೊಡಿಸರು, ಅದುಕಾರಣವೇ ಇಲ್ಲಿ ಕುಳಿತು ಕೊಳ್ಳಬೇಕಾದಿತೆಂದು ನುಡಿದನು. ಈ ಮಾತನ್ನು ಸಿದ್ದರಾಮೇಶನು ಕೇಳಿ, ಎಲೆ ಚೆನ್ನಬಸವಣ್ಣನೇ ! ನಾನು ಪ್ರಾಣಲಿಂಗಿಯಾಗಿರುವಾಗ ಇನ್ನು ಆತ್ಮಲಿಂಗವೇತಕ್ಕೆ? ಎಂದನು. ಆಗ ಚೆನ್ನ ಬಸವೇಶನು ನಕ್ಕು, ಅಯ್ಯಾ ! ನೀನು ಅದು ಹೇಗೆ ಪ್ರಾಣಲಿಂಗಿಯಾದೆ ? ಇದು ಬರಿಯ ಭ್ರಾಂತಿಯೇ ಸರಿ. ಯಾವನು ಸ್ಕೂಲಸೂಕ್ಷ್ಯ ಕಾರಣವೆಂಬ ಶರೀರತ್ರ ಯಗಳನ್ನು ಧರಿಸಿರುವನೋ ಅವನ ತ್ರಿವಿಧದೇಹದಲ್ಲೂ ಇಹ್ಮಪ್ರಾಣ ಭಾವಲಿಂಗಗಳು ನೆಲನಿರಲೇಬೇಕು. ನಿನ್ನ ಸ್ಕೂಲಕರೀರದಲ್ಲೆ ಇಮ್ಮ ಲಿಂಗವಿಲ್ಲದ ಬಳಿಕ ಇನ್ನು ಉಳಿದೆರಡು ದೇಹಗಳಲ್ಲಿ ಎರಡು ವಿಧದ ಲಿಂಗ ಗಳು ನೆಲಸಿರುವುದು ಹೇಗೆ ? ಎಂದನು, ಆಗ ನಿದ್ದ ರಾಮೇಶನು