ಪುಟ:ಚೆನ್ನ ಬಸವೇಶವಿಜಯಂ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚನ್ನಬಸವೇಕವಿಜಯಂ (ಕಾಂಗ ೨) [ಅಧ್ಯಾಯ ಹೇಳಿದರೆ ಅದನ್ನು ಹೇಗೆ ನಂಬುವ್ರದು ? ಎಂದು ದೂಷಿಸುತ್ತಿರುವ ಲ್ಲಿ ಗಾಢಾಂಧಕಾರವನ್ನು ತೊಲಗಿಸಲು ಉದಯಿಸುವ ಮಾಗ್ವಾಂಡಮಂ ಡಲದಂತೆಯೂ, ಅಜ್ಞಾನವನ್ನು ಹೋಗಲಾಡಿಸಿ ತಂದ ಸುಜ್ಞಾನದಂ ತೆಯೂ ಪಂಚಮುಖ ದಶಭುಜ ಜಟಾಪಟಲ ಚಂದ್ರ ರೇಖೆ ಚರಾಂಬ ರ ಮೊದಲಾದುವುಗಳಿಂದೊಪ್ಪುವ ಜ್ಯೋತಿಯನಾದ ಪರಶಿವನು `ಬ್ರಹ್ಮನ ಮುಂದೆ ಪ್ರತ್ಯಕ್ಷನಾದನು. ಆಗ ಇಂದ್ರಾದಿದೇವತೆಗಳೆಲ್ಲರೂ ಅಭಿವಂದಿಸಿದರು. ಬ್ರಹ್ಮನು ಆ ಮಹಾಸ್ವಾಮಿಯನ್ನು ನೋಡಿ, ಇವನೆ ಯೋ ಜಗದೀಶರ ? ಬಲು ಚೆನ್ನಾಯಿತು ! ಇವನ ವೇಷವನ್ನು ನೋಡಿ ನಕ್ಕು ನಕ್ಕು ನನ್ನ ಹೊಟ್ಟೆಯೆಲ್ಲ ನೋಯುತ್ತಿರುವುದು ! ಸಾಕು, ನೀವೇ ನೋಡಿರಿ, ಎಂದು ಹೇಳಿ, ಕೆಲಬಲದವರ ಮೇಲೆ ಕೈಹೊಯ್ದು ನಕ್ಕು ಗೇಲಿ ಮಾಡಿ, ತಿರಿಕನಿಗೆ ಮಾನವೆಂದರೇನು ? ತಲೆಯ ಮಾಲಿಕೆಯನ್ನು ಕಟ್ಟಿಕೊಂಡಿರುವ ಗೊರವನಿಗೆ ಮಹಿಮೆಯೆಂದರೇನು ? ಸರ್ವಾಭರಣನಿ ಗೆ ಸ್ಥಿರತವೆಲ್ಲಿ -ವುದು ? ಸ್ಮಶಾನವಾನಿಗೆ ಶುಭವೆಲ್ಲುಂಟು ? ಈ ಹುಚ್ಚ ನಿಗೆ ತಾನು ೫ ಮುಖವನ್ನು ಧರಿಸಿರುವೆನೆಂಬ ಅಹಂಕಾರವೊಂದಿರಬಹ ದು ! ಇದಾವ ಮಹಾಘನ ? ೫ ತಿ' ಸ್ಪನ್ನ ನಾನೂ ಧರಿಸಿಕೊಳ್ಳುತ್ತೇನೆ ನೋಡಿರೆಂದು ಮತ್ತೊಂದು ತಿ-ಸ್ವನ್ನು ಸೃಜಿಸಿ ಸಂಚರಸ್ಕನಾಗಿ, ಮತ್ತೆ ಶಿವನನ್ನು ಜರೆಯಲು ತೊಡಗಿ- ನೀನೇ ಸಕಲ ಜಗದಾಧಾರನಂತೆ ! ಈ ದೇವತೆಗಳಿಗೆಲ್ಲ ನಿನೇ ಕನಂತೆ ! ವೇದಗಳೆಲ್ಲ ನಿನ್ನ ಹೊಗಳುವು ವಂತೆ! ನಿನ್ನೆ ಪರಬ್ರಹ್ಮನಂತೆ! ನೀನೆಲ್ಲಿ ಹಳ್ಳಿದೆ? ನಿನಗೆ ತಾಯ್ತಂದೆ ಗಳಾರು ” ಎಂದು ಗೇಲಿಮಾಡಿದನ, (ಈ ನಿಂದಾ ಪರಿಹಾಸವಚನಗಳೆಲ್ಲ ಆ ಪರವಾನನ್ನು ಹೊಗಳುವ ವಚನವಾಗಿಯೇ ಕಾಣುತ್ತಿರುವಲ್ಲಿ ಆತ ನ ಘನವು ಎವೆಯು ಎಂತಹುದು ! ) ಬಳಿಕ ಬ್ರಹ್ಮನು ಇನ್ನೊಂದು ವಿ ಧವಾಗಿ ಜರೆದುದೂ ಸಾಲದೆ, ಮತ್ತೂ “ ನೀನು ಈ ವೇಪಾಡಂಬರವನ್ನೆ ಲ್ಲ ಬಿಟ್ಟು ನನ್ನ ಮರೆಹೊಕ್ಕರೆ ನಿನಗೆ ಬೇಕಾದ ಉತ್ತಮಪದವಿಯನ್ನು ಕೊಡುತ್ತೇನೆ ಬದುಕು; ಹಾಗಲ್ಲದಪಕ್ಷದಲ್ಲಿ ಈಗಳೆ ನಿನ್ನನ್ನು ಬಡಿ ದು ಪ್ರಾಣವು ನೆತ್ತಿಯಿಂದ ಹೋಗುವಂತೆ ಮಾಡುತ್ತೇನೆ ನೋಡು ೨೨ ಎಂ `ದು ಹೇಳಿ, ಘುಡುಘುಡಿಸಿ ಕೈಯನ್ನು ಮೇಲಕ್ಕೆತ್ತಿದನು. ಆಗ ದೇವತೆಗ